* ಕೋವಿನ್ ಪೋರ್ಟಲ್‌ನಲ್ಲಿ ಮಹತ್ವದ ಬದಲಾವಣೆ
* ಯಾರು ಬೇಕಾದರೂ ಇನ್ನು ಲಸಿಕೆ ಸ್ಟೇಟಸ್ ನೋಡಬಹುದು
ನವದೆಹಲಿ(ನ.21): ದೇಶದ ಪ್ರತಿಯೊಬ್ಬ ವ್ಯಕ್ತಿಯ ಲಸಿಕಾಕರಣದ (Vaccination) ಪ್ರಕ್ರಿಯೆಯನ್ನು ಯಾವುದೇ ವ್ಯಕ್ತಿ ನೋಡಲು ಅವಕಾಶ ನೀಡುವ ಸೇವೆಯನ್ನು ಕೋವಿನ್ ಪೋರ್ಟಲ್‌ನಲ್ಲಿ (CoWIN Portal) ಕೇಂದ್ರ ಆರೋಗ್ಯ ಸಚಿವಾಲಯ ಸಕ್ರಿಯಗೊಳಿಸಿದೆ.
ಹೊಸ ಸೇವೆಯನ್ನು ಖಾಸಗಿ ಕಂಪನಿಗಳು, ಟ್ರಾವೆಲ್ ಏಜೆನ್ಸಿ (Travel Agency), ಕಚೇರಿಗಳು, ಉದ್ಯೋಗಿಗಳು, ಮನರಂಜನಾ ಏಜೆನ್ಸಿಗಳು ಅಥವಾ ಸರ್ಕಾರಿ ಏಜೆನ್ಸಿಗಳಾದ ಐಆರ್‌ಸಿಟಿಸಿ ಮುಂತಾದವು ವ್ಯಕ್ತಿಯ ಲಸಿಕಾಕರಣ ಸ್ಟೇಟಸ್ ಪರಿಶೀಲನೆ ವೇಳೆ ಬಳಕೆ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ನೋ ಯುವರ್ ವ್ಯಾಕ್ಸಿನೇಶನ್ ಸ್ಟೇಟಸ್’ (Vaccination Feature) ಫೀಚರ್ ನಾಗರಿಕರು ಲಸಿಕೆ ಸ್ವೀಕರಿಸಿರುವ ಬಗ್ಗೆ ಪರಿಶೀಲನೆ ಮಾಡಿ ಮಾಹಿತಿ ಒದಗಿಸುತ್ತದೆ. ಲಸಿಕೆ ಪಡೆದ ಜನರು ಇದನ್ನು ಜಾಲತಾಣಗಳಲ್ಲಿ ಹಂಚಿಕೊಂಡು ಲಸಿಕೆ ಅಭಿಯಾನವನ್ನು (Vaccination Campaign) ಪ್ರೋತ್ಸಾಹಿಸಬಹುದು.
undefined
ಏನೇನು ಪ್ರಕ್ರಿಯೆ?
- ಕೋವಿನ್ ಆ್ಯಪ್‌ನಲ್ಲಿ ಹೆಸರು, ಮೊಬೈಲ್ ಸಂಖ್ಯೆ ನಮೂದಿಸಬೇಕು
- ಆಗ ಮೊಬೈಲ್‌ಗೆ ಬರುವ ಒಟಿಪಿಯನ್ನು ಸಂಬಂಧಿಸಿದ ಸಿಬ್ಬಂದಿಗೆ ಹೇಳಬೇಕು
- ವ್ಯಾಕ್ಸಿನೇಶನ್ ಸ್ಟೇಟಸ್ ಲಭ್ಯವಾಗುತ್ತದೆ.
- ಸಂಬಂಧಿಸಿದ ಸಿಬ್ಬಂದಿಗೆ ‘ನೀವು ಲಸಿಕೆ ಪಡೆದಿದ್ದೀರಿ’ ಎಂದು ಖಚಿತವಾಗುತ್ತದೆ
- ಅದನ್ನು ಡೌನ್‌ಲೋಡ್ ಕೂಡ ಮಾಡಿಕೊಳ್ಳಬಹುದು.
ಲಸಿಕೆ ಪ್ರಮಾಣಪತ್ರದಲ್ಲಿ ಇನ್ನು ಜನ್ಮ ದಿನಾಂಕ
ಕೋವಿಡ್ ಲಸಿಕಾ ಪ್ರಮಾಣಪತ್ರದಲ್ಲಿ ಮಹತ್ವದ ಬದಲಾವಣೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇನ್ನು ವಿದೇಶಕ್ಕೆ ತೆರಳಬಯಸುವ ವ್ಯಕ್ತಿಗಳ ಲಸಿಕಾ ಪ್ರಮಾಣಪತ್ರದಲ್ಲಿ ಜನ್ಮದಿನಾಂಕ ಕೂಡ ಇರಲಿದೆ ಎಂದು ಮೂಲಗಳು ಹೇಳಿವೆ.
ವಿಶ್ವಸಂಸ್ಥೆಯ ನಿಯಮಾವಳಿ ಪ್ರಕಾರ ಪ್ರಮಾಣಪತ್ರದಲ್ಲಿ ಫಲಾನುಭವಿಗಳ ಜನ್ಮ ದಿನಾಂಕ ಇರಬೇಕು. ಆದರೆ ಜನ್ಮದಿನಾಂಕವು ಪ್ರಮಾಣಪತ್ರದಲ್ಲಿ ಇಲ್ಲದ ಕಾರಣ ಬ್ರಿಟನ್ ಸರ್ಕಾರವು ಲಸಿಕೆ ಪಡೆದ ಭಾರತೀಯರಿಗೂ ಕ್ವಾರಂಟೈನ್ ಕಡ್ಡಾಯಗೊಳಿಸಿತ್ತು.
ಈ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದು ವಿದೇಶ ಪ್ರಯಾಣಕ್ಕೆ ಬಯಸಿದ್ದರೆ ಅವರ ಲಸಿಕೆ ಪ್ರಮಾಣಪತ್ರದಲ್ಲಿ ಜನ್ಮದಿನಾಂಕ ನಿಗದಿಪಡಿಸಲಾಗುತ್ತದೆ. ಮುಂದಿನ ವಾರ ಕೋ-ವಿನ್ ವೆಬ್ಸೈಟ್ನಲ್ಲಲಿ ಈ ಬದಲಾವಣೆ ತರಲಾಗುತ್ತದೆ ಎಂದು ಮೂಲಗಳು ತಿಳಿಸಿವೆ,
ಪ್ರಸ್ತುತ ಹುಟ್ಟಿದ ವರ್ಷದ ಲೆಕ್ಕಾಚಾರದಲ್ಲಿ ಲಸಿಕೆ ಫಲಾನುಭವಿಗಳಿಗೆ ಅವರ ಕೋವಿನ್ ಪ್ರಮಾಣ ಪತ್ರದಲ್ಲಿ ವಯಸ್ಸು ಮಾತ್ರವೇ ನಮೂದಿಸಲಾಗುತ್ತಿದೆ.