ಕೊಂಚ ತಡವಾದ ಕಾರಣಕ್ಕೆ ಮಹಿಳೆಯ ಬೈಗುಳ, ಬದುಕು ಅಂತ್ಯಗೊಳಿಸಿದ ಡೆಲಿವರಿ ಬಾಯ್!

By Chethan KumarFirst Published Sep 19, 2024, 3:08 PM IST
Highlights

ಒಂದೆಡೆ ಶಿಕ್ಷಣ, ಅದಕ್ಕಾಗಿ ಪಾರ್ಟ್ ಟೈಮ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಬಿಕಾಮ್ ವಿದ್ಯಾರ್ಥಿ ದುರಂತ ಅಂತ್ಯಕಂಡಿದ್ದಾನೆ. ಕಾರಣ ಡೆಲಿವರಿ ತಡವಾಗಿದೆ ಕಾರಣಕ್ಕೆ ಮಹಿಳೆಯ ಬೈಗುಳದಿಂದ ಬೇಸತ್ತ ಡೆಲಿವರಿ ಬಾಯ್ ಈ ನಿರ್ಧಾರ ತೆಗೆದುಕೊಂಡಿದ್ದಾನೆ.
 

ಚೆನ್ನೈ(ಸೆ.19) ಡೆಲಿವರಿ ಎಜೆಂಟ್‌ಗಳು ಹಲವು ಅಡೆ ತಡೆಗಳ ನಡುವೆ ತಕ್ಕ ಸಮಯಕ್ಕೆ ಆಹಾರ, ಗ್ರೋಸರಿ ಸೇರಿದಂತೆ ಉತ್ಪನ್ನಗನ್ನು ಡೆಲಿವರಿ ಮಾಡುತ್ತಾರೆ. ಮಳೆ, ಪ್ರವಾಹ, ತಡ ರಾತ್ರಿ ಸೇರಿದಂತೆ ಯಾವುದೇ ಸಮಯದಲ್ಲೂ ಡೆಲಿವರಿ ಬಾಯ್‌ಗಳು ಸದಾ ಗ್ರಾಹಕರಿಗೆ ಡೆಲಿವರಿ ಮಾಡುತ್ತಾರೆ. ಹೀಗೆ ತನ್ನ ಎಲ್ಲಾ ಸಂಕಷ್ಟ, ಅಡೆ ತಡೆಗಳ ನಡುವೆ 19 ವರ್ಷದ ಡೆಲಿವರಿ ಬಾಯ್ ಉತ್ಪನ್ನ ಡೆಲಿವರಿ ಮಾಡಿದ್ದ. ಆದರೆ ಈ ಡೆಲಿವರಿ ಕೊಂಚ ತಡವಾಗಿತ್ತು ನೋಡಿ. ಇಷ್ಟಕ್ಕೆ ಮಹಿಳಾ ಗ್ರಹಾಕರಿ ಉಗಿದು ಉಪ್ಪಿನಕಾಯಿ ಮಾಡಿದ್ದಾಳೆ. ಮಹಿಳೆಯ ಬೈಗುಳದಿಂದ ಬೇಸತ್ತ ಡೆಲಿವರಿ ಬಾಯ್ ಬದುಕನ್ನೇ ಅಂತ್ಯಗೊಳಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ.

ಜೆ ಪವಿತ್ರನ್ ಅನ್ನೋ ಡೆಲಿವರಿ ಬಾಯ್ ಪಾರ್ಟ್ ಟೈಮ್ ಆಗಿ ಕೆಲಸ ಮಾಡುತ್ತಿದ್ದ. ಬಿಕಾಂ ವ್ಯಾಸಾಂಗ ಮಾಡುತ್ತಿದ್ದ ಈತ ತನ್ನ ಶಿಕ್ಷಣ ಸೇರಿದಂತೆ ಇತರ ಅಗತ್ಯಕ್ಕಾಗಿ ಪಾರ್ಟ್ ಟೈಮ್ ಆಗಿ ಕೆಲಸ ಮಾಡುತ್ತಿದ್ದ. ಹೀಗಿರುವಾಗ ಸೆಪ್ಟೆಂಬರ 11ರಂದು ಪವಿತ್ರನ್ ಕೊರತ್ತೂರಿನಿಂದ ಬಂದಿರುವ ಆರ್ಡರ್ ಡೆಲಿವರಿ ಮಾಡಲು ತೆರಳಿದ್ದಾನೆ. ಸ್ಥಳಕ್ಕೆ ತಲುಪಿದರೂ ಮನೆ ಗುರುತಿಸಲು ಕಷ್ಟವಾಗಿದೆ. ಲೊಕೇಶನ್ ಬಳಿ ತಲುಪಿದರೂ ಮನೆ ಮಾತ್ರ ಸಿಕ್ಕಿರಲಿಲ್ಲ. ಹೀಗಾಗಿ ಮನೆ ಹುಡುಕಲು ಕೆಲ ಹೊತ್ತು ತೆಗೆದುಕೊಂಡಿದ್ದಾನೆ.

Latest Videos

ಕೆಲಸ ಕಳೆದುಕೊಂಡು ಡೆಲಿವರಿ ಬಾಯ್ ಆದ ಟೆಕ್ಕಿ, ಬೀದಿಗೆ ಬಿದ್ದು ಬೀದಿಯಿಂದ ಕಟ್ಟಿದ ಜೀವನ ನೆನೆದು ಭಾವುಕ!

ಒಂದೆರೆಡು ಕರೆ ಮಾಡಿ ಮನೆ ಹುಡುಕಿದ ಪವಿತ್ರನ್ ಕೊನೆಗೂ ಉತ್ಪನ್ನ ಗ್ರಾಹಕರಿಗೆ ತಲುಪಿಸಿದ್ದಾರೆ. ಆದರೆ ತಡವಾಗಿ ಡೆಲಿವರಿ ಮಾಡಿದ ಕಾರಣಕ್ಕೆ ಮಹಿಳೆ ಹಿಗ್ಗಾ ಮುಗ್ಗಾ ಬೈದಿದ್ದಾಳೆ. ತನ್ನ ಸಮಯ ವ್ಯರ್ಥ ಮಾಡಿರುವುದಾಗಿ ಆಕ್ರೋಶ ಹೊರಹಾಕಿದ್ದಾಳೆ.ಇಷ್ಟಕ್ಕೆ ಸುಮ್ಮನಾಗದ ಮಹಿಳೆ, ಕಂಪನಿಗೆ ಕರೆ ಮಾಡಿ ಡೆಲಿವರಿ ಬಾಯ್ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ಡೆಲಿವರಿ ಬಾಯ್‌ಗೆ ವಿಳಾಸ ಹುಡುಕಲು ಗೊತ್ತಿಲ್ಲ, ಈತನ ಡೆಲಿವರಿ ಮಾಡಲು ಕಳುಹಿಸಬೇಡಿ ಎಂದು ದೂರು ದಾಖಲಿಸಿದ್ದಾಳೆ.

ಮಹಿಳೆಯ ಬೈಗುಳದ ಬಳಿಕ ಕರ್ತವ್ಯ ಮುಗಿಸಿ ಮರಳಿದ ಪವಿತ್ರನ್ ತೀವ್ರವಾಗಿ ನೊಂದುಕೊಂಡಿದ್ದ. ಕೆಲ ದಿನಗಳಿಂದ ಈ ಘಟನೆಯಿಂದ ಹೊರಬರದ ಡೆಲಿವರಿ ಬಾಯ್ ಆಕ್ರೋಶ ತೀರಿಸಲು ಮುಂದಾಗಿದ್ದಾನೆ.  19ರ ಹರೆಯದ ಈತ ನೇರವಾಗಿ ಮಹಿಳೆ ಮನೆಯ ಬಳಿ ತೆರಳಿದ್ದಾನೆ. ಬಳಿಕ ಮಹಿಳೆಯ ಮನೆ ಮೇಲೆ ಕಲ್ಲು ತೂರಿದ್ದಾನೆ. ಕಲ್ಲು ತೂರಾಟದ ಕುರಿತು ಮಹಿಳೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ. ಸಿಸಿಟಿವಿ ಪರಿಶೀಲಿಸಿದ ಪೊಲೀಸರು ಆರೋಪಿ ಪವಿತ್ರನ್ ಠಾಣೆಗೆ ಕರೆದು ವಾರ್ನಿಂಗ್ ಮಾಡಿದ್ದಾರೆ. ವಿದ್ಯಾರ್ಥಿ ಆಗಿದ್ದ ಕಾರಣ ಪೊಲೀಸರು ವಾರ್ನಿಂಗ್ ನೀಡಿ ಬಿಟ್ಟು ಕಳುಹಿಸಿದ್ದಾರೆ. 

ಎಲ್ಲಾ ಘಟನೆಗಳಿಂದ ವಿದ್ಯಾರ್ಥಿ ತೀವ್ರವಾಗಿ ನೊಂದಿದ್ದಾನೆ. ಅಂತಿಮ ಎರಡು ದಿನ ಕಾಲೇಜಿಗೂ ತೆರಳಿಲ್ಲ, ಡೆಲಿವರಿ ಎಜೆಂಟ್ ಕೆಲಸಕ್ಕೂ ಹಾಜರಾಗಿಲ್ಲ. ಕೊನೆಗೆ ತನ್ನ ಮನೆಯಲ್ಲೇ ಬದುಕು ಅಂತ್ಯಗೊಳಿಸಿದ್ದಾನೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಹಿಳೆಯ ದೂರಿನ ಕುರಿತು ಕಂಪನಿ ಯಾವುದಾದರು ಕ್ರಮ ಕೈಗೊಂಡಿತ್ತಾ ಅನ್ನೋ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಜೊಮ್ಯಾಟೋ ಕಚೇರಿ ದುಬಾರಿ ಕಾರು, 6 ರೂ ಪ್ಲಾಟ್‌ಫಾರ್ಮ್ ಫೀನಿಂದ ಖರೀದಿ ಎಂದ ನೆಟ್ಟಿಗರು!
 

click me!