ಇಂಡೋ-ಪಾಕ್ ಗಡಿಯಲ್ಲಿ ಎಲ್ಲರೂ ಯೋಧರೆ, ಫೆನ್ಸಿಂಗ್ ನಡುವೆ ಜಿಂಕೆಗಳ ಕಾಳಗ ವಿಡಿಯೋ ವೈರಲ್!

Published : Jul 29, 2024, 05:25 PM ISTUpdated : Jul 29, 2024, 05:34 PM IST
ಇಂಡೋ-ಪಾಕ್ ಗಡಿಯಲ್ಲಿ ಎಲ್ಲರೂ ಯೋಧರೆ, ಫೆನ್ಸಿಂಗ್ ನಡುವೆ ಜಿಂಕೆಗಳ ಕಾಳಗ ವಿಡಿಯೋ ವೈರಲ್!

ಸಾರಾಂಶ

ಇಂಡೋ ಪಾಕ್ ಗಡಿಯಲ್ಲಿ ಸೈನಿಕರಿಗೆ ಮಾತ್ರ ವೈರತ್ವವಲ್ಲ, ಪ್ರಾಣಿಗಳು ಇದಕ್ಕೆ ಹೊರತಾಗಿಲ್ಲ. ಇದೀಗ ಪಾಕಿಸ್ತಾನದ ಜಿಂಕೆಯೊಂದಿಗೆ ಭಾರತದ ಗಡಿಯೊಳಗಿರುವ ಜಿಂಕೆ ಕಾದಾಡಿದ ವಿಡಿಯೋ ವೈರಲ್ ಆಗಿದೆ. ಈ ಕುರಿತು ಕಮೆಂಟ್ ಮತ್ತಷ್ಚು ರೋಚಕವಾಗಿದೆ.  

ರಾಜಸ್ಥಾನ(ಜು.29) ಭಾರತ ಪಾಕಿಸ್ತಾನ ಗಡಿಯಲ್ಲಿ ಉದ್ವಿಘ್ವ ವಾತಾವರಣ ಸುದ್ದಿ ನೀವು ಕೇಳಿರುತ್ತೀರಿ. ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ, ಭಾರತದ ಪ್ರತಿ ದಾಳಿ. ಭಾರತೀಯ ಯೋಧರಿಂದ ತಕ್ಕ ಪಾಠ. ಈ ಘಟನೆಗಳು ಇಂಡೋ -ಪಾಕ್ ಗಡಿಯಲ್ಲಿ ಸಾಮಾನ್ಯ. ಗಡಿ ಸಮೀಪಿಸಿದರೆ ವೈರತ್ವ ಸೈನಿಕರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಅದೇ ದ್ವೇಷ ಇದ್ದಂಗೆ ಕಾಣುತ್ತಿದೆ. ಭಾರತ ಪಾಕಿಸ್ತಾನದಲ್ಲಿ ಇದೀಗ ಎರಡು ಜಿಂಕೆಗಳು ಕಾದಾಡಿದ ವಿಡಿಯೋ ಭಾರಿ ವೈರಲ್ ಆಗಿದೆ. ಭಾರತ ಹಾಗೂ ಪಾಕಿಸ್ತಾನ ಗಡಿಯನ್ನು ಫೆನ್ಸಿಂಗ್ ಮೂಲಕ ಬೇರ್ಪಡಿಸಲಾಗಿದೆ. ಒಂದು ಜಿಂಕೆ ಪಾಕಿಸ್ತಾನ ಗಡಿಯೊಳಗಿದ್ದರೆ, ಮತ್ತೊಂದು ಜಿಂಕೆ ಭಾರತದ ಗಡಿಯೊಳಗಿದೆ. ಎರಡೂ ಜಿಂಕಗಳು ಭೀಕರ ಕಾಳಗ ನಡೆಸಿದೆ. ಆದರೆ ಫೆನ್ಸಿಂಗ್ ಕಾರಣ ಹೆಚ್ಚಿನ ಅಪಾಯ ಸಂಭವಿಸಿಲ್ಲ.

ರಾಜಸ್ಥಾನದಲ್ಲಿರುವ ಭಾರತ ಪಾಕ್ ಗಡಿಯಲ್ಲಿ ಈ ಕಾಳಗ ನಡೆದಿದೆ. ಹಲವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಬಿಎಸ್‌ಎಫ್ ಯೋಧರು ಈ ದೃಶ್ಯ ಸೆರೆ ಹಿಡಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಭಾರತದ ಗಡಿಯಲ್ಲಿನ ಮಣ್ಣಿನ ಶಕ್ತಿಯನ್ನು ವಿವರಿಸುವಂತಿದೆ. ಗಡಿಯಲ್ಲಿ ಎಲ್ಲರೂ ಯೋಧರೆ, ಗುರಿ, ಉದ್ದೇಶ ಒಂದೆ ನಮ್ಮ ನೆಲವನ್ನು ಸುರಕ್ಷಿತವಾಗಿಡುವುದು. ಈ ವಿಡಿಯೋ ಕೂಡ ಈ ನಿಟ್ಟಿನಲ್ಲಿ ಮುಖದ ಮೇಲೆ ನಗು ಮೂಡಿಸದೇ ಇರದು.

ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮ ನಸುಳುವಿಕೆ ಹೇಗೆ? ವಿಡಿಯೋ ಮೂಲಕ ತೋರಿಸಿದ ಯೂಟ್ಯೂಬರ್!

ಈ ವಿಡಿಯೋದಲ್ಲಿ ಎರಡು ದೇಶಗಳನ್ನು ಗಟ್ಟಿಮುಟ್ಟಾದ ಫೆನ್ಸಿಂಗ್ ಮೂಲಕ ಬೇರ್ಪಡಿಸಲಾಗಿದೆ. ಉದ್ದಕ್ಕೆ ಫೆನ್ಸಿಂಗ್ ಹಾಕಿರುವುದು ಈ ವಿಡಿಯೋದಲ್ಲಿ ಕಾಣಬಹುದು. ಜೊತೆಗೆ ಕೆಲ ದೂರದಲ್ಲಿ ಬಂಕರ್ ಹಾಗೂ ಪೋಸ್ಟ್‌ನ್ನು ಗಮನಿಸಬಹುದು.  ಭಾರತದ ಗಡಿಯೊಳಗಿರುವ ಜಿಂಕೆಯೊಂದು, ಅತ್ತ ಪಾಕಿಸ್ತಾನದ ಗಡಿಯೊಳಗಿರುವ ಜಿಂಕೆಯನ್ನು ಗಮಮಿಸಿದೆ. ತಕ್ಷಣವೇ ಫೆನ್ಸಿಂಗ್ ಬಳಿ ಹೋಗಿದೆ. ಇತ್ತ ಪಾಕಿಸ್ತಾನದ ಗಡಿಯೊಳಗಿರುವ ಜಿಂಕೆ ಕೂಡ ಫೆನ್ಸಿಂಗ್ ಹತ್ತಿರ ಬಂದಿದೆ. ಅಲ್ಲಿಂದ ಶುರುವಾದ ಕಾಳಗ ನಿಲ್ಲಲೇ ಇಲ್ಲ.  ಎರಡೂ ಜಿಂಕೆಯ ಹೋರಾಟ ಹೇಗಿತ್ತೆಂದರೆ, ನಿಜಕ್ಕೂ ಈ ಪ್ರಾಣಿಗಳಿಗೆ ಭಾರತ -ಪಾಕಿಸ್ತಾನ ಗಡಿ ಚೆನ್ನಾಗಿ ಅರಿತಿರುವ ರೀತಿ ಕಾದಾಡಿದೆ.

 

 

ಎರಡೂ ಜಿಂಕೆಗಳು ತೀವ್ರ ಕಾಳಗ ನಡೆಸಿದೆ. ಆದರೆ ನಡುವಿನ ಫೆನ್ಸಿಂಗ್ ಈ ಎರಡು ಜಿಂಕೆಗಳನ್ನು ಗಂಭೀರ ಗಾಯವಾಗದಂತೆ ನೋಡಿಕೊಂಡಿದೆ. ಕಾರಣ ಈ ಜಿಂಕೆಗಳು ಗುದ್ದಾಟವನ್ನು ಫೆನ್ಸಿಂಗ್ ತಡೆದುಕೊಂಡಿದೆ. ಕೆಲ ಹೊತ್ತು ಕಾಳಗ ನೋಡಿದ ಬಿಎಸ್‌ಎಫ್ ಯೋಧರು ಬಳಿಕ ತಮ್ಮ ವಾಹನದ ಮೂಲಕ ಜಿಂಕೆ ಹತ್ತಿರ ತೆರಳಿದ್ದಾರೆ. ಈ ವೇಳೆ ಜಿಂಕೆ ಸ್ಥಳದಿಂದ ಓಡಿ ಹೋಗಲು ಯತ್ನಿಸಿದೆ. ಆದರೆ ಕೆಲ ದೂರ ತೆರಳಿದ ಜಿಂಕೆ ಮತ್ತೆ ಫೆನ್ಸಿಂಗ್ ಬಳಿ ಆಗಮಿಸಿ ಯುದ್ಧ ಶುರುಮಾಡಿದೆ. 

ಹಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಇದು ಗಡಿ ಮಣ್ಣಿನ ಗುಣ. ಇಲ್ಲಿ ಎಲ್ಲರು ಯೋಧರೆ ಎಂದಿದ್ದಾರೆ. ಮತ್ತೆ ಕೆಲವರು ಸಂಪ್ರಾದಾಯಿಕ ವೈರಿ, ಬದ್ಧವೈರಿ ಎಂದು ಭಾರತ ಪಾಕಿಸ್ತಾನವನ್ನು ಕರೆಯುತ್ತಾರೆ. ಈ ವಿಡಿಯೋ ನೋಡಿಯೇ ಇಟ್ಟಿರಬೇಕು ಎಂದಿದ್ದಾರೆ. ಇಂಡೋ ಪಾಕಿಸ್ತಾನ ಗಡಿ ಎಂದು ಪ್ರಾಣಿಗಳು ಅರಿವಾಗಿದೆ. ಅದೃಷ್ಟವಶಾತ್ ಪಕ್ಷಿಗಳಿಗೆ ಗೊತ್ತಾಗಿಲ್ಲ. ಒಂದು ವೇಳೆ ಗಡಿ ವಿಚಾರ ಗೊತ್ತಾದರೆ ಪ್ರತಿ ದಿನ ಆಕಾಶದಲ್ಲಿ ದೊಡ್ಡ ಕಾಳಗವೇ ನಡೆದಿ ರಕ್ತದೋಕುಳಿಯಾಗುತ್ತಿತ್ತು ಎಂದು ಕಮೆಂಟ್ ಮಾಡಿದ್ದಾರೆ.

ಮದುವೆಯಲ್ಲಿ ಸಿಂಧೂರ ತೊಡಿಸುತ್ತಿದ್ದಂತೆ ಕುಸಿದು ಬಿದ್ದ ವಧು, ಬಳಿಕ ನಡೆದಿದ್ದೇ ಅಚ್ಚರಿ!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಅಮೆರಿಕ ತೆರಿಗೆ ದಾಳಿಗೆ ಒಳಗಾದ ದೇಶಗಳಿಂದ ಮಾದರಿಯಾದ ಚೀನಾ; ಟ್ರಂಪ್‌ಗೆ ಶಾಕ್ ನೀಡಿ ದಾಖಲೆ ಬರೆದ ಡ್ರ್ಯಾಗನ್
ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ