380 ನೌಕರರು ಕೆಲಸ ಮಾಡುತ್ತಿದ್ದ ಫಾರ್ಮಾ ಕಂಪನಿಯಲ್ಲಿ ಸ್ಫೋಟ, ಮೃತರ ಸಂಖ್ಯೆ 17ಕ್ಕೆ ಏರಿಕೆ!

ಆಂಧ್ರ ಪ್ರದೇಶದ ಫಾರ್ಮಾ ಕಂಪನಿಯಲ್ಲಿ ಸಂಭವಿಸಿದ ಸ್ಫೋಟ ಪರಿಣಾಮ ಭಾರಿ ಅವಘಡ ಸಂಭವಿಸಿದೆ. ಮೃತರ ಸಂಖ್ಯೆ 17ಕ್ಕೆ ಏರಿಕೆಯಾಗಿದ್ದು, ಗಂಭೀರ ಗಾಯಗೊಂಡವರ ಸಂಖ್ಯೆ 41. 


ಅನಕಪಲ್ಲೆ(ಆ.21) ಆಂಧ್ರ ಪ್ರದೇಶದ ಫಾರ್ಮಾ ಕಂಪನಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಸ್ಫೋಟ ಸಂಭವಿಸಿದೆ. 380 ನೌಕರರು ಕೆಲಸ ಮಾಡುತ್ತಿದ್ದ ಫಾರ್ಮಾ ಕಂಪನಿ ಫ್ಯಾಕ್ಟರಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ಪರಿಣಾಮ ಮೃತರ  ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಇನ್ನು ಗಂಭೀರವಾಗಿ ಗಾಯಗೊಂಡವರ ಸಂಖ್ಯೆ 41. ಅಚ್ಚುತಪುರಂ ಸ್ಪೆಷಲ್ ಎಕಾನಾಮಿಕ್ ಝೋನ್‌ನಲ್ಲಿರುವ ಎಸೈಂಟಿಯಾ ಫಾರ್ಮಾ ಕಂಪನಿಯಲ್ಲಿ ಈ ದುರಂತ ಸಂಭವಿಸಿಸಿದೆ. ಗಾಯಗೊಂಡವರನ್ನು ಎನ್‌ಟಿಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 

ಆರಂಭದಲ್ಲಿ ರಿಯಾಕ್ಟರ್ ಸ್ಫೋಟ ಎಂದು ಹೇಳಲಾಗಿತ್ತು. ಆದರೆ ಸ್ಥಳಕ್ಕೆ ಬೇಟಿ ನೀಡಿರುವ ಜಿಲ್ಲಾಧಿಕಾರಿ ರಿಯಾಕ್ಟರ್‌ನಿಂದ ಸ್ಫೋಟ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿದ್ಯುತ್ ಸಂಪರ್ಕದಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟ ಸಂಭವಿಸಿದೆ.  ಈ ಫಾರ್ಮಾ ಕಂಪನಿಯಲ್ಲಿ 380 ನೌಕರರು ಎರಡು ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಾರೆ. ಮಧ್ಯಾಹ್ನ 2.15ರ ಊಟದ ಸಮಯದ ವೇಳೆ ಈ ಸ್ಫೋಟ ಸಂಭವಿಸಿದೆ.

Latest Videos

ಲಿಥಿಯಂ ಬ್ಯಾಟರಿ ಕೊಂಡೊಯ್ಯುತ್ತಿರುವಾಗ ಲಿಫ್ಟ್‌ನಲ್ಲೇ ಸ್ಫೋಟಗೊಂಡು ಭಸ್ಮ: ಕೊನೆ ಕ್ಷಣ ವಿಡಿಯೋ!

ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದೆ. ಸ್ಫೋಟದ ತೀವ್ರಗೆ ಹಲವು ಮೃತದೇಹಗಳು ಸುಟ್ಟು ಕರಕಲಾಗಿದೆ. ಗಾಯಗೊಂಡವನ್ನು ರಕ್ಷಣೆ ಮಾಡಿ ಆಸ್ಪತ್ರೆ ದಾಖಲಿಸಲಾಗಿದೆ. 6 ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದೆ. ಇದರ ಪರಿಣಾಮ ಬೆಂಕಿಯನ್ನು ಅಗ್ನಿಶಾಮಕ ದಳ ಸಂಪೂರ್ಣವಾಗಿ ಆರಿಸಿದೆ. ಆದರೆ ಕಂಪನಿ ಸುತ್ತ ಮುತ್ತ ದಟ್ಟ ಹೊಗೆ ಕಾಣಿಸಿಕೊಂಡಿದೆ. 

ಘಟನೆ ಬೆನ್ನಲ್ಲೇ ಸ್ಥಳೀಯ ಜಿಲ್ಲಾಧಿಕಾರಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಸಂತ್ರಸ್ತರಿಗೆ ಅಗತ್ಯ ನೆರವಿಗೆ ಸೂಚಿಸಿದ್ದಾರೆ. ನಾಳೆ ಚಂದ್ರಬಾಬು ನಾಯ್ದು ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. 

ಮತ್ತೆ ಸ್ಪೋಟಗೊಂಡ‌ ನಂದಿ ಸಕ್ಕರೆ ಕಾರ್ಖಾನೆ ಬಾಯ್ಲರ್: ಅದೃಷ್ಟವಶಾತ್ ಕಾರ್ಮಿಕರು ಅಪಾಯದಿಂದ ಪಾರು

ಸ್ಫೋಟದ ಬಳಿಕ 13 ಮಂದಿ ಕಂಪನಿ ಒಳಗೆ ಸಿಲುಕಿಕೊಂಡಿದ್ದರು. ಗಾಯಗೊಂಡಿದ್ದ ಈ 13 ಮಂದಿಯನ್ನು ರಕ್ಷಿಸಿ ಆಸ್ಪತ್ರೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
 

click me!