INS Visakhapatnam| ಕ್ಷಿಪಣಿ ದಾಳಿ ಸಾಮರ್ಥ್ಯ ಯುದ್ಧ ನೌಕೆ ನೌಕಾಪಡೆಗೆ!

By Suvarna News  |  First Published Nov 21, 2021, 8:33 AM IST

* ಅತ್ಯಾಧುನಿಕ ಐಎನ್‌ಎಸ್‌ ವಿಶಾಖಪಟ್ಟಣಂ ಸೇನೆಗೆ ಸೇರ್ಪಡೆ

* ಮೊದಲ ಸ್ವದೇಶಿ ನಿರ್ಮಿತ ಕ್ಷಿಪಣಿ ಧ್ವಂಸ ಯುದ್ಧನೌಕೆಯಿದು

* ಕ್ಷಿಪಣಿ ದಾಳಿ ಸಾಮರ್ಥ್ಯ ಯುದ್ಧ ನೌಕೆ ಇಂದು ನೌಕಾಪಡೆಗೆ


ನವದೆಹಲಿ(ನ.21): ಕ್ಷಿಪಣಿಗಳನ್ನು (Missile) ಉಡ್ಡಯನ ಮಾಡಬಲ್ಲ ಹಾಗೂ ಧ್ವಂಸ ಮಾಡಬಲ್ಲ ಸಾಮರ್ಥ್ಯ ಸೇರಿದಂತೆ ಎಲ್ಲಾ ರೀತಿಯ ಆಧುನಿಕ ಯುದ್ಧ ಕೌಶಲ್ಯಗಳನ್ನು ಒಳಗೊಂಡಿರುವ ಅತ್ಯಾಧುನಿಕ ದಾಳಿ ಯುದ್ಧ ನೌಕೆಯಾದ ಐಎನ್‌ಎಸ್‌ ವಿಶಾಖಪಟ್ಟಣಂ (INS Visakhapatnam), ಭಾನುವಾರ ಭಾರತೀಯ ನೌಕಾಪಡೆಗೆ (Indian Navy) ಸೇರ್ಪಡೆಯಾಗಲಿದೆ. ಇದು ದೇಶ ಇದುವರೆಗೆ ನಿರ್ಮಿಸಿರುವ ಅತ್ಯಾಧುನಿನಿಕ, ಮೊದಲ ಸ್ವದೇಶಿ ನಿರ್ಮಿತ ಕ್ಷಿಪಣಿ ದಾಳಿ ಯುದ್ಧ ನೌಕೆಯಾಗಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಈ ಯುದ್ಧ ನೌಕೆಯನ್ನು ನೌಕಾಪಡೆಗೆ ಹಸ್ತಾಂತರಿಸಲಿದ್ದಾರೆ.

15ಬಿ ಎಂಬ ಯೋಜನೆಯಡಿ ಭಾರತೀಯ ನೌಕಾಪಡೆ ನಾಲ್ಕು ರಹಸ್ಯ ಮಾರ್ಗದರ್ಶಕ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯದ ಯುದ್ಧನೌಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಮಡಗಾಂವ್‌ ಡಾಕ್‌ ಲಿ.(MDL) ಸಂಸ್ಥೆ ವಿನ್ಯಾಸ ಮಾಡಿರುವ ಈ ಯುದ್ಧನೌಕೆ 163 ಮೀಟರ್‌ ಉದ್ದವಿದ್ದು, 7400 ಟನ್‌ ತೂಕ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಈ ನೌಕೆಯು ಭೂಮಿಯಿಂದ ಭೂಮಿಗೆ (Earth), ಭೂಮಿಯಿಂದ ಆಗಸಕ್ಕೆ ಹಾರಿಸಬಲ್ಲ ಕ್ಷಿಪಣಿ ದಾಳಿ ವ್ಯವಸ್ಥೆಯನ್ನು ಒಳಗೊಂಡಿದೆ.

Tap to resize

Latest Videos

undefined

ಐಎನ್‌ಎಸ್‌ ವಿಶಾಖಪಟ್ಟಣಂ ವಿಶೇಷತೆ

- 312 ಸಿಬ್ಬಂದಿ ಕಾರ್ಯಾಚರಣೆ ನಡೆಸಲು ನೌಕೆಯಲ್ಲಿ ಸ್ಥಳಾವಕಾಶ

- 7408 ಕಿ.ಮೀ ದೂರದವರೆಗೆ ಚಲಿಸುವ ಸಾಮರ್ಥ್ಯ

- 42 ದಿನ ಎಂಥ ಕಠಿಣ ಪರಿಸ್ಥಿತಿಯಲ್ಲೂ ಕಾರ್ಯಾಚರಣೆ ಸಾಮರ್ಥ್ಯ

- ಪ್ರತೀ ಗಂಟೆಗೆ 55 ಕಿ.ಮೀ ವೇಗದಲ್ಲಿ ಕ್ರಮಿಸುವ ಯುದ್ಧನೌಕೆ

- ಬ್ರಹ್ಮೋಸ್‌, ಭೂಮಿಯಿಂದ ನಭಕ್ಕೆ ಚಿಮ್ಮಬಲ್ಲ ಬರಾಕ್‌ ಕ್ಷಿಪಣಿಗಳು ಒಳಗೊಂಡ ವ್ಯವಸ್ಥೆ

- ಮಧ್ಯಮ ಮತ್ತು ಕಡಿಮೆ ಅಂತರದ ದಾಳಿಗೆ ಗನ್‌ಗಳು

- ಜಲಾಂತರ್ಗಾಮಿ ಯುದ್ಧ ನೌಕೆ ನಿಗ್ರಹ ರಾಕೆಟ್‌ಗಳು

- ಅತ್ಯಾಧುನಿಕ ಎಲೆಕ್ಟ್ರಾನಿಕ್‌ ಯುದ್ಧ ಸಾಮಗ್ರಿಗಳು

 ಉಗ್ರರ ವಿರುದ್ಧ ಹೋರಾಡಿ ಹುತಾತ್ಮರಾದ ಮೇಜರ್ ದೀಪಕ್ ನೈನ್ವಾಲ್ ಪತ್ನಿ ಸೇನೆ ಸೇರ್ಪಡೆ!

 

ಉಗ್ರರ ಜೊತೆ ಹೋರಾಡಿ ವೀರ ಮರಣವನ್ನಪ್ಪಿದ ಮೇಜರ್ ದೀಪಕ್ ನೈನ್ವಾಲ್(Major Late Deepak Nainwal) ಪತ್ನಿ ಜ್ಯೋತಿ ನೈನ್ವಾಲ್(Jyoti Nainwal) ಇದೀಗ ಭಾರತೀಯ ಸೇನೆ ಸೇರಿಕೊಂಡಿದ್ದಾರೆ. ಹುತಾತ್ಮ ದೀಪಕ್ ನೈನ್ವಾಲ್ ಮುಂದೆ ಮಾಡಿದ ಶಪಥವನ್ನು ಈಡೇರಿಸಿದ್ದಾರೆ. ಜ್ಯೂತಿ ನೈನ್ವಾಲ್ ಭಾರತೀಯ ಸೇನೆಯ ಲೆಫ್ಟಿನೆಂಟ್ ಶ್ರೇಣಿ ಅಧಿಕಾರಿಯಾಗಿ (Lieutenant-rank officer) ನೇಮಕಗೊಂಡಿದ್ದಾರೆ. 

ತಾಯಿ ಭಾರತೀಯ ಸೇನೆ(Indian Army) ಸೇರಿಕೊಂಡ ಕ್ಷಣಗಳನ್ನು ಪುತ್ರಿ ಲಾವಣ್ಯ ಅತೀವ ಸಂತಸ ಹಾಗೂ ಹೆಮ್ಮೆ ಪಟ್ಟಿದ್ದಾರೆ. ಈ ವೇಳೆ ಪ್ರತಿಕ್ರಿಯೆ ನೀಡಿರುವ ಲಾವಣ್ಯ ನೈನ್ವಾಲ್, ನನಗೆ ತಾಯಿ ಬಗ್ಗೆ ಅತೀವ ಹೆಮ್ಮೆಯಾಗುತ್ತಿದೆ. ಒಂದು ದಿನ ಭಾರತೀಯ ಸೇನೆಯ ಅಧಿಕಾರಿಯಾಗುತ್ತೇನೆ ಎಂದು ತಾಯಿ ಯಾವತ್ತು ಹೇಳುತ್ತಿದ್ದರು. ಆ ದಿನ ಬಂದೇ ಬಿಟ್ಟಿದೆ. ಇಂದು ತಾಯಿ ಕನಸು ಸಾಕಾರಗೊಳಿಸಿದ್ದಾರೆ. ತಾಯಿಯನ್ನು ಅತೀಯಾಗಿ ಪ್ರೀತಿಸುತ್ತೇನೆ ಎಂದು 11ವರ್ಷದ ಪುತ್ರಿ ಲಾವಣ್ಯ ಹೇಳಿದ್ದಾಳೆ.

ಕೂಲಿ ಕಾರ್ಮಿಕನ ಮಗ ಸೇನಾಧಿಕಾರಿಯಾಗಿ ನೇಮಕ; ದಶಕದ ಹಿಂದಿನ ಕಣ್ಣೀರ ಕತೆ ನೆನೆದ ತಂದೆ!

ಇದೇ ವೇಳೆ ತಾನು ಭಾರತೀಯ ಸೇನೆಯ ವೈದ್ಯೆಯಾಗಬೇಕು ಎಂದಿದ್ದಾಳೆ. ವೈದ್ಯೆಯಾಗಬೇಕು ಅನ್ನೋದು ನನ್ನ ಕನಸಾಗಿದೆ. ಆದರೆ ನನ್ನ ತಂದೆ ಹುತಾತ್ಮರಾದ ಬಳಿಕ ನಾನೂ ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕು. ಹೀಗಾಗಿ ಸೇನೆಯ ವೈದ್ಯಳಾಗಲು ನಾನು ಇಚ್ಚೆಪಡತ್ತೇನೆ ಎಂದು ಲಾವಣ್ಯ ಹೇಳಿದ್ದಾಳೆ. ಸೇನಾ ಅಧಿಕಾರಿ ಸಮವಸ್ತ್ರದಲ್ಲಿ ಕಾಣಿಸಿಕೊಂಡ ಲಾವಣ್ಯ ಹಾಗೂ 7 ವರ್ಷದ ತಮ್ಮ ರೆತಾನ್ಶ್ ಕೂಡ ಅಷ್ಟೆ ಸಂತಸಪಟ್ಟಿದ್ದಾನೆ. 

ತಾನು ಕೂಡ ಸೇನೆ ಸೇರಿ ಸೇವೆ ಸಲ್ಲಿಸಬೇಕು. ಶತ್ರುಗಳ ಹಾಗೂ ಭಯತ್ಪಾದಕರ ವಿರುದ್ದ ಹೋರಾಡುತ್ತಿರುವ ಭಾರತೀಯ ಸೇನೆ ಸೇರಬೇಕು ಎಂದು ದೀಪಕ್ ಪತ್ನಿ ಜ್ಯೋತಿ ಪ್ರತಿಜ್ಞೆ ಮಾಡಿದ್ದರು. ಪತಿ ಮೇಜರ್ ದೀಪಕ್ ನೈನ್ವಾಲ್ ನಿಧನದ ಬಳಿಕ ಚೆನ್ನೈ ಆರ್ಮಿ ಆಫೀಸರ್ಸ್ ತರಬೇತಿ ಅಕಾಡಮೆಯಲ್ಲಿ 11 ತಿಂಗಳು ಟ್ರೈನಿಂಗ್ ಪೂರ್ಣಗೊಳಿಸಿದ್ದಾರೆ. ಇದೀಗ ಭಾರತೀಯ ಸೇನೆಯ ಲೆಫ್ಟೆನೆಂಟ್ ಶ್ರೇಣಿ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.

click me!