ಹುಲಿ ಸೆರೆಗೆ ಇರಿಸಲಾಗಿದ್ದ ಬೋನಿನೊಳಗೆ ಅರಣ್ಯ ಸಿಬ್ಬಂದಿಯೆ ಸಿಕ್ಕಿಬಿದ್ದ ವಿಚಿತ್ರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಹಲವು ಗಂಟೆಗಳ ಸಾಹಸದ ಬಳಿಕ ಅರಣ್ಯ ಸಿಬ್ಬಂದಿಯನ್ನು ಬೋನಿನಿಂದ ಹೊರತಂದು ರಕ್ಷಿಸಲಾಗಿದೆ.
ಲಖೀಂಪುರ: ಹುಲಿ ಸೆರೆಗೆ ಇರಿಸಲಾಗಿದ್ದ ಬೋನಿನೊಳಗೆ ಅರಣ್ಯ ಸಿಬ್ಬಂದಿಯೆ ಸಿಕ್ಕಿಬಿದ್ದ ವಿಚಿತ್ರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಹಲವು ಗಂಟೆಗಳ ಸಾಹಸದ ಬಳಿಕ ಅರಣ್ಯ ಸಿಬ್ಬಂದಿಯನ್ನು ಬೋನಿನಿಂದ ಹೊರತಂದು ರಕ್ಷಿಸಲಾಗಿದೆ. ಲಖೀಂಪುರ ಖೇರಿಯ ಇಲ್ಲಿನ ಮಹೇಶ್‌ಪುರ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹುಲಿ ಹಿಡಿಯಲು ಇಲ್ಲಿ ಬೋನನ್ನು ಸಿದ್ಧಪಡಿಸಲಾಗಿತ್ತು. ಈ ವೇಳೆ ಸಿಬ್ಬಂದಿಯೊಬ್ಬ ಬೋನಿನ ಪರಿಶೀಲನೆಗೆ ಒಳಗೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ಹೊರಗಿನಿಂದ ಲಾಕ್ ಆಗಿದೆ. ಲಾಕ್‌ನಲ್ಲಿ ದೋಷ ಕಂಡುಬಂದ ಕಾರಣ ಏನು ಮಾಡಿದರೂ ಅದನ್ನು ತೆಗೆಯಲು ಬಂದಿಲ್ಲ. ಹೀಗಾಗಿ ಒಳಗಡೆ ಸಿಕ್ಕಿಬಿದ್ದ ಸಿಬ್ಬಂದಿ ಗಂಟೆಗಳ ಕಾಲ ಗೋಳಾಡಿದ್ದಾನೆ. ಈತನ ಗೋಳಾಟ ಇಡೀ ಅರಣ್ಯಕ್ಕೆ ಕೇಳಿದೆ ಎಂದು ವರದಿಯಾಗಿದ್ದ, ಬಳಿಕ ಸತತ ಪ್ರಯತ್ನಗಳ ಬಳಿಕ ಕೆಲ ಸಲಕರಣೆಗಳನ್ನು ಬಳಸಿ ಗೇಟ್ ಬಾಗಿಲನ್ನು ತೆರಯುವಲ್ಲಿ ಸಿಬ್ಬಂದಿಗಳು ಯಶಸ್ವಿಯಾದರು.
विचित्र लोगों की कमी नहीं है. इन ही जनाब को देख लीजिए. बाघ पकड़ने के लिए पिंजरा लाए थे. ख़ुद ही पिंजरे में फँस गए हैं. साहब वन विभाग के कर्मचारी हैं. घटना यूपी के लखीमपुर की है. pic.twitter.com/BToogaUaqS
— Priya singh (@priyarajputlive)
ಗಂಡನೊಂದಿಗೆ ಜಗಳ ಮಾಡುತ್ತಿದ್ದ ಹೆಂಡತಿಯನ್ನ ಎಳೆದೊಯ್ದು ತಿಂದು ತೇಗಿದ ಹುಲಿ!