
ಪಟ್ಟಣಂತಿಟ್ಟ (ಜ.12): ಕೇರಳದಲ್ಲಿ 18 ವರ್ಷದ ದಲಿತ ಅಥ್ಲೀಟ್ ಮೇಲೆ ಆಕೆಯ ಕೋಚ್‌ಗಳು, ಸಹ ಆಟಗಾರರು ಸೇರಿದಂತೆ 64 ಪುರುಷರು 5 ವರ್ಷಗಳಿಂದ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆ ಇದೀಗ ದೂರು ನೀಡಿದ್ದು, ಇದರನ್ವಯ ಪೊಲೀಸರು ಆರೋಪಿಗಳ ವಿರುದ್ಧ 4 ಎಫ್‌ಐಆರ್ ದಾಖಲಿಸಿ 15 ಮಂದಿಯನ್ನು ಬಂಧಿಸಿದ್ದಾರೆ.
‘8ನೇ ತರಗತಿಯಲ್ಲಿದ್ದಾಗ ಅಂದರೆ 13 ವರ್ಷದವಳಿದ್ದಾಗ ಕಿರುಕುಳ ಆರಂಭವಾಯಿತು. ಪಕ್ಕದ ಮನೆಯ ವ್ಯಕ್ತಿಯೊಬ್ಬ ನನಗೆ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕವಾಗಿ ಬಳಸಿಕೊಂಡ. ನಂತರ ಕೆಲವರು ನನ್ನ ಬಡತನ ದುರ್ಬಳಕೆ ಮಾಡಿಕೊಂಡು ಶೋಷಣೆ ಮಾಡಿದರು. ನಾನು ಅಥ್ಲೀಟ್ ಆಗಿದ್ದ ಕಾರಣ ಕೋಚ್‌ಗಳು, ಆಟಗಾರರೂ ರೇಪ್ ಮಾಡಿದರು. ಈ ವೇಳೆ ನನ್ನ ಅಶ್ಲೀಲ ವಿಡಿಯೋ ಶೂಟ್ ಮಾಡಿಕೊಂಡು ಅವರು ಇತರ ಪರಿಚಯಸ್ಥರ ಜತೆ ಹಂಚಿಕೊಂಡರು ಹಾಗೂ ಬ್ಲಾಕ್ ಮೇಲ್ ಆರಂಭಿಸಿದರು. ಆಗ ಇತರರು ಕೂಡ ವಿಡಿಯೋ ತೋರಿಸಿ ಶೋಷಣೆ ನಡೆಸಿದರು’ ಎಂದು ಆಕೆ ಹೇಳಿಕೊಂಡಿದ್ದಾಳೆ.
ಸ್ಫೂರ್ತಿಯಾಯ್ತಾ ಶ್ರದ್ಧಾ ಕೇಸ್? 8 ತಿಂಗಳ ಹಿಂದೆ ಪಾರ್ಟ್ನರ್ ಹತ್ಯೆಗೈದು ಫ್ರಿಡ್ಜ್‌ನಲ್ಲಿಟ್ಟ ಕಿರಾತಕ ಅರೆಸ್ಟ್
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?:
ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲುಸಿ) ಸದಸ್ಯರು ವಾಡಿಕೆಯಂತೆ ಫೀಲ್ಡ್ ವಿಸಿಟ್ ಮಾಡುವಾಗ ಯುವತಿಯ ಮನೆಗೂ ಹೋಗಿದ್ದು, ಆಗ ಯುವತಿ ಕರಾಳ ಕೃತ್ಯದ ಬಾಯಿ ಬಿಟ್ಟಿದ್ದಾಳೆ. ಬಳಿಕ ಈ ಸಮಿತಿ ದೂರು ನೀಡಿದ್ದು, ಅತ್ಯಾಚಾರ ಪ್ರಕರಣ ಸಾರ್ವಜನಿಕವಾಗಿ ಬೆಳಕಿಗೆ ಬಂದಿದೆ. ಯುವತಿಯು ಅತ್ಯಾಚಾರಿಗಳ ಜತೆ ಮಾತನಾಡಲು ತಂದೆಯ ಫೋನ್ ಬಳಸಿದ್ದು, ಅದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಪ್ರಕರಣದ ಕುರಿತು ತನಿಖೆ ನಡೆಸಲು ಪತ್ತಣಂತಿಟ್ಟ ಎಸ್ಪಿ ವಿಶೇಷ ತಂಡ ರಚಿಸಿದ್ದಾರೆ. 15 ಜನರನ್ನು ಬಂಧಿಸಿ ಉಳಿದವರಿಗೆ ಬಲೆ ಬೀಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ