ದೇಶದಲ್ಲಿ ಕೊರೋನಾ ವೈರಸ್ ಅಬ್ಬರ ಕೊಂಚ ಇಳಿಕೆ!

By Kannadaprabha NewsFirst Published Aug 17, 2020, 9:11 AM IST
Highlights

ಕೊರೋನಾ ಅಬ್ಬರ ಕೊಂಚ ಇಳಿಕೆ| ನಿನ್ನೆ 56,507 ಕೇಸ್‌, 933 ಮಂದಿ ಸಾವು| ಸೋಂಕಿತರ ಸಂಖ್ಯೆ 26 ಲಕ್ಷಕ್ಕೇರಿಕೆ

ನವದೆಹಲಿ(ಆ.17): ದೇಶದಲ್ಲಿ ಕೊರೋನಾ ವೈರಸ್‌ ಅಬ್ಬರ ಕೊಂಚ ಮಟ್ಟಿಗೆ ಇಳಿಕೆ ಆಗಿದೆ. ಕಳೆದ ಕೆಲವು ದಿನಗಳಿಂದ ಸರಾಸರಿ 60 ಸಾವಿರಕ್ಕಿಂತ ಹೆಚ್ಚಿನ ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ, ಭಾನುವಾರ 56,507 ಪ್ರಕರಣಗಳು ದಾಖಲಾಗಿವೆ. ಮೂಲಕ ಸೋಂಕಿತರ ಸಂಖ್ಯೆ 26 ಲಕ್ಷ ಗಡಿ ದಾಟಿದ್ದು, 26,42,344ಕ್ಕೆ ಹೆಚ್ಚಳಗೊಂಡಿದೆ. ಒಂದೇ ದಿನ ಕೊರೋನಾ ವೈರಸ್‌ಗೆ 933 ಮಂದಿ ಬಲಿ ಆಗಿದ್ದು, ಸಾವಿನ ಸಂಖ್ಯೆ 50,951ಕ್ಕೆ ತಲುಪಿದೆ.

ಕೊರೋನಾಗೆ ಹಿರಿಯ ಪತ್ರಕರ್ತ ಸೋಮಶೇಖರ್‌ ಯಡವಟ್ಟಿ ಬಲಿ

5 ದಿನಗಳ ಬಳಿಕ ದೈನಂದಿನ ಕೊರೋನಾ ವೈರಸ್‌ ಪ್ರಕರಣಗಳು ಮೊದಲ ಬಾರಿ 60 ಸಾವಿರಕ್ಕಿಂತ ಕಡಿಮೆ ದಾಖಲಾಗಿವೆ. ಹೀಗಾಗಿ ಕೊರೋನಾ ವೈರಸ್‌ ಪ್ರಕರಣಗಳು ಇಳಿಕೆ ಆಗುವ ಆಶಾವಾದ ಗೋಚರಿಸಿದೆ.

ಇದೇ ವೇಳೆ 54,177 ಮಂದಿ ಕೊರೋನಾದಿಂದ ಚೇತರಿಸಿಕೊಂಡಿದ್ದು, ಗುಣಮುಖರಾದವರ ಸಂಖ್ಯೆ 19,09,541ಕ್ಕೆ ಹೆಚ್ಚಳಗೊಂಡಿದೆ. ಗುಣಮುಖರಾದವರ ಸಂಖ್ಯೆ 20 ಲಕ್ಷದತ್ತ ಸಾಗುತ್ತಿದೆ.

ಹಾಸನ: ಮೈಮೇಲೆ ದೇವರು ಬಂದಿದೆ ಎಂದು ಕೋವಿಡ್‌ ರೋಗಿಯ ಮೇಲೆ ಸೆಕ್ಯುರಿಟಿ ಗಾರ್ಡ್‌ ಹಲ್ಲೆ

ದಿನಾಂಕ ಸೋಂಕು ಸಾವು

ಆ.11 60926| 922

ಆ.12 63994| 944

ಆ.13 69612| 1010

ಆ.14 62425| 976

ಆ.15 67339| 964

click me!