ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಚಂಡಮಾರುತವಾಗಿ ಬದಲಾಗಲಿದ್ದು, ಚಂಡಮಾರುತದ ಪರಿಣಾಮ ಅಕ್ಟೋಬರ್ 24-25 ರಂದು ತೀರ ಪ್ರದೇಶಗಳಲ್ಲಿ ಕಂಡುಬರಲಿದ್ದು, 100-110 ಕಿಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ.
ಅಮರಾವತಿ/ ಭುವನೇಶ್ವರ್: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಬುಧವಾರದ ವೇಳೆಗೆ ಅದು ಚಂಡಮಾರುತವಾಗಿ ಬದಲಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತದ ಪರಿಣಾಮ ಪಶ್ಚಿಮ ಬಂಗಾಳ, ಒಡಿಶಾದ ತೀರ ಪ್ರದೇಶಗಳಲ್ಲಿ ಅ.24ರ ರಾತ್ರಿ ಹಾಗೂ 25ರ ಮುಂಜಾನೆ ವೇಳೆ ಹಾದು ಹೋಗಲಿದ್ದು, ಈ ವೇಳೆ 100-110 ಕಿಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆ ಇದೆ ಎಂದು ಐಎಂಡಿ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯೊಳಗೆ ದಡ ಸೇರುವಂತೆ ಮೀನುಗಾರರಿಗೆ ಸೂಚಿಸಲಾಗಿದೆ.
ಚಂಡಮಾರುತಕ್ಕೆ ಡಾನಾ ಎಂದು ಹೆಸರಿಡಲಾಗಿದೆ. ಚಂಡಮಾರುತದ ಪ್ರಭಾವ ಒಡಿಶಾದ ಮೇಲೆ ಅಧಿಕವಾಗಿರಲಿದ್ದು, ಭಾರೀ ಗಾಳಿ ಮಳೆಯಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕೆಲ ಪ್ರದೇಶಗಳಿಗೆ ಕೆಂಪು, ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಕೆಲ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲಾಗಿದೆ. ರಾಷ್ಟ್ರಪತಿಗಳ 3 ದಿನಗಳ ಒಡಿಶಾ ಭೇಟಿ ಕೂಡಾ ಮುಂದೂಡಲಾಗಿದೆ.
ಅಕಾಲಿಕ ಮಳೆಗೆ ರೈತರ ಬೆಳೆಹಾನಿ, ಉಡಾಫೆ ಉತ್ತರ ಕೊಟ್ಟ ಕೃಷಿ ಸಚಿವರಿಗೆ ತಿವಿದ ಆರ್. ಅಶೋಕ್!
ಬಂಗಾಳ ಕೊಲ್ಲಿಯಲ್ಲಿ ಅ.23ರಂದು ಚಂಡಮಾರುತ ಬೀಸುವ ಸಾಧ್ಯತೆ ಇದೆ. ಇದರಿಂದ ಪ.ಬಂಗಾಳ, ಒಡಿಶಾ ಹಾಗೂ ಆಂಧ್ರಪ್ರದೇಶದಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ.ಅಂಡಮಾನ್ ಸಮುದ್ರದ ಬಳಿ ವಾಯುಭಾರ ಕುಸಿತ ಉಂಟಾಗಿದ್ದು ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವಾಗಿ ಪರಿವರ್ತನೆ ಆಗುವ ಸಾಧ್ಯತೆಯಿದೆ. ಒಂದು ವೇಳೆ ಚಂಡಮಾರುತ ಅಪ್ಪಳಿಸಿದರೆ ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಅ.23 ರಿಂದ 25ರ ವರೆಗೆ 20 ರಿಂದ 30 ಸೆ.ಮೀ ವರೆಗೂ ಭಾರೀ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹೇಳಿದೆ.