
ನವದೆಹಲಿ: ಸಾಲಬಾಧೆಯಿಂದ ಬಳಲುತ್ತಿದ್ದ 33 ವರ್ಷದ ಪ್ರಾಪರ್ಟಿ ಡೀಲರ್ ಒಬ್ಬರು ತಾವು ಮುದ್ದಾಗಿ ಸಾಕುತ್ತಿದ್ದ ಲ್ಯಾಬ್ರಡಾರ್ ನಾಯಿಗೆ ವಿಷವಿಕ್ಕಿ ತಾನು ಸಾವಿಗೆ ಶರಣಾದಂತಹ ಮನಕಲುಕುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. 33 ವರ್ಷದ ನಿಕಿಲ್ ಆರೋರಾ ಸಾವಿಗೆ ಶರಣಾದ ಯುವಕ ಆರೋರಾ ಅವರು ತಮ್ಮ ಪ್ರೀತಿಯ ಸಾಕು ನಾಯಿ 'ಪ್ರೇಮಿ' ಜೊತೆಗೆ ಒಬ್ಬಂಟಿಯಾಗಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು.
ಪೊಲೀಸ್ ವರದಿಗಳ ಪ್ರಕಾರ ಅವರ ನಿಖಿಲ್ ಅವರು ತಮ್ಮ ಪೋಷಕರ ಚಿಕಿತ್ಸೆಗಾಗಿ ಲಕ್ಷಾಂತರ ರೂ ವೆಚ್ಚ ಮಾಡಿದ್ದರು. ಇದರಿಂದಾಗಿ ಅವರ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಹಾಗೂ ಅವರು ಮನೆಯನ್ನು ಇದೇ ಕಾರಣಕ್ಕಾಗಿ ಮಾರಬೇಕಾಗಿ ಬಂದಿತ್ತು. ಜೊತೆಗೆ ಹಲವರ ಬಳಿ ಅವರು ಸಾಕಷ್ಟು ಸಾಲವನ್ನು ಮಾಡಿದ್ದರು ಇದು ಅವರ ಮಾನಸಿಕ ಖಿನ್ನತೆ ಹೆಚ್ಚಾಗುವುದಕ್ಕೆ ಕಾರಣವಾಗಿತ್ತು.
ಬುಧವಾರ ನಿಖಿಲ್ ಅರೋರಾ ಅವರು ತಮ್ಮ ಸ್ನೇಹಿತ ಧೀರಜ್‌ನ ಮನೆಗೆ ಊಟಕ್ಕೆ ಹೋಗಬೇಕಿತ್ತು. ಆದರೆ ಅವರು ಅಲ್ಲಿಗೆ ತಲುಪಿರಲಿಲ್ಲ, ಆತ ಬಾರದೇ ಇರುವುದರಿಂದ ಅನುಮಾನಗೊಂಡ ಧೀರಜ್ ಹಾಗೂ ಇತರರು ನಿಖಿಲ್ ಆರೋರಾ ವಾಸವಿದ್ದ ಬಾಡಿಗೆ ಮನೆಯ ಬಳಿ ಹೋಗಿ ನೋಡಿದಾಗ ಮನೆ ಒಳಗಿನಿಂದ ಲಾಕ್ ಮಾಡಲಾಗಿತ್ತು. ಕೂಡಲೇ ಅವರು ಪೊಲೀಸರಿಗೆ ಕರೆ ಮಾಡಿ ಕರೆಸಿದ್ದು, ಬಾಗಿಲು ಮುರಿದು ಒಳಗೆ ಹೋದಾಗ ನಿಖಿಲ್ ಹಾಗೂ ಆತನ ಸಾಕುನಾಯಿ ಒಬ್ಬರ ಪಕ್ಕ ಒಬ್ಬರು ಮನೆಯೊಳಗೆ ನಿರ್ಜೀವವಾಗಿ ಬಿದ್ದಿದ್ದರು. ಪೊಲೀಸರು ಅಲ್ಲಿ ಒಂದು ಖಾಲಿಯಾದ ಮಜ್ಜಿಗೆ ಪ್ಯಾಕೇಟ್ ಹಾಗೂ ಖಾಲಿಯಾದ ವಿಷದ ಮಾತ್ರೆಯ ಪ್ಯಾಕೇಟ್ ಪತ್ತೆಯಾಗಿತ್ತು.
ಇದನ್ನೂ ಓದಿ: 2ನೇ ಮದುವೆಗೂ ನನಗೆ 'ಕನ್ಯೆ'ಯೇ ಬೇಕು ಎಂದ ವಿಚ್ಛೇದಿತ ಐಐಟಿ ಪದವೀಧರನ ಬೇಡಿಕೆಗೆ ಮ್ಯಾಚ್ ಮೇಕರ್ ಗರಂ
ಪೊಲೀಸರ ಪ್ರಕಾರ ನಿಖಿಲ್ ಅವರು ಈ ಸಲ್ಫಾಸ್ ಮಾತ್ರೆಗಳನ್ನು ಮಜ್ಜಿಗೆ ಜೊತೆ ಮಿಕ್ಸ್ ಮಾಡಿ ಮೊದಲಿಗೆ ನಾಯಿಗೆ ಕೊಟ್ಟು ಬಳಿಕ ತಾನು ಕುಡಿದಿದ್ದಾನೆ. ಈ ಸಲ್ಫಾಸ್ ಮಾತ್ರೆಗಳು ತುಂಬಾ ವಿಷಕಾರಿ ಕೀಟನಾಶಕವಾಗಿದ್ದು, ಬೆಳೆಕಾಳುಗಳನ್ನು ರಕ್ಷಣೆಗಾಗಿ ಬಳಸಲಾಗುತ್ತದೆ. ಸ್ಥಳೀಯರ ಪ್ರಕಾರ ನಿಖಿಲ್ ನಾಯಿಯನ್ನು ತುಂಬಾ ಮುದ್ದಾಗಿ ಸಾಕುತ್ತಿದ್ದ. ತನ್ನ ಸಾವಿನ ನಂತರ ಅದನ್ನು ಯಾರು ಕಾಳಜಿ ಮಾಡಬಹುದು ಎಂದು ನೊಂದು ಅದಕ್ಕೂ ವಿಷವಿಕ್ಕಿ ತಾನು ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾನೆ. ಪೊಲೀಸರು ಪ್ರಸ್ತುತ ಘಟನೆ ಬಗ್ಗೆ ತನಿಖೆ ಮಾಡುತ್ತಿದ್ದು, ನಿಖಿಲ್ ಹಾಗೂ ಆತನ ಸಾಕುನಾಯಿಯನ್ನು ಪೋಸ್ಟ್ ಮಾರ್ಟಮ್‌ಗಾಗಿ ಕಳುಹಿಸಲಾಗಿದೆ. ಈ ಘಟನೆ ಈಗ ಶ್ವಾನ ಪ್ರಿಯರನ್ನು ಕೂಡ ತೀವ್ರ ಭಾವುಕರನ್ನಾಗಿ ಮಾಡಿದೆ.
ಇದನ್ನೂ ಓದಿ: 9ನೇ ತಿಂಗಳಲ್ಲಿ ಅಮೆರಿಕಾಗೆ ಬಂದು ಮಗು ಹೆರುತ್ತಾರೆ: ಭಾರತ, ಚೀನಾ ವಿರುದ್ಧ ಟ್ರಂಪ್ ಮತ್ತೆ ಆಕ್ರೋಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ