ಮ್ಯಾಗಿ ತಿಂದು 12 ವರ್ಷದ ಬಾಲಕ ಸಾವು! ಇಡೀ ಕುಟುಂಬ ಅಸ್ವಸ್ಥ

Published : May 11, 2024, 04:25 PM IST
ಮ್ಯಾಗಿ ತಿಂದು 12 ವರ್ಷದ ಬಾಲಕ ಸಾವು! ಇಡೀ ಕುಟುಂಬ ಅಸ್ವಸ್ಥ

ಸಾರಾಂಶ

ಅನ್ನದೊಂದಿಗೆ ಮ್ಯಾಗಿ ಮಿಕ್ಸ್ ಮಾಡಿಕೊಂಡು ತಿಂದ ಬಳಿಕ ಒಂದಿಡೀ ಕುಟುಂಬ ಅಸ್ವಸ್ಥಗೊಂಡಿದ್ದು, 12 ವರ್ಷದ ಬಾಲಕ ಸಾವಿಗೀಡಾಗಿದ್ದಾನೆ. 

ಪಿಲಿಭಿತ್: ಉತ್ತರ ಪ್ರದೇಶದ ಕೊತ್ವಾಲಿ ಪ್ರದೇಶದ ರಾಹುಲ್ ನಗರ ಚಂಡಿಯಾ ಹಜಾರಾ ಗ್ರಾಮದ ನಿವಾಸಿ ಮಣಿರಾಜ್ ಅವರ ಮೊಮ್ಮಗ 12 ವರ್ಷದ ರೋಹನ್ ಅನ್ನದೊಂದಿಗೆ ಮ್ಯಾಗಿ ತಿಂದ ಬಳಿಕ ಸಾವಿಗೀಡಾಗಿದ್ದಾನೆ. 

ಗುರುವಾರ ಸಂಜೆ ಮಣಿರಾಜ್ ಮನೆಯಲ್ಲಿ ಮ್ಯಾಗಿ ಅನ್ನ ತಯಾರಿಸಲಾಗಿತ್ತು. ಇದನ್ನು ತಿಂದ ಮಣಿರಾಜ್ ಮಗಳು ಸೀಮಾ, ಅವರ ಪತಿ ಸೋನು, ಮಕ್ಕಳಾದ ರೋಹನ್, ವಿವೇಕ್, ಮಗಳು ಸಂಧ್ಯಾ, ಕುಟುಂಬದವರಾದ ಸಂಜನಾ, ಜಿತೇಂದ್ರ, ಸಂಜು, ಮುನಿರಾಜ್ ಎಲ್ಲರ ಸ್ಥಿತಿ ಹದಗೆಡಲಾರಂಭಿಸಿತು. ಶುಕ್ರವಾರ ಬೆಳಗ್ಗೆ ಎಲ್ಲರೂ ಚಿಕಿತ್ಸೆಗಾಗಿ ಗ್ರಾಮದ ಆಸ್ಪತ್ರೆಗೆ ಹೋದರು. ಅವರ ಸ್ಥಿತಿ ಸುಧಾರಿಸಿದಾಗ ಅವರು ಮನೆಗೆ ಮರಳಿದರು. ಶುಕ್ರವಾರ ರಾತ್ರಿಯಿಂದ ಎಲ್ಲರ ಸ್ಥಿತಿ ಮತ್ತೆ ಹದಗೆಡತೊಡಗಿತು. ಚಡಪಡಿಕೆಯ ಜೊತೆಗೆ ಭೇದಿಯೂ ಶುರುವಾಯಿತು. ಸೋನು ಅವರ ಪುತ್ರ ರೋಹನ್ (12) ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಇದರಿಂದ ಕುಟುಂಬದ ಎಲ್ಲರಲ್ಲಿ ಆತಂಕ ಶುರುವಾಗಿದೆ. ಎಲ್ಲರನ್ನೂ ಪುರನ್‌ಪುರ ಸಿಎಚ್‌ಸಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಜಗತ್ತಿನ ಮೊದಲ ಜೀನ್ ಥೆರಪಿ ಪ್ರಯೋಗವಾಯ್ತು ಯಶಸ್ವಿ; ಕಿವುಡುತನದಿಂದ ಮುಕ್ತವಾದ ಮಗು
 

ಸೀಮಾ ಅವರ ಎರಡನೇ ಮಗ ವಿವೇಕ್‌ನ ಸ್ಥಿತಿ ಗಂಭೀರವಾಗಿದೆ. ಸಿಎಚ್ ಸಿಯ ಡಾ.ರಶೀದ್ ಮಾತನಾಡಿ, ಅಸ್ವಸ್ಥರಾದವರೆಲ್ಲರೂ ವಿಷಾಹಾರ ಸೇವಿಸಿದ ಲಕ್ಷಣಗಳಿವೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ