ತನ್ನಿಂದ ಅತ್ಯಾಚಾರಕ್ಕೊಳಗಾದ ವಧುವಿನ ಅಪಹರಣಕ್ಕೆ ಕತ್ತಿ ಹಿಡಿದು ಬಂದ

Published : Jun 01, 2024, 04:27 PM ISTUpdated : Jun 01, 2024, 04:48 PM IST
ತನ್ನಿಂದ ಅತ್ಯಾಚಾರಕ್ಕೊಳಗಾದ ವಧುವಿನ ಅಪಹರಣಕ್ಕೆ ಕತ್ತಿ ಹಿಡಿದು ಬಂದ

ಸಾರಾಂಶ

ಯುವತಿ ಸಲೀಂ ಖಾನ್‌ನಿಂದ ಹಲವು ಬಾರಿ ಅತ್ಯಾಚಾರಕ್ಕೊಳಗಾಗಿದ್ದರು. ಕುಟುಂಬಸ್ಥರು ಯುವತಿಗೆ ಬೇರೊಬ್ಬ ಯುವಕನ ಜೊತೆ ಮದುವೆ ನಿಶ್ಚಯ ಮಾಡಿದ್ದರು. ಈ ವಿಷಯ ತಿಳಿದ ಸಲೀಂ ಖಾನ್ ಯುವತಿ ಪೋಷಕರ ಮೇಲೆಯೂ ಹಲ್ಲೆ ನಡೆಸಿದ್ದನು. 

ಭೋಪಾಲ್: ವ್ಯಕ್ತಿಯೋರ್ವ ಕೈಯಲ್ಲಿ ಕತ್ತಿ (Sword) ಹಿಡಿದುಕೊಂಡು ಮದುವೆ ಮಂಟಪಕ್ಕೆ (Wedding Venue) ನುಗ್ಗಿ ವಧುವನ್ನು ಅಪಹರಿಸಲು ಪ್ರಯತ್ನಿಸಿ (Kidnap Attempt) ವಿಫಲವಾಗಿದ್ದಾನೆ. ಮಧ್ಯಪ್ರದೇಶದ ಅಶೋಕನಗರದಲ್ಲಿ (Ashoknagar, MadhyaPradesh) ನಡೆದಿದೆ. ಅಪಹರಣಕ್ಕೆ ಮುಂದಾಗಿದ್ದ ವ್ಯಕ್ತಿ ಮದುವೆಯಾಗುತ್ತಿದ್ದ ಯುವತಿಯನ್ನು (Bride) ಹಲವು ಅತ್ಯಾಚಾರ ನಡೆಸಿದ್ದನು ಎಂದು ವರದಿಯಾಗಿದೆ.

ಕಲು ಅಲಿಯಾಸ್ ಸಲೀಂ ಖಾನ್ ವಧುವಿನ ಅಪಹರಣಕ್ಕೆ ಮುಂದಾಗಿದ್ದ ಅರೋಪಿ. ಯುವತಿ ಸಲೀಂ ಖಾನ್‌ನಿಂದ ಹಲವು ಬಾರಿ ಅತ್ಯಾಚಾರಕ್ಕೊಳಗಾಗಿದ್ದರು. ಕುಟುಂಬಸ್ಥರು ಯುವತಿಗೆ ಬೇರೊಬ್ಬ ಯುವಕನ ಜೊತೆ ಮದುವೆ ನಿಶ್ಚಯ ಮಾಡಿದ್ದರು. ಈ ವಿಷಯ ತಿಳಿದ ಸಲೀಂ ಖಾನ್ ಯುವತಿ ಪೋಷಕರ ಮೇಲೆಯೂ ಹಲ್ಲೆ ನಡೆಸಿದ್ದನು. 

ಫೋನ್‌ ಬಳಸಲು ಬಿಡದ ಪತಿಗೆ ನಿದ್ರಾ ಮಾತ್ರೆ ನೀಡಿ, ಮಂಚಕ್ಕೆ ಕಟ್ಟಿ ಹಾಕಿ ಕರೆಂಟ್ ಶಾಕ್ ಕೊಟ್ಟು ಹಿಂಸಿಸಿದ ಪತ್ನಿ!

ಮೂವರು ಸಹಚರ ಜೊತೆ ನುಗ್ಗಿದ್ದ ಸಲೀಂ ಖಾನ್

ಮದುವೆ ದಿನ ಮೂವರು ಸಹಚರರೊಂದಿಗೆ ನುಗ್ಗಿದ ಸಲೀಂ ಕತ್ತಿ ತೋರಿಸಿ ಯುವತಿಯನ್ನು ಅಪಹರಿಸಲು ಮುಂದಾಗಿದ್ದನು. ಸಹಚರರನ್ನು ಜೋಧಾ, ಶಾರೂಖ್ ಮತ್ತು ಸಮೀರ್ ಎಂದು ಗುರುತಿಸಲಾಗಿದೆ. ಸಲೀಂ ಸಹಚರರು ಸಹ ಕೈಯಲ್ಲಿ ಕಬ್ಬಿಣದ ರಾಡ್ ಮತ್ತು ಕುಡುಗೋಲು ಹಿಡಿದುಕೊಂಡಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸಲೀಂ ಆಂಡ್ ಗ್ಯಾಂಗ್ ಯುವತಿಯನ್ನು ರಸ್ತೆಗೆ ಎಳೆದುಕೊಂಡು ಬರುತ್ತಿದ್ದಂತೆ ಸುತ್ತಮುತ್ತಲಿನ ಜನರು ಸೇರಿದ್ದಾರೆ. ಜನರು ಸೇರುತ್ತಿದ್ದಂತೆ ಭಯಭೀತರಾದ ದುಷ್ಕರ್ಮಿಗಳು ಯುವತಿಯನ್ನು ಬಿಟ್ಟು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. 

ಎರಡು ಪ್ರತ್ಯೇಕ ಎಫ್ಐಆರ್ ದಾಖಲು 

ಘಟನೆ ನಡೆದ ಆರು ಗಂಟೆ ಬಳಿಕ ಪೊಲೀಸರು ಯುವತಿ ಮತ್ತು ಆಕೆಯ ತಂದೆಯ ದೂರಿನ ಮೇರೆಗೆ ಎರಡು ಪ್ರತ್ಯೇಕ ಎಫ್‌ಐಆರ್  ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಅನ್ಯಕೋಮಿನ ವ್ಯಕ್ತಿ ಮದುವೆಯಾಗಿದ್ದ ಮಹಿಳೆ ಸೇರಿ, ಒಂದೇ ಕುಟುಂಬದ ಮೂವರು ಶವವಾಗಿ ಪತ್ತೆ!

ಪ್ರತ್ಯೇಕ ಪ್ರಕರಣ; ಎಂಟು ಜನರ ಕೊಲೆ

ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಕುಟುಂಬದ ಎಂಟು ಮಂದಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾನೆ. ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಮೇ 29ರ ಬೆಳಗಿನ ಜಾವ ನಡೆದಿತ್ತು. ರಾತ್ರಿ ಈ ಸಾಮೂಹಿಕ ಕೊಲೆ ನಡೆದಿತ್ತು. ಮನೆಯಲ್ಲಿದ್ದ ಒಂದು ಮಗು ಓಡಿ ಹೋದ ಕಾರಣ ಅದು ಬದುಕುಳಿದಿತ್ತು. ರಾತ್ರಿ ಎಂಟು ಕೊಲೆ ನಡೆದರೂ ನೆರೆಹೊರೆಯವರಿಗೆ ತಿಳಿದಿಲ್ಲ. ಎಂಟು ಕೊಲೆ ಮತ್ತು ಒಂದು ಆತ್ಮಹತ್ಯೆಯಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌