ಕ್ಯೂಟ್ ರೀಲ್ಸ್ ಮೂಲಕ ಜನಪ್ರಿಯವಾಗಿದ್ದ ಇನ್ಶಾ ಘೈ ಬಾಳಲ್ಲಿ ಆಘಾತ: 29 ವರ್ಷದ ಪತಿ ನಿಧನ!

ಮದುವೆಯಾಗಿ ಕೇವಲ ಒಂದೂವರೆ ವರ್ಷವಾಗಿದೆ ಅಷ್ಟೆ. ತಮ್ಮ ಕ್ಯೂಟ್ ರೀಲ್ಸ್ ಮೂಲಕ ಇನ್ಶಾ ಘೈ ಕಾಲ್ರಾ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ. ಆದರೆ ಇದೀಗ ಆಘಾತ ಎದುರಾಗಿದೆ. ಇನ್ಶಾ ಘೈ ಕಾಲ್ರಾ ಪತಿ ಅಂಕಿತ್ ನಿಧನರಾಗಿದ್ದಾರೆ.


ಮುಂಬೈ(ಆ.21) ಪತಿ ಪತ್ನಿ ಇಬ್ಬರು ಜೊತೆ ಸೇರಿ ರೀಲ್ಸ್ ಮೂಲಕ ವೀಕ್ಷಕರ ಮನ ಗೆದ್ದಿದ್ದರು. ಸಭ್ಯತೆಯಿಂದ ಕೂಡಿದ ಇವರ ಕ್ಯೂಟ್ ರೀಲ್ಸ್ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ಶಾ ಘೈ ಕಾಲ್ರಾ ಹಾಗೂ ಪತಿ ಅಂಕಿತ್ ಕಾಲ್ರಾ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಇದೀಗ ಏಕಾಏಕಿ ಪತಿ ಅಂಕಿತ್ ಇನ್ನಿಲ್ಲ ಅನ್ನೋ ಸುದ್ದಿಯನ್ನು ಪತ್ನಿ ಇನ್ಶಾ ನೀಡಿದ್ದಾರೆ. ಕೇವಲ 29 ವಯಸ್ಸಿನ ಅಂಕಿತ್ ದಿಢೀರ್ ನಿಧನದಿಂದ ಪತ್ನಿ ಇನ್ಶಾ ಆಘಾತಗೊಂಡಿದ್ದಾಳೆ, ಇತ್ತ ಇವರ ಅಭಿಮಾನಿಗಳು ಆಘಾತಗೊಂಡಿದ್ದಾರೆ.

2023ರ ಫೆಬ್ರವರಿಯಲ್ಲಿ ಇನ್ಶಾ ಹಾಗೂ ಅಂಕಿತ್ ಮದುವೆಯಾಗಿದ್ದರು. ಸರಿಸುಮಾರು ಒಂದೊವರೆ ವರ್ಷ ಜೊತೆಯಾಗಿ ಹಲವರ ಮುಖದಲ್ಲಿ ನಗು ತರಿಸಿದ್ದ ಈ ಜೋಡಿಗೆ ಈ ರೀತಿ ನೋವು ಎದುರಾಗಿದೆ ಅನ್ನೋದು ಅವರ ಫಾಲೋವರ್ಸ್‌ಗೆ ನಂಬಲು ಸಾಧ್ಯವಾಗುತ್ತಿಲ್ಲ. ಅಂಕಿತ್ ನಿಧನ ಕುರಿತು ಇನ್ಶಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಆಗಸ್ಟ್ 19ರಂದು ಅಂಕಿತ್ ನಿಧನರಾಗಿದ್ದಾರೆ ಎಂದು ಈ ಪೋಸ್ಟ್‌ನಲ್ಲಿ ಹೇಳಲಾಗಿದೆ.

Latest Videos

ರೀಲ್ಸ್‌ನಿಂದ ಲಕ್ಷ ಲಕ್ಷ ದುಡಿಯುತ್ತಿರುವ ಬಿಂದು ಗೌಡ; ನಿಮಗೂ ಇಷ್ಟು ಫಾಲೋವರ್ಸ್‌ ಬೇಕಾ?

ಒಂದು ದಿನ ನನ್ನನ್ನು ಹಿಂದಕ್ಕೆ ಕರೆದುಕೊಂಡು ಹೋಗಿ, ನಾನು ಭಿನ್ನವಾಗಿ ಈ ಕಾರ್ಯ ಮಾಡಿತೋರಿಸುತ್ತೇನೆ ಎಂದು ಭರವಸೆ ನೀಡುತ್ತೇನೆ. ಮರಳಿ ಬಾ ಬೇಬಿ ದಯವಿಟ್ಟು, ಐ ಮಿಸ್ ಯು ಎಂದು ಇನ್ಶಾ ಬರೆದುಕೊಂಡಿದ್ದಾರೆ. ಅಂಕಿತ್ ಕಾಲ್ರಾ ಫೋಟೋ ಹಾಕಿರುವ ಇನ್ಶಾ ಜನನ ಹಾಗೂ ಮರಣ ದಿನಾಂಕವನ್ನು ದಾಖಲಿಸಿದ್ದಾರೆ.

 

 

ಈ ಪೋಸ್ಟ್ ಹಾಕಿದ ಬೆನ್ನಲ್ಲೇ ಫಾಲೋವರ್ಸ್, ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಈ ಸುದ್ದಿ ನಂಬಲು ಸಾಧ್ಯವಾಗುತ್ತಿಲ್ಲ. ಸುಳ್ಳಾಗಲಿ ಎಂದು ಆಶಿಸುತ್ತೇನೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಏನಾಗಿದೆ? ಅಂಕಿತ್ ನಿಧನಕ್ಕೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಕೇವಲ 29 ವರ್ಷದ ಚುರುಕಿನ ಹುಡುಗ ನಿಧನವಾಗಿದ್ದು ಹೇಗೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಇನ್ಶಾಗೆ ದುಖ ಸಹಿಸಿಕೊಳ್ಳುವ ಶಕ್ತಿ ಭಗವಂತ ನೀಡಲಿ ಎಂದು ಹಲವರು ಪ್ರಾರ್ಥಿಸಿದ್ದಾರೆ. ನಾವೆಲ್ಲರು ನಿಮ್ಮ ಜೊತೆಗಿದ್ದೇವೆ ಎಂದು ಹಲವು ಅಭಿಮಾನಿಗಳು ಧೈರ್ಯ ತುಂಬಿದ್ದಾರೆ. ಇದೇ ವೇಳೆ ಕೆಲವರು ಇದು ಪ್ರಚಾರಕ್ಕಾಗಿ ಮಾಡಿದ ಸ್ಟಂಟ್ ಅಲ್ಲ ಎಂದು ಭಾವಿಸುತ್ತೇನೆ. ಒಂದು ವೇಳೆ ಪ್ರಚಾರಕ್ಕಾಗಿ ಮಾಡಿದ್ದರೆ ಆ ದಿನದಿಂದಲೇ ಅನ್‌ಫಾಲೋ ಮಾಡುವುದಾಗಿ ಪ್ರತಿಕ್ರಿಯಿಸಿದ್ದಾರೆ. 

ಪ್ರೇಮಲೋಕ ಸೃಷ್ಟಿಸಿದ ಸೀತಾರಾಮ ಸಿಹಿ- ಅನಿಕೇತ್​: ಪುಟಾಣಿಗಳಿಂದ ಇಂಥ ರೀಲ್ಸಾ? ನೆಟ್ಟಿಗರ ಅಸಮಾಧಾನ


 

click me!