ಕಳೆದ ಮೂರು ಲೋಕಕದನದಲ್ಲಿ ಎಕ್ಸಿಟ್‌ ಪೋಲ್‌ ಹೇಳಿದ್ದು ನಿಜವಾಗಿತ್ತೇ? ಇಲ್ಲಿದೆ ಮಾಹಿತಿ..

By Santosh Naik  |  First Published Jun 1, 2024, 4:36 PM IST

ಬರೋಬ್ಬರಿ ಒಂದೂವರೆ ತಿಂಗಳ ಕಾಲ ನಡೆದ ಲೋಕಸಭೆ ಚುನಾವಣೆಯ ( Lok Sabha Elections 2024) ಮತದಾನಕ್ಕೆ ಶನಿವಾರ ತೆರೆ ಬಿದ್ದಿದೆ. ಇನ್ನೇನಿದ್ದರೂ ಜೂನ್‌ 4ರ ಫಲಿತಾಂಶದತ್ತ ಎಲ್ಲರ ಕಣ್ಣುನೆಟ್ಟಿದೆ. ಅದಕ್ಕೂ ಮುನ್ನ ಎಕ್ಸಿಟ್‌ ಪೋಲ್‌ನಲ್ಲಿ (Exit Poll Results) ಏನಾಗಲಿದೆ ಅನ್ನೋ ಕುತೂಹಲವೂ ಎಲ್ಲರಲ್ಲಿದೆ.


ನವದೆಹಲಿ (ಜೂನ್‌ 1): ಕೊನೆಗೂ 43 ದಿನಗಳ ಕಾಲ ನಡೆದ ಲೋಕಸಭೆ ಚುನಾವಣೆಯ (Lok Sabha Elections 2024) ಕದನ ಕಣಕ್ಕೆ ಶನಿವಾರ ತೆರೆಬಿದ್ದಿದೆ. ಏಪ್ರಿಲ್‌ 19 ರಂದು ಮೊದಲ ಹಂತದ ಚುನಾವಣೆಯೊಂದಿಗೆ ಆರಂಭವಾಗಿದ್ದ 2024ರ ಲೋಕಸಮರ, ಶನಿವಾರದ 7ನೇ ಹಂತದ ಚುನಾವಣೆಯೊಂದಿಗೆ ಅಂತ್ಯವಾಗಿದೆ. ಈಗ ಎಲ್ಲರ ಗಮನ ಜೂನ್‌ 4ರ ಫಲಿತಾಂಶದತ್ತ (Election 2024 Results) ನೆಟ್ಟಿದೆ. ಅದಕ್ಕೂ ಮುನ್ನ, ಶನಿವಾರ ಚುನಾವಣೆ ಮುಗಿದ ನಂತರ ತಕ್ಷಣವೇ ಪ್ರಕಟವಾಗಲಿರುವ ಎಕ್ಸಿಟ್‌ ಪೋಲ್‌ನತ್ತ ( Exit Poll Results 2024) ಎಲ್ಲರ ಗಮನವಿದೆ. ಚುನಾವಣೆಯ ಅವಧಿ ಅಧಿಕೃತವಾಗಿ ಅಂತ್ಯವಾದ ಬಳಿಕ ದೇಶಾದ್ಯಂತ ಎಕ್ಸಿಟ್‌ ಪೋಲ್‌ಗಳ ಭರಾಟೆ ಆರಂಭವಾಗಲಿದೆ. ಜೂನ್‌ 1 ರಿಂದ ಜೂನ್‌ 4ರ ಫಲಿತಾಂಶ ದಿನಾಂಕ ದಿನದಂದು ಇರುವ ಸಂಪೂರ್ಣ ಸಮಯವನ್ನು ರಾಜಕಾರಣಿಗಳು ವೆಚ್ಚ ಮಾಡುವುದು ಇದೇ ಎಕ್ಸಿಟ್‌ ಪೋಲ್‌ಗಳಿಂದ. ಯಾವ ಕ್ಷೇತ್ರದಲ್ಲಿ ನಾವು ಗೆಲ್ತೇವೆ, ಯಾವ ಕ್ಷೇತ್ರದಲ್ಲಿ ಹಿನ್ನಡೆಯಾಗಬಹುದು? ಒಟ್ಟಾರೆಯಾಗಿ ಪಕ್ಷ ಗೆಲ್ಲುವ ಸ್ಥಾನಗಳೆಷ್ಟು ಎನ್ನುವ ಎಲ್ಲ ಅಂದಾಜುಗಳನ್ನು ಎಕ್ಸಿಟ್‌ ಪೋಲ್‌ ನೀಡುತ್ತದೆ.  

ಹಾಗಿದ್ದಾಗ ಹಿಂದಿನ ಮೂರು ಚುನಾವಣೆಗಳ ಎಕ್ಸಿಟ್‌ ಪೋಲ್‌ಗಳು ಹೇಗಿದ್ದವು. ಎಕ್ಸಿಟ್‌ ಪೋಲ್‌ನಂತೆಯೇ ಚುನಾವಣೆಯ ಫಲಿತಾಂಶಗಳೂ ಬಂದಿದ್ದವೇ ಅನ್ನೋದನ್ನ ನೋಡೋದಾದ್ರೆ ಹೌದು ಅಥವಾ ಇಲ್ಲ ಎನ್ನಬಹುದು. 2014 ಹಾಗೂ 2019ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ದೊಡ್ಡ ಮಾರ್ಜಿನ್‌ನಲ್ಲಿ ಗೆಲುವು ಕಂಡಿತ್ತು. ಅದಲ್ಲದೆ, ಎಕ್ಸಿಟ್‌ ಪೋಲ್‌ನಲ್ಲಿಯೂ ಬಿಜೆಪಿ ಮುಂದಿತ್ತು. 2014ರಲ್ಲಿ ಏಪ್ರಿಲ್‌ 7 ರಿಂದ ಮೇ 12ರವರೆಗೆ ಲೋಕಸಭೆ ಚುನಾವಣೆ ನಡೆದರೆ, ಫಲಿತಾಂಶ ಮೇ 16ಕ್ಕೆ ಪ್ರಕಟವಾಗಿತ್ತು. 2019ರಲ್ಲಿ ಚುನಾವಣೆ ಏಪ್ರಿಲ್‌ 11 ರಿಂದ ಮೇ 19ರವರೆಗೆ ನಡೆದಿತ್ತು. ಫಲಿತಾಂಶ ಮೇ 23ಕ್ಕೆ ಪ್ರಕಟವಾಗಿತ್ತು.

2014ರಲ್ಲಿ ಎಕ್ಸಿಟ್‌ ಪೋನ್‌ನ ಸರಾಸರಿಯನ್ನು ಲೆಕ್ಕ ಹಾಕುವುದಾದರೆ, ಬಿಜೆಪಿ ನೇತೃತ್ವದ ಎನ್‌ಡಿಎ 283 ಸೀಟ್‌ ಗೆಲ್ಲುತ್ತದೆ ಎಂದು ಲೆಕ್ಕ ಹಾಕಲಾಗಿದ್ದರೆ, ಕಾಂಗ್ರೆಸ್‌ನೇತೃತ್ವದ ಯುಪಿಎ 1005 ಸೀಟ್‌ ಗೆಲ್ಲಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಎಕ್ಸಿಟ್‌ ಪೋಲ್‌ಗಳು ಕೂಡ ಆ ವರ್ಷದ ಮೋದಿ ಅಲೆಯನ್ನು ಅಂದಾಜು ಮಾಡಲಿ ವಿಫಲವಾಗಿತ್ತು. ಕೊನೆಗೆ ಎನ್‌ಡಿಎ 336 ಸೀಟ್‌ಗಳನ್ನು ಗೆಲುವು ಸಾಧಿಸಿದರೆ, ಯುಪಿಎ ಕೇವಲ 60 ಸ್ಥಾನ ಪಡೆದಿತ್ತು. ಇದರಲ್ಲಿ ಬಿಜೆಪಿಯೇ 282 ಸೀಟ್‌ಗಳಲ್ಲಿ ಗೆಲುವು ಕಂಡರೆ, ಕಾಂಗ್ರೆಸ್‌ 44 ಸೀಟ್‌ನಲ್ಲಿ ಜಯ ಸಾಧಿಸಿತ್ತು.

2019ರಲ್ಲೂ ಕೂಡ 13 ಎಕ್ಸಿಟ್‌ ಪೋಲ್‌ಗಳ ಸರಾಸರಿಯಲ್ಲಿ ಎನ್‌ಡಿಎಯ ಒಟ್ಟಾರೆ ಸಾಧನೆಯನ್ನು 306 ಎಂದು ಹೇಳಿದ್ದರೆ, ಯುಪಿಎ 120 ಸೀಟ್‌ನಲ್ಲಿ ಗೆಲ್ಲಬಹುದು ಎನ್ನಲಾಗಿತ್ತು. ಈ ಭಾರಿಯೂ ಎಕ್ಸಿಟ್‌ ಪೋಲ್‌ಗಳು ಎನ್‌ಡಿಎ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದವು. ಆದರೆ, ಫಲಿತಾಂಶದಲ್ಲಿ ಎನ್‌ಡಿಎ 353 ಸೀಟ್‌ನಲ್ಲಿ ಗೆಲುವು ಕಂಡರೆ, ಅದರಲ್ಲಿ ಬಿಜೆಪಿ ಪಾಲು 303 ಕ್ಷೇತ್ರವಾಗಿತ್ತು. ಇನ್ನು ಯುಪಿಎ 93 ಸೀಟ್‌ನಲ್ಲಿ ಜಯ ಕಂಡರೆ, ಅದರಲ್ಲಿ ಕಾಂಗ್ರೆಸ್‌ ಪಾಲು 52 ಕ್ಷೇತ್ರವಾಗಿತ್ತು.

ಲೋಕಸಭೆಗೆ ಇಂದು ಕೊನೆ ಹಂತದ ಮತದಾನ: ಇಂದು ಸಂಜೆ ಎಕ್ಸಿಟ್‌ಪೋಲ್‌

2009ರಲ್ಲೂ ಯುಪಿಎ 2ನೇ ಅವಧಿಗೆ ಅಧಿಕಾರ ಹಿಡಿದಾಹ ಎಕ್ಸಿಟ್‌ ಪೋಲ್‌ಗಳು ಗೆಲುವು ಕಾಣುವ ಪಕ್ಷವನ್ನು ಅಂದಾಜಿಸಲು ವಿಫಲವಾಗಿತ್ತು. ಸರಾಸರಿಯಲ್ಲಿ ಯುಪಿಎ 195 ಸೀಟ್‌ ನೀಡಿದ್ದರೆ, ಎನ್‌ಡಿಎಗೆ 185 ಸೀಟ್‌ ನೀಡಿತ್ತು. ಆದರೆ, ಯುಪಿಎ ಈ ಚುನಾವಣೆಯಲ್ಲಿ 262 ಕ್ಷೇತ್ರ ಗೆದ್ದಿದ್ದರೆ, ಎನ್‌ಡಿಎ 158 ಕ್ಷೇತ್ರದಲ್ಲಿ ಗೆಲುವು ಕಂಡಿತ್ತು. ಬಿಜೆಪಿ 116 ಕ್ಷೇತ್ರದಲ್ಲಿ ಗೆದ್ದಿದ್ದರೆ, ಕಾಂಗ್ರೆಸ್‌ 206 ಸೀಟ್‌ನಲ್ಲಿ ಗೆಲುವು ಕಂಡಿತ್ತು.

Tap to resize

Latest Videos

undefined

ಬಿಜೆಪಿ, ಎಎಪಿ, ಕಾಂಗ್ರೆಸ್ ನಡುವೆ ಬಿಗ್ ಫೈಟ್, ಯಾರಾಗ್ತಾರೆ ದೆಹಲಿ ಸುಲ್ತಾನ?

2019ರ ಎಕ್ಸಿಟ್‌ ಪೋಲ್‌

2014 ಎಕ್ಸಿಟ್‌ ಪೋಲ್

2009 ಎಕ್ಸಿಟ್‌ ಪೋಲ್‌

click me!