Covid In India| 202 ದಿನದ ಬಳಿಕ ಕೋವಿಡ್‌ ವಿರುದ್ಧ ಗೆದ್ದ ಮಹಿಳೆ!

By Suvarna NewsFirst Published Nov 21, 2021, 7:21 AM IST
Highlights

* ಏಪ್ರಿಲ್‌ನಲ್ಲಿ ಕೋವಿಡ್‌ ಕಾಣಿಸಿಕೊಂಡಿತ್ತು

* ನವೆಂಬರ್‌ನಲ್ಲಿ ಸೋಂಕಿನಿಂದ ಗುಣಮುಖ

* 202 ದಿನದ ಬಳಿಕ ಕೋವಿಡ್‌ ವಿರುದ್ಧ ಗೆದ್ದ ಮಹಿಳೆ!

* ತೀವ್ರ ಉಸಿರಾಟ ಸಮಸ್ಯೆಯೇ ಸುದೀರ್ಘ ಸೋಂಕಿಗೆ ಕಾರಣ

ವಡೋದರಾ(ನ.21): : ‘ಆತ್ಮವಿಶ್ವಾಸ’ ಇದ್ದರೆ ಎಂಥಾ ಮಹಾಮಾರಿಯನ್ನು ಸಹ ಸೋಲಿಸಬಹುದು ಎಂಬುದಕ್ಕೆ ಗುಜರಾತ್‌ (Gujarat) ಘಟನೆಯೊಂದು ಸಾಕ್ಷಿಯಾಗಿದೆ. ಹೌದು, ಸತತ 202 ದಿನಗಳ ಕಾಲ ಕಠಿಣ ಹೋರಾಟದೊಂದಿಗೆ ಮಹಿಳೆಯೊಬ್ಬರು ಮಹಾಮಾರಿ ಕೊರೋನಾ ವೈರಸ್‌ (Coronavirus) ಅನ್ನು ಜಯಿಸಿದ್ದಾರೆ.

ಸುಮಾರು 7 ತಿಂಗಳ ಕಾಲ ವಡೋದರಾ ಮತ್ತು ದಹೋದ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೀತಾ ಧಾರ್ಮಿಕ್‌ (Geeta Dharmik) ಎಂಬುವರೇ ಕೋವಿಡ್‌ ವಿರುದ್ಧ ಗೆದ್ದು ಇದೀಗ ಆಸ್ಪತ್ರೆಯಿಂದ ಬಿಡುಗಡೆ ಆದವರು.

ಗೀತಾ ಅವರು ಏ.23ರಂದು ಸಾವಿಗೀಡಾದ ತಮ್ಮ ತಂದೆಯ ಅಂತ್ಯಕ್ರಿಯೆಗಾಗಿ ಭೋಪಾಲ್‌ಗೆ (Bhopal) ಹೋಗಿದ್ದರು. ಅಲ್ಲಿಂದ ಮರಳಿದ ಬಳಿಕ ಅವರಿಗೆ ಸೋಂಕು ಕಾಣಿಸಿಕೊಂಡಿತ್ತು. ಕೆಲ ದಿನಗಳ ಬಳಿಕ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದಕ್ಕಾಗಿ ಅವರನ್ನು ದಾಹೋದ್‌ ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗುಣಮುಖರಾಗಲಿಲ್ಲ.

ಬಳಿಕ ಅವರನ್ನು ವಡೋದರಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇಲ್ಲೂ ಏನೂ ಪ್ರಯೋಜನವಾಗಲಿಲ್ಲ. ಪುನಃ ದಾಹೋದ್‌ ಆಸ್ಪತ್ರೆಗೆ ಕರೆತಂದು ನಿತ್ಯವೂ ಆಮ್ಲಜನಕ ಥೆರಪಿ ಚಿಕಿತ್ಸೆ (Oxygen Therapy Treatment) ನೀಡಲಾಗಿತ್ತು. ಇದೀಗ ಅವರು ಗುಣಮುಖರಾಗಿದ್ದು, ಸ್ವಲ್ಪ ಪ್ರಮಾಣದ ಕೃತಕ ಆಮ್ಲಜನಕದ ನೆರವಿನೊಂದಿಗೆ ಬಿಡುಗಡೆಯಾಗಿದ್ದಾರೆ. ಉಸಿರಾಟ ಸಮಸ್ಯೆ ತೀವ್ರವಾಗಿ ಇದ್ದುದೇ ಅವರ ಸುದೀರ್ಘ ಕೊರೋನಾ ಸೋಂಕಿಗೆ ಕಾರಣ ಎಂದು ವೈದ್ಯರು ಹೇಳಿದ್ದಾರೆ.

ವಿದೇಶದಿಂದ ಬರುವವರಿಗೆ ಹೊಸ ಕೋವಿಡ್‌ ರೂಲ್ಸ್‌

 

 ಅನೇಕ ದೇಶಗಳಲ್ಲಿ ಕೊರೋನಾ(Coronavirus) ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದೇಶಗಳಿಂದ(Foreign) ವಿಮಾನ ನಿಲ್ದಾಣ(Airport) ಹಾಗೂ ಬಂದರು(Port) ಮೂಲಕ ರಾಜ್ಯಕ್ಕೆ(Karnataka) ಆಗಮಿಸುವ ಪ್ರಯಾಣಿಕರಿಗೆ ಕೊರೋನಾ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದ್ದು, ಎ-ಕೆಟಗರಿಯಲ್ಲಿರುವ 99 ದೇಶಗಳಿಂದ ಬರುವವರಿಗೆ ಎರಡೂ ಡೋಸ್‌ ಲಸಿಕೆ ಪಡೆದಿದ್ದರೆ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ.

ಹೆಚ್ಚು ಅಪಾಯಕಾರಿ ಎಂದು ಗುರುತಿಸಿರುವ ಯೂರೋಪ್‌ ರಾಷ್ಟ್ರಗಳು(European countries), ದಕ್ಷಿಣ ಆಫ್ರಿಕಾ, ಬ್ರೆಜಿಲ್‌, ಬಾಂಗ್ಲಾದೇಶ, ಬೊಟ್ಸಾವನಾ, ಚೀನಾ, ಮಾರಿಷಸ್‌, ನ್ಯೂಜಿಲೆಂಡ್‌ ದೇಶಗಳಿಂದ ಬರುವವರು ಆಗಮಿಸುವ ಮೊದಲೂ 72 ಗಂಟೆಗಳಿಗಿಂತ ಹಳೆಯ ಆರ್‌ಟಿ-ಪಿಸಿಆರ್‌(RTPCR) ನೆಗೆಟಿವ್‌ ವರದಿ ಅಪ್‌ಲೋಡ್‌ ಮಾಡಬೇಕು. ಜತೆಗೆ ರಾಜ್ಯಕ್ಕೆ ಆಗಮಿಸಿದ ಬಳಿಕವೂ ಮತ್ತೊಮ್ಮೆ ಪರೀಕ್ಷೆಗೆ ಒಳಪಡಬೇಕು. ನೆಗೆಟಿವ್‌ ಬಂದರೂ 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ಗೆ(Home Quarantine) ಒಳಪಡಬೇಕು. 8ನೇ ದಿನ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಬೇಕು.

ಡಬಲ್‌ ಡೋಸ್‌ನಿಂದ 1 ವರ್ಷಕ್ಕಿಂತ ಹೆಚ್ಚಿನ ಸುರಕ್ಷೆ : ಸೌಮ್ಯಾ ಸ್ವಾಮಿನಾಥನ್‌!

ಭಾರತದ(India) ಜೊತೆಗೆ ಲಸಿಕೆ ಒಡಂಬಡಿಕೆ ಮಾಡಿಕೊಂಡಿರುವ ದೇಶಗಳಿಗೆ ಕೆಲ ವಿನಾಯಿತಿಗಳನ್ನು ನೀಡಲಾಗಿದೆ. ಎ-ಕೆಟಗರಿಯಲ್ಲಿದ್ದ ಇಂತಹ ದೇಶಗಳ ಪಟ್ಟಿಯನ್ನು 11 ರಿಂದ 99ಕ್ಕೆ ಏರಿಕೆ ಮಾಡಲಾಗಿದೆ. ಸಿಂಗಾಪೂರ್‌ ಹಾಗೂ ಜಿಂಬಾಂಬ್ವೆ ದೇಶಗಳನ್ನು ಹೈ-ರಿಸ್ಕ್‌ ಪಟ್ಟಿಯಿಂದ ತೆಗೆದು ಎ-ಕೆಟಗರಿಗೆ ಸೇರಿಸಲಾಗಿದೆ.

ಇಸ್ರೇಲ್‌, ಆಸ್ಪ್ರೇಲಿಯಾ, ಫ್ರಾನ್ಸ್‌, ಈಜಿಪ್ಟ್‌ ಸೇರಿದಂತೆ 99 ದೇಶಗಳಿಂದ ಬರುವವರು ಡಬ್ಲ್ಯೂಎಚ್‌ಒ ಅನುಮೋದನೆ ಪಡೆದಿರುವ ಎರಡೂ ಡೋಸ್‌ ಲಸಿಕೆ(Vaccine) ಪಡೆದಿದ್ದರೆ ಕಡ್ಡಾಯ ಹೋಂ ಕ್ವಾರಂಟೈನ್‌ಗೆ ಒಳಪಡುವ ಅಗತ್ಯವಿಲ್ಲ. ಇವರು 72 ಗಂಟೆ ಹಳೆಯದಲ್ಲದ ನೆಗೆಟಿವ್‌ ವರದಿ ನೀಡಿ ಸ್ವಯಂ ನಿಗಾದಲ್ಲಿದ್ದಾರೆ ಸಾಕು ಎಂದು ಸ್ಪಷ್ಟಪಡಿಸಲಾಗಿದೆ.

ಉಳಿದಂತೆ ಲಸಿಕೆ ಪಡೆಯದ ಹಾಗೂ ಒಂದು ಡೋಸ್‌ ಮಾತ್ರ ಪಡೆದಿರುವವರು ಏರ್‌ಪೋರ್ಟ್‌ಗೆ ಬಂದ ಬಳಿಕ ಮತ್ತೊಮ್ಮೆ ಪರೀಕ್ಷೆಗೆ ಒಳಪಡಬೇಕು. ಬಳಿಕ ಬಳಿಕ 7 ದಿನ ಹೋಂ ಕ್ವಾರಂಟೈನ್‌ಲ್ಲಿದ್ದು ಎಂಟನೇ ದಿನ ಮರು ಪರೀಕ್ಷೆಗೆ ಒಳಪಡಬೇಕು. ಈ ವೇಳೆ ನೆಗೆಟಿವ್‌ ಬಂದರೂ ಮತ್ತೆ 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ತಿಳಿಸಲಾಗಿದೆ.

click me!