2018ರ ಮಾನನಷ್ಟ ಮೊಕದ್ದಮೆ ಪ್ರಕರಣ; ಕೋರ್ಟ್‌ಗೆ ಶರಣಾದ ರಾಹುಲ್ ಗಾಂಧಿಗೆ ಬಿಗ್ ರಿಲೀಫ್!

By Suvarna NewsFirst Published Feb 20, 2024, 3:36 PM IST
Highlights

2018ರ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅಮಿತ್ ಶಾ ವಿರುದ್ದ ನೀಡಿದ ಹೇಳಿಕೆ ಸಂಬಂದ ಡಿಫಮೇಶನ್ ಕೇಸ್ ದಾಖಲಾಗಿತ್ತು. ಇಂದು ಕೋರ್ಟ್‌ಗೆ ಶರಣಾದ ರಾಹುಲ್ ಗಾಂಧಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 
 

ಸುಲ್ತಾನ್‌ಪುರ್(ಫೆ.20) ಭಾರತ್ ಜೋಡೋ ನ್ಯಾಯ ಯಾತ್ರೆ, ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಸೇರಿದಂತೆ ಬಿಡುವಿಲ್ಲದೆ ಚುನಾವಣಾ ಅಖಾಡಕ್ಕೆ ಧುಮುಕಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದೆ. 2018ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ನೀಡಿದ್ದ ಹೇಳಿಕೆ ವಿರುದ್ಧ ಡಿಫಮೇಶನ್ ಕೇಸ್ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ರಾಹುಲ್ ಗಾಂಧಿ ಇಂದು ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ರಾಹುಲ್ ಗಾಂಧಿಯನ್ನು 30 ರಿಂದ 45 ನಿಮಿಷಗಳ ಕಾಲ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಬಳಿಕ ರಾಹುಲ್ ಗಾಂಧಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿತ್ತು.

ಈ ಪ್ರಕರಣ ಸಂಬಂಧ ರಾಹುಲ್ ಗಾಂಧಿ ಇಂದು ಭಾರತ್ ಜೋಡೋ ನ್ಯಾಯ ಯಾತ್ರೆ ನಡುವೆ ಸುಲ್ತಾನ್‌ಪುರ್ ಜಿಲ್ಲಾ ನ್ಯಾಯಾಲಕ್ಕೆ ಹಾಜರಾಗಿದ್ದರು. ಕೋರ್ಟ್‌ಗೆ ಶರಣಾದ ರಾಹುಲ್ ಗಾಂಧಿಯನ್ನು 35 ರಿಂದ 40 ನಿಮಿಷಗಳ ಕಾಲ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಬಳಿಕ ರಾಹುಲ್ ಗಾಂಧಿ ಪರವಾಗಿ ವಕೀಲ ಸಂತೋಶ್ ಪಾಂಡೆ ಜಾಮೀನು ಅರ್ಜಿ ಸಲ್ಲಿಸಿದ್ದರು. ರಾಹುಲ್ ಗಾಂಧಿ ಬೇಲ್ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಮುಂದಿನ ವಿಚಾರಣ ದಿನಾಂಂಕವನ್ನು ಕೋರ್ಟ್ ನೀಡಿಲ್ಲ. ಇತ್ತ ರಾಹುಲ್ ಗಾಂಧಿ ಯಾವುದೇ ಮಾನಹಾನಿಕರ ಹೇಳಿಕೆ ನೀಡಿಲ್ಲ. ಈ ವಿಚಾರದಲ್ಲಿ ರಾಹುಲ್ ಗಾಂಧಿ ಅಮಾಯಕರು ಎಂದು ಸಂತೋಶ್ ಪಾಂಡೆ ಮಾಧ್ಯಮ ಮುಂದೆ ಹೇಳಿದ್ದಾರೆ.

ಉತ್ತರ ಪ್ರದೇಶ ತಲುಪಿದ ರಾಹುಲ್ ಯಾತ್ರೆಗೆ ಪ್ರಿಯಾಂಕಾ ಗೈರು, ಗೊಂದಲಕ್ಕೆ ತೆರೆ ಎಳೆದ ನಾಯಕಿ!

ಇಬ್ಬರು ಶ್ಯೂರಿಟಿ ಹಾಗೂ 25 ಸಾವಿರ ರೂಪಾಯಿ ಬಾಂಡ್ ಕೋರ್ಟ್‌ಗೆ ಕಟ್ಟಿದ ರಾಹುಲ್ ಗಾಂಧಿ ಜಾಮೀನು ಪಡೆದಿದ್ದಾರೆ. ಇದೀಗ ರಾಹುಲ್ ಗಾಂಧಿ ಮತ್ತೆ ತಮ್ಮ ಭಾರತ್ ಜೋಡೋ ನ್ಯಾಯಾ ಯಾತ್ರೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. 

 

| Sultanpur, UP: On Congress Leader Rahul Gandhi being granted bail by District Court, Advocate Santosh Pandey says, "He (Rahul Gandhi) surrendered in the court today. He surrendered and the court took him into custody for 30-45 minutes. After that, his bail application… pic.twitter.com/tgxdOKlbnb

— ANI (@ANI)

 

2018ರಲ್ಲಿ ರಾಹುಲ್ ಗಾಂಧಿ ಬೆಂಗಳೂರು ಪ್ರವಾಸ ಮಾಡಿದ್ದರು. ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ದ ಗಂಭೀರ ಆರೋಪ ಮಾಡಿದ್ದರು. ಅಮಿತ್ ಶಾ ಮೇಲೆ ಕೊಲೆ ಆರೋಪವಿದೆ. ಅಮಿತ್ ಶಾ ಕ್ಲೀನ್ ರಾಜಕಾರಣಿಯಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ರಾಹುಲ್ ಗಾಂಧಿಗೆ ಖರ್ಗೆ, ಸಿದ್ದು ಪಾಠ ಹೇಳಲಿ: ಕೆ.ಎಸ್.ಈಶ್ವರಪ್ಪ ವ್ಯಂಗ್ಯ

ಗುಜರಾತ್ ಗೃಹ ಸಚಿವರಾಗಿದ್ದ ವೇಳೆ 2005ರ ನಡೆದ ನಕಲಿ ಎನ್‌ಕೌಂಟರ್ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ರಾಹುಲ್ ಗಾಂಧಿ ಈ ಆರೋಪ ಮಾಡಿದ್ದರು. ಆದರೆ ರಾಹುಲ್ ಗಾಂಧಿ ಹೇಳಿಕೆ ನೀಡುವ 4 ವರ್ಷ ಮೊದಲೇ ಸಿಬಿಐ ಕೋರ್ಟ್ ಅಮಿತ್ ಶಾ ಮೇಲಿನ ಎಲ್ಲಾ ಆರೋಪಗಳನ್ನು ಖುಲಾಸೆಗೊಳಿಸಿತ್ತು. ಅಮಿತ್ ಶಾ ಮೇಲೆ ಯಾವುದೇ ಆರೋಪವಿಲ್ಲದಿದ್ದರೂ ರಾಹುಲ್ ಗಾಂಧಿ ಬೆಂಬಲಿಗರಿಗೆ ನೋವುಂಟು ಮಾಡುವ ಹೇಳಿಕೆ ನೀಡಿದ್ದಾರೆ. ಅಮಿತ್ ಶಾ ವಿರುದ್ಧ ಸುಳ್ಳು ಹೇಳಿಕೆ ನೀಡುತ್ತಿರುವ ರಾಹುಲ್ ಗಾಂಧಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ವಿಜಯ್ ಮಿಶ್ರಾ ಆಗಸ್ಟ್ 4, 2018ರಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

click me!