ವೈರಸ್‌ ಕೊಲ್ಲುವ ಯಂತ್ರ, ಪ್ರತ್ಯೇಕ ಚೇಂಬರ್‌: ಕಲಾಪಕ್ಕೆ ಸಂಸತ್ತಲ್ಲಿ ವಿಶೇಷ ಸಿದ್ಧತೆ!

By Kannadaprabha NewsFirst Published Aug 17, 2020, 7:14 AM IST
Highlights

ಕಲಾಪಕ್ಕೆ ಸಂಸತ್ತಲ್ಲಿ ವಿಶೇಷ ಸಿದ್ಧತೆ| ವೈರಸ್‌ ಕೊಲ್ಲುವ ಯಂತ್ರ, ಪ್ರತ್ಯೇಕ ಚೇಂಬರ್‌| ಸೆ.23ರೊಳಗೆ ಅಧಿವೇಶನ ನಡೆಸಲು ಕೇಂದ್ರದ ಸಿದ್ಧತೆ

ನವದೆಹಲಿ(ಆ.17): ಕೊರೋನಾ ವೈರಸ್‌ ಆತಂಕದ ನಡುವೆಯೂ ಸಂಸತ್‌ ಅಧಿವೇಶನ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಸೋಂಕು ಹರಡದಂತೆ ನೋಡಿಕೊಳ್ಳಲು ವಿಶೇಷ ವ್ಯವಸ್ಥೆ ಕೈಗೊಂಡಿದೆ. ಸಂಸತ್‌ ಭವನದೊಳಗೆ ವೈರಸ್‌ ಕೊಲ್ಲುವ ಯಂತ್ರಗಳನ್ನು ಅಳವಡಿಸುವುದು, ಲೋಕಸಭೆ ಮತ್ತು ರಾಜ್ಯಸಭೆಯ ಚೇಂಬರ್‌ಗಳು ಮತ್ತು ಗ್ಯಾಲರಿಗಳಲ್ಲೂ ಸಂಸದರಿಗೆ ಆಸನದ ವ್ಯವಸ್ಥೆ ಕಲ್ಪಿಸುವುದು, ಅಲ್ಲಿ ಟೀವಿ ಸ್ಕ್ರೀನ್‌ಗಳನ್ನು ಅಳವಡಿಸುವುದು ಮುಂತಾದವು ಇದರಲ್ಲಿ ಸೇರಿವೆ.

ಕೊರೋನಾ ಜೊತೆ ಬದುಕುವುದು ರೂಢಿಸಿಕೊಳ್ಳುವುದು ಅನಿವಾರ್ಯ

ಈಗ ನಡೆಯಬೇಕಿರುವುದು ಸಂಸತ್ತಿನ ಮುಂಗಾರು ಅಧಿವೇಶನವಾಗಿದ್ದು, ದಿನಾಂಕ ಇನ್ನೂ ನಿಗದಿಯಾಗಿಲ್ಲ. ಕೊರೋನಾ ವೈರಸ್‌ ಲಾಕ್‌ಡೌನ್‌ ಜಾರಿಯಾದ ನಂತರ ನಡೆಯುವ ಮೊದಲ ಅಧಿವೇಶನ ಇದಾಗಿರುತ್ತದೆ. ಒಂದು ಅಧಿವೇಶನದಿಂದ ಇನ್ನೊಂದು ಅಧಿವೇಶನಕ್ಕೆ ಆರು ತಿಂಗಳಿಗಿಂತ ಹೆಚ್ಚು ಸಮಯದ ಅಂತರ ಇರಬಾರದ ಕಾರಣ ಸೆ.23ರೊಳಗೆ ಸಂಸತ್‌ ಅಧಿವೇಶನ ನಡೆಸುವ ಅನಿವಾರ್ಯತೆ ಸರ್ಕಾರಕ್ಕಿದೆ. ಆಗಸ್ಟ್‌ ಅಂತ್ಯ ಅಥವಾ ಸೆಪ್ಟೆಂಬರ್‌ ಆರಂಭದಲ್ಲಿ ಅಧಿವೇಶನ ನಡೆಯುವ ನಿರೀಕ್ಷೆ ಇದೆ. ಹೀಗಾಗಿ ಸಾಮಾಜಿಕ ಅಂತರ ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸಿ, ಎರಡೂ ಸದನಗಳನ್ನು ಒಂದು ಕಲಾಪಕ್ಕೆ ಬಳಸಿಕೊಂಡು, ಒಂದಾದ ಮೇಲೊಂದು ಸದನದ ಅಧಿವೇಶನ ನಡೆಸಲು ಸಿದ್ಧತೆ ಆರಂಭವಾಗಿದೆ.

4 ತಾಸು ಕಲಾಪ:

ಮೂಲಗಳ ಪ್ರಕಾರ, ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪವನ್ನು ದಿನಕ್ಕೆ 4 ತಾಸಿಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ರಾಜ್ಯಸಭೆಯಲ್ಲಿ ವೈರಸ್‌ ಕೊಲ್ಲುವ ಅಲ್ಟಾ್ರವೈಲೆಟ್‌ ರೇಡಿಯೇಶನ್‌ ಯಂತ್ರಗಳನ್ನು ಅಳವಡಿಸುವ ಪ್ರಸ್ತಾವನೆಯಿದೆ. ಉಭಯ ಸದನಗಳ ಚೇಂಬರ್‌ ಮತ್ತು ಗ್ಯಾಲರಿಗಳಲ್ಲೂ ಸಂಸದರಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತದೆ. ಚೇಂಬರ್‌ಗಳಲ್ಲಿ 4 ಬೃಹತ್‌ ಸ್ಕ್ರೀನ್‌ (85 ಇಂಚು) ಹಾಗೂ 6 ಸಣ್ಣ ಸ್ಕ್ರೀನ್‌ (40 ಇಂಚು) ಅಳವಡಿಸಲಾಗುತ್ತದೆ. ಆ ಸ್ಕ್ರೀನ್‌ಗಳಲ್ಲಿ ಕಲಾಪ ವೀಕ್ಷಿಸುತ್ತಾ, ಸಂಸದರು ಅಲ್ಲಿಂದಲೇ ಕಲಾಪದಲ್ಲಿ ಪಾಲ್ಗೊಳ್ಳಬಹುದು.

ಖ್ಯಾತ ಗಾಯಕ SP ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ

ದೇವೇಗೌಡರಿಗೆ ಚೇಂಬರ್‌:

ಬೇರೆ ಬೇರೆ ರಾಜಕೀಯ ಪಕ್ಷದ ಸಂಸದರಿಗೆ ಪ್ರತ್ಯೇಕವಾಗಿ ಚೇಂಬರ್‌ ಅಥವಾ ಗ್ಯಾಲರಿಗಳಲ್ಲಿ ಆಸನದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇನ್ನುಳಿದವರಿಗೆ ಸದನದಲ್ಲೇ ಆಸನದ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿದಿನ ಎರಡೂ ಸದನಗಳ ಜಾಗವನ್ನು ಬಳಸಿಕೊಂಡು, ಮೊದಲಿಗೆ ನಾಲ್ಕು ತಾಸು ಲೋಕಸಭೆಯ ಅಧಿವೇಶನ ಮತ್ತು ನಂತರದ ನಾಲ್ಕು ತಾಸು ರಾಜ್ಯಸಭೆಯ ಅಧಿವೇಶನ ನಡೆಸುವ ಚಿಂತನೆಯಿದೆ. ಚೇಂಬರ್‌ಗಳು ಮತ್ತು ಅಧಿಕಾರಿಗಳ ಗ್ಯಾಲರಿಯ ನಡುವೆ ಪಾಲಿಕಾರ್ಬೋನೇಟ್‌ ಶೀಟ್‌ಗಳನ್ನು ಅಳವಡಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಉಭಯ ಸದನಗಳ ಪ್ರತಿಪಕ್ಷದ ನಾಯಕರಿಗೆ ರಾಜ್ಯಸಭೆಯ ಚೇಂಬರ್‌ಗಳಲ್ಲಿ ಆಸನ ಕಾಯ್ದಿರಿಸಲಾಗುತ್ತದೆ. ಮಾಜಿ ಪ್ರಧಾನಿಗಳಾದ ಮನಮೋಹನ ಸಿಂಗ್‌ ಮತ್ತು ಎಚ್‌.ಡಿ.ದೇವೇಗೌಡ ಅವರಿಗೂ ಚೇಂಬರ್‌ಗಳಲ್ಲಿ ಆಸನ ಕಾಯ್ದಿರಿಸಲಾಗುತ್ತದೆ.

ಇನ್ನು, ಸೀಮಿತ ಸಂಖ್ಯೆಯ ಪತ್ರಕರ್ತರು ಮತ್ತು ಅಧಿಕಾರಿಗಳಿಗೆ ಮಾತ್ರ ಸದನದಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲಾಗುತ್ತದೆ. ಪತ್ರಕರ್ತರು ಮತ್ತು ಮಾಜಿ ಸಂಸದರಿಗೆ ಸೆಂಟ್ರಲ್‌ ಹಾಲ್‌ಗೆ ಪ್ರವೇಶವಿರುವುದಿಲ್ಲ. ರಾಜ್ಯಸಭೆ ಮತ್ತು ಲೋಕಸಭೆ ಟೀವಿಯಲ್ಲಿ ಕಲಾಪದ ನೇರ ಪ್ರಸಾರವಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಖ್ಯಾತ ಗಾಯಕ SP ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ

ಸಂಸತ್ತಿನಲ್ಲಿ ಏನೇನು ಅಳವಡಿಕೆ?

-ಲೋಕಸಭೆ, ರಾಜ್ಯಸಭೆ ವಿಲೀನಗೊಳಿಸಿ ಕಲಾಪ

-ದಿನಕ್ಕೆ 4 ತಾಸು ಲೋಕಸಭೆ ನಂತರ 4 ತಾಸು ರಾಜ್ಯಸಭೆ ಕಲಾಪ

-ಪ್ರಧಾನಿ, ಸಚಿವರು, ಪ್ರತಿಪಕ್ಷ ನಾಯಕರಿಗೆ ರಾಜ್ಯಸಭೆ ಚೇಂಬರ್‌ಗಳಲ್ಲಿ ಆಸನ

-ಚೇಂಬರ್‌ಗಳಲ್ಲಿ ಬೃಹತ್‌ ಟಿವಿ ಪರದೆ ಅಳವಡಿಕೆ

-ಗ್ಯಾಲರಿಗಳಲ್ಲೂ ಸಂಸದರಿಗೆ ಆಸನ ವ್ಯವಸ್ಥೆ

-ಮನಮೋಹನ್‌ಸಿಂಗ್‌, ದೇವೇಗೌಡಗೂ ಚೇಂಬರ್‌ ವ್ಯವಸ್ಥೆ

-ಚೇಂಬರ್‌ಗಳ ನಡುವೆ ಪಾಲಿಕಾರ್ಬೋನೇಟ್‌ ಶೀಟ್‌ ಅಳವಡಿಕೆ

click me!