Farm Laws ವಿರೋಧಿ ಹೋರಾಟಕ್ಕೆ 1 ವರ್ಷ : ದೆಹಲಿ ಗಡಿಗಳಲ್ಲಿ ರೈತರಿಂದ ಸಂಭ್ರಮಾಚರಣೆ!

By Kannadaprabha News  |  First Published Nov 27, 2021, 10:18 AM IST

*ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ ಒಂದು ವರ್ಷ
*ದೆಹಲಿ ಗಡಿಗಳಲ್ಲಿ ರೈತರಿಂದ ಸಂಭ್ರಮಾಚರಣೆ
*ರೈತರು, ಪರಸ್ಪರ ಅಪ್ಪಿಕೊಂಡು, ಸಿಹಿ ಹಂಚಿಕೆ!


ನವದೆಹಲಿ(ನ.27): ಕೇಂದ್ರ ಸರ್ಕಾರ ಅಂಗೀಕರಿಸಿದ ಮೂರು ಕೃಷಿ ಕಾಯ್ದೆಗಳನ್ನು (Farm laws) ವಿರೋಧಿಸಿ ರೈತ ಸಂಘಟನೆಗಳು ದೆಹಲಿಯಲ್ಲಿ ಆರಂಭಿಸಿದ್ದ ಪ್ರತಿಭಟನೆ (Farmers Protest) ಶುಕ್ರವಾರಕ್ಕೆ ಒಂದು ವರ್ಷ ಪೂರ್ಣಗೊಂಡಿದೆ. ಕೇವಲ 2 ದಿನಕ್ಕೆಂದು ಆರಂಭದಲ್ಲಿ ಕರೆಕೊಡಲಾಗಿದ್ದ ಪ್ರತಿಭಟನೆ ಕೊನೆಗೆ ತೀವ್ರ ಸ್ವರೂಪ ಪಡೆದುಕೊಂಡು ಜಾಗತಿಕ ಗಮನ ಸೆಳೆದಿತ್ತು. ಹೀಗಾಗಿ ಇತ್ತೀಚೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೇ ರೈತರ ಮನವೊಲಿಸುವ ಸಲುವಾಗಿ ಮೂರೂ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಘೋಷಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಯ ಸಿಂಘೂ (Singhu), ಟಿಕ್ರಿ (tikri) ಗಡಿಗೆ ಅಕ್ಕಪಕ್ಕದ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ರೈತರು, ಪರಸ್ಪರ ಅಪ್ಪಿಕೊಂಡು, ಸಿಹಿ ಹಂಚಿ ತಮ್ಮ ಹೋರಾಟ ಫಲಪ್ರದವಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.

ಸರ್ಕಾರ ಕಾಯ್ದೆ ರದ್ದು ಮಾಡುವುದಾಗಿ ಘೋಷಿಸಿದ್ದರೂ ಸಾವಿರಾರು ಸಂಖ್ಯೆಯ ರೈತರು ಜಮಾವಣೆಗೊಂಡು ದೆಹಲಿ-ಕರ್ನಾಲ್‌ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಮಕ್ಕಳು, ಹಿರಿಯರು, ಮಹಿಳೆಯರು ಎಂಬ ಬೇಧವಿಲ್ಲದೆ ರೈತ ಸಂಘಟನೆಗಳ ಬಾವುಟ ಹಿಡಿದು, ಇಂಕ್ವಿಲಾಬ್‌ ಜಿಂದಾಬಾದ್‌ ಘೋಷಣೆ ಕೂಗಿದರು. ವಿವಾದಿತ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಘೋಷಿಸಿದ್ದಾರೆ. ಆದರೆ ಸಂಸತ್ತಿನಲ್ಲಿ ಕಾಯ್ದೆ ಮಂಡನೆಯಾಗಿ ವಾಪಸ್‌ ಪಡೆಯುವವರೆಗೂ ಮತ್ತು ಕನಿಷ್ಠ ಬೆಂಬಲ ಬೆಲೆ ಸೇರಿ ರೈತರ ಇತರ ಎಲ್ಲಾ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೂ ಪ್ರತಿಭಟನಾ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ರೈತ ಸಂಘಟನೆಗಳು ಪಟ್ಟು ಹಿಡಿದಿವೆ.

Tap to resize

Latest Videos

3 ಕೃಷಿ ಕಾಯ್ದೆ ಹಿಂಪಡೆವ ಮಸೂದೆಗೆ ಸಂಪುಟ ಅಸ್ತು!

ವಿವಾದಿತ 3 ಕೃಷಿ ಕಾಯ್ದೆಗಳನ್ನುಮ (Farm Laws repeal) ಹಿಂಪಡೆಯುವ ಮಸೂದೆಗೆ ಕೇಂದ್ರ ಸಚಿವ ಸಂಪುಟ (Union Cabinet) ಬುಧವಾರ ಅನುಮೋದನೆ ನೀಡಿದೆ. ಇದರಿಂದಾಗಿ ರೈತರ (Farmers) ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಕಾಯ್ದೆ ಹಿಂಪಡೆತ ಬೇಡಿಕೆಯನ್ನು ಈಡೇರಿಸುವತ್ತ ಮತ್ತೊಂದು ಪ್ರಮುಖ ಹೆಜ್ಜೆ ಇರಿಸಿದಂತಾಗಿದೆ. ‘ಕೃಷಿ ಕಾಯ್ದೆ ಹಿಂತೆಗೆತ ಮಸೂದೆ-2021’ಕ್ಕೆ ಸಂಪುಟ ಅಸ್ತು ಎಂದಿದ್ದು, ನ.29ರಂದು ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಆಗಲಿದೆ ಎಂದು ಸಂಪುಟ ಸಭೆ ಬಳಿಕ ಕೇಂದ್ರ ವಾರ್ತಾ ಸಚಿವ ಅನುರಾಗ್‌ ಠಾಕೂರ್‌ (Anurag Thakur) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಸೂದೆಯನ್ನು ಸಂಸತ್‌ ಅಧಿವೇಶನದ ಮೊದಲೇ ದಿನವೇ ಉಭಯ ಸದನಗಳಲ್ಲೂ ಮಂಡಿಸಿ ಅಂಗೀಕರಿಸುವ ಉದ್ದೇಶದಲ್ಲಿ ಸರ್ಕಾರ ಇದೆ ಎನ್ನಲಾಗುತ್ತಿದೆ.

Farm Laws Repeal: ವರ್ಷದ ಬಳಿಕ ಪ್ರಧಾನಿಗೆ ಜ್ಞಾನೋದಯ: ಸಲೀಂ ಅಹ್ಮದ್‌

ಈ ವಿವಾದಿತ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಕಳೆದ ಶುಕ್ರವಾರ ಗುರುನಾನಕ ಜಯಂತಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ್ದರು. ಆದರೆ ಸಂಪುಟದಲ್ಲಿ ಇವುಗಳ ಅಂಗೀಕಾರ ಆಗಬೇಕು ಹಾಗೂ ಸಂಸತ್ತಿನಲ್ಲಿ ಅಧಿಕೃತವಾಗಿ ಕಾಯ್ದೆ ರದ್ದುಪಡಿಸಬೇಕು ಎಂದು ರೈತ ಸಂಘಟನೆಗಳು ಪಟ್ಟು ಹಿಡಿದಿದ್ದವು. ಈ ಕಾಯ್ದೆಗಳ ವಿರುದ್ಧದ ಹೋರಾಟಕ್ಕೆ ಶುಕ್ರವಾರ 1 ವರ್ಷ ತುಂಬಲಿದೆ.

ರದ್ದಾಗಲಿರುವ ಕಾಯ್ದೆಗಳು

1. ರೈತ ಉತ್ಪನ್ನಗಳ ವಾಣಿಜ್ಯ ವ್ಯವಹಾರ ಕಾಯ್ದೆ-2020

ಎಲ್ಲ ರಾಜ್ಯಗಳ ಎಪಿಎಂಸಿ ಕಾಯ್ದೆ ರದ್ದು. ಎಪಿಎಂಸಿಯಿಂದ ಹೊರಗೂ ಉತ್ಪನ್ನ ಮಾರಲು ರೈತರಿಗೆ ಈ ಕಾಯ್ದೆಯಡಿ ಅವಕಾಶ

2. ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳಿಗೆ ರೈತ ಒಪ್ಪಂದ ಕಾಯ್ದೆ-2020

ಗುತ್ತಿಗೆ ಕೃಷಿ ಒಪ್ಪಂದಕ್ಕೆ ಕಾನೂನು ಚೌಕಟ್ಟು ಕಲ್ಪಿಸಿ, ಖರೀದಿದಾರನ ಜತೆ ಬಿತ್ತನೆಗೂ ಮೊದಲೇ ಬೆಲೆ ನಿಗದಿಗೆ ಅವಕಾಶ ಒದಗಿಸುವುದು

Farmer protest: .29 ರಂದು ಸಂಸತ್‌ ಮುಂದೆ ಮತ್ತೆ ರೈತರ ಧರಣಿ

3. ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆ-2020

ಅತ್ಯಂತ ಗಂಭೀರ ಪರಿಸ್ಥಿತಿ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಯಾವುದೇ ಕೃಷಿ ಉತ್ಪನ್ನದ ಸಂಗ್ರಹದ ಮೇಲೆ ಮಿತಿ ಹೇರುವಂತಿರಲಿಲ್ಲ

click me!