NEET Counseling ವಿಳಂಬ: ಇಂದಿನಿಂದ ಸ್ಥಾನಿಕ ವೈದ್ಯರ ಮುಷ್ಕರ!

By Kannadaprabha News  |  First Published Nov 27, 2021, 10:45 AM IST

*ನೀಟ್ ಕೌನ್ಸಿಲಿಂಗ್‌ನ್ನು ಮುಂದೂಡಿದ್ದಕ್ಕೆ ತೀವ್ರ ಆಕ್ರೋಶ ‌
*ನವೆಂಬರ್ 27ರಿಂದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ 
*ಕೌನ್ಸಿಲಿಂಗ್‌ನ್ನು ಜನವರಿಯವರೆಗೆ ಮುಂದೂಡಿರುವ ಸುಪ್ರೀಂ ಕೋರ್ಟ್‌


ನವದೆಹಲಿ(ನ.27): ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (National Eligibility Entrance Test) ಪಿಜಿ ಕೌನ್ಸಿಲಿಂಗ್‌ನ್ನು ಜನವರಿಯವರೆಗೆ ಮುಂದೂಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತೀಯ ಸ್ಥಾನಿಕ ವೈದ್ಯರ ಸಂಘಟನೆ (Federation of Resident Doctors’ Association), ನ.27ರಿಂದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಪ್ರತಿಭಟನೆಯ (Protest) ಅಂಗವಾಗಿ ಶನಿವಾರ ರಾಷ್ಟ್ರದಾದ್ಯಂತ ಎಲ್ಲ ನಿವಾಸಿ ವೈದ್ಯರಿಗೆ ಹೊರ ರೋಗಿಗಳ ವಿಭಾಗಗಳಲ್ಲಿ ನೀಡುವ ಸೇವೆಯನ್ನು ಹಿಂಪಡೆಯುವಂತೆ ತಿಳಿಸಿದೆ.

ಕೊರೋನಾ (Corona) ಸಮಯದಲ್ಲಿ ವೈದ್ಯರು ಬಿಡುವಿಲ್ಲದೇ ಸೇವೆ ಸಲ್ಲಿಸುತ್ತಿದ್ದು ಈಗಾಗಲೇ ಅತಿಯಾದ ಹೊರೆಯಿಂದ ದಣಿದಿದ್ದಾರೆ. ಸುಪ್ರೀಂ ಕೋರ್ಟ್‌ ಕೌನ್ಸಿಲಿಂಗ್‌ ಜನವರಿವರೆಗೆ ಮುಂದೂಡಿದ್ದು ಅರ್ಹ ವೈದ್ಯರ ಮಾನಸಿಕ ಯಾತನೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕೂಡಲೇ ಕೇಂದ್ರ ಹಾಗೂ ಸುಪ್ರೀಂ ಕೋರ್ಟ್‌ (Supreme Court) ಕೌನ್ಸಿಲಿಂಗ್‌ ಹಾಗೂ ಪ್ರವೇಶ ಪ್ರಕ್ರಿಯೆಯನ್ನು ಶೀಘ್ರಗತಿಯಲ್ಲಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇಡಬ್ಲ್ಯುಸಿ (EWC) ಕೋಟಾದಡಿ ಪ್ರವೇಶ ಪಡೆಯಲು ವಾರ್ಷಿಕ 8 ಲಕ್ಷ ಆದಾಯದ ಮಿತಿಯನ್ನು ನಿಗದಿ ಕುರಿತು ನಿರ್ಣಯ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್‌ ಕೌನ್ಸಿಲಿಂಗ್‌ನ್ನು ಜನವರಿವರೆಗೆ ಮುಂದೂಡಿದೆ.

Tap to resize

Latest Videos

ಜುಲೈ 29 ರ ಅಧಿಸೂಚನೆಪ್ರಶ್ನಿಸಿ ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣೆ 

"COVID-19 ಸಾಂಕ್ರಾಮಿಕ ರೋಗದ ಆರಂಭದಿಂದಲೂ ಮುಂಚೂಣಿಯಲ್ಲಿ ಹೋರಾಡುತ್ತಿರುವ  ನಿವಾಸಿ ವೈದ್ಯರು ಈಗಾಗಲೇ ಅತಿಯಾದ ಹೊರೆಯಿಂದ ದಣಿದ್ದಾರೆ. ಈಗಾಗಲೇ ವಿಳಂಬವಾದ NEET-PG 2021 ಕೌನ್ಸೆಲಿಂಗ್ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನ ಕೆಲವು ಸಕಾರಾತ್ಮಕ ಫಲಿತಾಂಶಗಳಿಗಾಗಿ ತಾಳ್ಮೆಯಿಂದ ಕಾಯುತ್ತಿದ್ದಾರೆ. ಆದಾಗ್ಯೂ, ಅವರ ದೈಹಿಕ ಮತ್ತು ಮಾನಸಿಕ ಯಾತನೆಗೆ ಯಾವುದೇ ವಿರಾಮವಿಲ್ಲ ಎಂದು ತೋರುತ್ತಿದೆ, ಮುಂದಿನ ನ್ಯಾಯಾಲಯದ ವಿಚಾರಣೆಯನ್ನು 6 ಜನವರಿ 2022 ರಂದು ನಿಗದಿಪಡಿಸಲಾಗಿದೆ, ”ಎಂದು ಅವರು ಹೇಳಿದ್ದಾರೆ.

NEET Result: ಮೇಘನ್, ಜಶನ್ ಕರ್ನಾಟಕಕ್ಕೆ ಟಾಪರ್

50 ಪ್ರತಿಶತ ಎಐಕ್ಯೂ (All India Quota) ಸೀಟುಗಳಿಗೆ ನೀಟ್ ಪಿಜಿ ಕೌನ್ಸೆಲಿಂಗ್ ಅಕ್ಟೋಬರ್ 25 ರಂದು ಪ್ರಾರಂಭವಾಗಬೇಕಿತ್ತು ಆದರೆ ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ಎಂಸಿಸಿ ( Medical Counselling Committee) ಅದನ್ನು ಮುಂದೂಡಿದೆ. ನವೆಂಬರ್ 26 ರಂದು, ಪ್ರಕ್ರಿಯೆ ಮತ್ತೆ ವಿಳಂಬವಾಯಿತು. ಅಖಿಲ ಭಾರತ ಕೋಟಾದ ವೈದ್ಯಕೀಯ ಸೀಟುಗಳಲ್ಲಿ ಒಬಿಸಿಗೆ (OBC) ಶೇ 27 ಮತ್ತು ಇಡಬ್ಲ್ಯುಎಸ್ (EWS) ವಿದ್ಯಾರ್ಥಿಗಳಿಗೆ ಶೇ 10 ಮೀಸಲಾತಿ ನೀಡಲು ಕೇಂದ್ರ ಮತ್ತು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯ (MCC) ಜುಲೈ 29 ರ ಅಧಿಸೂಚನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಅರ್ಜಿಯ ವಿಚಾರಣೆ ನಡೆಸುತ್ತಿದೆ.

NEETಪರೀಕ್ಷೆಯಲ್ಲಿ ಎರಡನೇ ಬಾರಿ ಅನುತ್ತೀರ್ಣ: ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ!

ಮೆಡಿಕಲ್(Medical), ಡೆಂಟಲ್(Dental) ಪ್ರವೇಶಕ್ಕೆ ನಡೆದಿದ್ದ 2021ನೇ ಸಾಲಿನ ನೀಟ್ ಫಲಿತಾಂಶ(NEET Result) ನವೆಂಬರ 1ರಂದು ಪ್ರಕಟವಾಗಿತ್ತು. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ತನ್ನ ಅಧಿಕೃತ ವೆಬ್‌ಸೈಟ್ neet.nta.nic.in ನಲ್ಲಿ ಫಲಿತಾಂಶಗಳನ್ನು ಬಿಡುಗಡೆ ಮಾಡಿತ್ತು. ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) ಆಕಾಂಕ್ಷಿಯೊಬ್ಬರು ಎರಡನೇ ಬಾರಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರ ಶನಿವಾರ ತಮಿಳುನಾಡಿನ ಸೇಲಂ (Tamil Nadu's Selam) ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೀಟನಾಶಕ ಸೇವಿಸಿ ಸುಭಾಷ್ ಚಂದ್ರ  ಆತ್ಮಹತ್ಯೆ!

ಮೃತರನ್ನು ಸೇಲಂ ಜಿಲ್ಲೆಯ ವಡಕುಮಾರೈ (Vadakumarai) ಗ್ರಾಮದ ದಿನಗೂಲಿ ಕಾರ್ಮಿಕನ ಮಗ ಸುಭಾಷ್ ಚಂದ್ರ ಬೋಸ್ (Subash Chandra Bose) ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ತಿಳಿದಿರುವವರ ಪ್ರಕಾರ, ಹುಡುಗನು ತನ್ನ ಎರಡನೇ ಪ್ರಯತ್ನದಲ್ಲಿ ನೀಟ್‌ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ತನ್ನ ನಿವಾಸದಲ್ಲಿ ಕೀಟನಾಶಕವನ್ನು (pesticide) ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

click me!