ತೀರಿಕೊಂಡ ಮಗ ತಿಥಿ ಮಾಡ್ತಿದ್ದಾಗ ಬಂದ

Published : Jun 09, 2022, 09:54 AM IST
ತೀರಿಕೊಂಡ ಮಗ ತಿಥಿ ಮಾಡ್ತಿದ್ದಾಗ ಬಂದ

ಸಾರಾಂಶ

ತಿಂಗಳಿನಿಂದಲೂ ನಾಪತ್ತೆಯಾಗಿದ್ದ ಮಗ ಮೃತಪಟ್ಟ ಎಂದು ತಿಥಿ ಮಾಡುತ್ತಿದ್ದಾಗ ಮಗ ಪ್ರತ್ಯಕ್ಷನಾದ ಘಟನೆ ತ್ರಿಪುರಾ ರಾಜ್ಯದ ಅಗರ್ತಲಾದಲ್ಲಿ ನಡೆದಿದೆ. ತಿಂಗಳ ಹಿಂದೆ ನಾಪತ್ತೆಯಾಗಿದ್ದ ಆಕಾಶ್ ಸರ್ಕಾರ್ (Akash Sarkar) ಜೂನ್‌ 7 ರಂದು ಮನೆಗೆ ಮರಳಿದ್ದಾರೆ.

ತಿಂಗಳಿನಿಂದಲೂ ನಾಪತ್ತೆಯಾಗಿದ್ದ ಮಗ ಮೃತಪಟ್ಟ ಎಂದು ತಿಥಿ ಮಾಡುತ್ತಿದ್ದಾಗ ಮಗ ಪ್ರತ್ಯಕ್ಷನಾದ ಘಟನೆ ತ್ರಿಪುರಾ ರಾಜ್ಯದ ಅಗರ್ತಲಾದಲ್ಲಿ ನಡೆದಿದೆ. ತಿಂಗಳ ಹಿಂದೆ ನಾಪತ್ತೆಯಾಗಿದ್ದ ಆಕಾಶ್ ಸರ್ಕಾರ್ (Akash Sarkar) ಜೂನ್‌ 7 ರಂದು ಮನೆಗೆ ಮರಳಿದ್ದಾರೆ. ಈ ವೇಳೆ ಆಕಾಶ್‌ ತಂದೆ  ತಂದೆ 22 ವರ್ಷದ ತಮ್ಮ ಮಗ ಮೃತಪಟ್ಟಿದ್ದಾನೆ ಎಂದು ಭಾವಿಸಿ ಆತನ ಅಂತಿಮ ವಿಧಿ ವಿಧಾನಗಳನ್ನು ನಡೆಸುತ್ತಿದ್ದರು. ಅಷ್ಟರಲ್ಲೇ ಮಗ ಮನೆಗೆ ಆಗಮಿಸಿದ್ದು, ಅಚ್ಚರಿ ದಿಗ್ಭ್ರಮೆ ಉಂಟಾಗಿದೆ.

ಪಶ್ಚಿಮ ತ್ರಿಪುರಾ (West Tripura district) ಜಿಲ್ಲೆಯ ಕಾಲಿಬಜಾರ್ ಪ್ರದೇಶದಲ್ಲಿ (Kalibazar area) ಈ ವಿಲಕ್ಷಣ ಘಟನೆ ನಡೆದಿದೆ. ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದ ತನ್ನ ಮಗನ 'ಶ್ರಾದ್ಧ'ವನ್ನು ಪೂರ್ಣಗೊಳಿಸಬೇಕು ಎನ್ನುವಷ್ಟರಲ್ಲಿ ಆಕಾಶ್‌ ಜೀವಂತವಿರುವ ಸುದ್ದಿ ತಿಳಿದ ಗ್ರಾಮಸ್ಥರು ಆಕಾಶ್ ತಂದೆ ಪ್ರಣಬ್ ಸರ್ಕಾರ್ ಅವರನ್ನು  ತಡೆದರು.

ಸತ್ತ ಮಗ ಬದುಕಿ ಬರುತ್ತಾನೆಂದು 38 ದಿನ ಸ್ಮಶಾನದಲ್ಲೇ ಕಳೆದ ತಂದೆ!

ಇದಕ್ಕೂ ಮೊದಲು ಜೂನ್ 3 ರಂದು ಪಶ್ಚಿಮ ಅಗರ್ತಲಾ ಪೊಲೀಸ್ ಠಾಣಾ ವ್ಯಾಪ್ತಿಯ ( Agartala Police Station) ಮೇಲರ್ಮಠ (Melrmath) ಬಳಿಯ ಕೆರೆಯಲ್ಲಿ ವ್ಯಕ್ತಿಯೊಬ್ಬನ ಮೃತದೇಹ ತೇಲುತ್ತಿತ್ತು. ಮೃತರು ಕಾಳಿಬಜಾರ್ (Kalibazar) ನಿವಾಸಿಯಾಗಿದ್ದು, ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು. ಕೂಡಲೇ ಪೊಲೀಸರು ಆಕಾಶ್ ಸರ್ಕಾರ್ ಕುಟುಂಬಸ್ಥರನ್ನು ಸಂಪರ್ಕಿಸಿ ಶವದ ಬಗ್ಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಆಕಾಶ್ ತಂದೆ ಪ್ರಣಬ್ ಸರ್ಕಾರ್ ಅವರಿಗೆ ಹಸ್ತಾಂತರಿಸಲಾಯಿತು.

ಕೊಳದಿಂದ ಪತ್ತೆಯಾದ ಶವವನ್ನು ಗುರುತಿಸಿದ್ದೇನೆ. ಅವನು ಧರಿಸಿದ್ದ ಅಂಗಿ ನನ್ನ ಮಗ ಅಂಗಿಗಿಂತಲೂ ಭಿನ್ನವಾಗಿದ್ದರೂ, ಬ್ಯಾಗ್ ಮತ್ತು ಪ್ಯಾಂಟ್ ಅವನದ್ದಾಗಿತ್ತು. ಬೆನ್ನುನೋವಿಗೆ ಸೇವಿಸುತ್ತಿದ್ದ ಮಾತ್ರೆಗಳೂ ಮೃತದೇಹದೊಂದಿಗೆ ಪತ್ತೆಯಾಗಿತ್ತು. ದೇಹವು ಉಬ್ಬಿಕೊಂಡಿದ್ದು ಮತ್ತು ಭಾಗಶಃ ಕೊಳೆತಿದ್ದು, ಸರಿಯಾದ ಗುರುತಿಸುವಿಕೆ ಕಷ್ಟಕರವಾಗಿದೆ ಎಂದು ಪೊಲೀಸರು ನನಗೆ ತಿಳಿಸಿದರು. ನಾನು ನನ್ನ ಮಗಳು ಮತ್ತು ಅಳಿಯನೊಂದಿಗೆ ಆಸ್ಪತ್ರೆಗೆ ಹೋಗಿದ್ದೆ ಆದರೆ ಅವರಿಗೆ ತೊಂದರೆಯಾಗುತ್ತದೆ ಎಂದು  ಭಾವಿಸಿ ನಾನು ಅವರನ್ನು ಶವಾಗಾರಕ್ಕೆ ಕರೆದೊಯ್ಯಲಿಲ್ಲ ಎಂದು ಪ್ರಣಬ್ ಸರ್ಕಾರ್ ಹೇಳಿದ್ದಾರೆ. 

ತಾಯಿ ಮಮತೆ ಎದುರು ಸೋತ ಯಮರಾಜ: ಸತ್ತ ಮಗನ ಬದುಕಿಸಿದ ಅಮ್ಮ!

ಶವಾಗಾರದಲ್ಲಿರುವ ಮೃತದೇಹವು ನನ್ನ ಮಗನದ್ದು ಎಂದು ಒಪ್ಪಿಕೊಳ್ಳುವಂತೆ ಪೊಲೀಸರು ನನಗೆ ಒತ್ತಡ ಹೇರಿದರು. ನಂತರ ನಾನು ಹಾಗೂ ನನ್ನ ಸಹೋದರ (ನನ್ನ ಮಗನ ಚಿಕ್ಕಪ್ಪ) ಶವವನ್ನು ಸುಟ್ಟು ಹಾಕಿದೆವು. ಅಲ್ಲದೇ ಶ್ರಾದ್ಧಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು. ಅಷ್ಟರಲ್ಲೇ ನನ್ನ ಮಗ ಮನೆಗೆ ಬರುತ್ತಿದ್ದಾನೆ ಎಂದು ಹೇಳಿ ಆಚರಣೆಗಳನ್ನು ನಿಲ್ಲಿಸಲು ಗ್ರಾಮಸ್ಥರೊಬ್ಬರು ನನಗೆ ಕರೆ ಮಾಡಿ ಹೇಳಿದರು.


ಈ ಮಧ್ಯೆ ತನ್ನ ಮಗನ ಚಿಕ್ಕಮ್ಮನೇ ಆತನನ್ನು ಮನೆಗೆ ಕರೆತಂದಳು ಎಂದು ಆಕಾಶ್ ಹೇಳಿಕೊಂಡಿದ್ದಾನೆ. ಮಾದಕ ವ್ಯಸನಿಯಾಗಿದ್ದ (addicted to drugs) ಆಕಾಶ್, ಶವದ ಬಳಿ ಸಿಕ್ಕ ಬ್ಯಾಗ್‌ನೊಂದಿಗೆ ಒಂದು ತಿಂಗಳ ಹಿಂದೆ ಮನೆಯಿಂದ ಹೊರಬಂದು ಜೀವನಕ್ಕಾಗಿ ಭಿಕ್ಷೆ ಬೇಡುತ್ತಿದ್ದೆ ಎಂದು ಹೇಳಿದ್ದಾನೆ.
ನಾನು ಬಟಾಲ ಸೇತುವೆಯ (Batala Bridge) ಬಳಿ ವಾಸಿಸುತ್ತಿದ್ದೆ ಮತ್ತು ನನ್ನ ಬೆನ್ನುನೋವಿನಿಂದ ದೈಹಿಕ ಕೆಲಸ ಮಾಡಲು ಸಾಧ್ಯವಾಗದ ಕಾರಣ ಜೀವನಕ್ಕಾಗಿ ಭೀಕ್ಷೆ ಬೇಡುತ್ತಿದೆ. ನನ್ನನ್ನು ಅಗರ್ತಲಾದ ಜಿಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ನನ್ನ ಚಿಕ್ಕಮ್ಮ ನನ್ನನ್ನು ಮನೆಗೆ ಕರೆತಂದರು ಮತ್ತು ನಾನು ಜೀವಂತವಾಗಿದ್ದೇನೆ ಎಂದು ನನ್ನ ಪೋಷಕರಿಗೆ ತಿಳಿಸಿದರು. ಮನೆಯಲ್ಲಿ ನನ್ನ ಶ್ರದ್ಧಾ ಮಾಡುತ್ತಿದ್ದ ಬಗ್ಗೆ ನನಗೆ ತಿಳಿದಿರಲಿಲ್ಲ ಎಂದು ಆತ ಹೇಳಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..