Cyrus Mistry ಅಪಘಾತಕ್ಕೆ ಕಾರು ಪಥ ಬದಲಿಸಲು ವಿಫಲವೇ ಕಾರಣ..!

By Kannadaprabha NewsFirst Published Nov 5, 2022, 8:29 AM IST
Highlights

ಕಾರು ಪಥ ಬದಲಿಸಲು ವಿಫಲವೇ ಮಿಸ್ತ್ರಿ ಕಾರು ಅಪಘಾತಕ್ಕೆ ಕಾರಣ ಎಂದು ಕಾರು ಚಲಾಯಿಸುತ್ತಿದ್ದ ಡಾ. ಅನಿಹಿತಾ ಪತಿ ಪಂಡೋಲೆ ಮಾಹಿತಿ ನೀಡಿದ್ದಾರೆ. 3ನೇ ಲೇನ್‌ನಿಂದ 2ನೇ ಲೇನ್‌ಗೆ ಕಾರಿನ ಪಥ ಬದಲಿಸಲು ಅನಿಹಿತಾ ವಿಫಲಳಾದಳು. ಇದೇ ಅಪಘಾತಕ್ಕೆ ಕಾರಣವಾಯಿತು ಎಂದಿದ್ದಾರೆ. 

ಮುಂಬೈ: ಟಾಟಾ ಕಂಪನಿ ಮಾಜಿ ಮುಖ್ಯಸ್ಥ, ಉದ್ಯಮಿ ಸೈರಸ್‌ ಮಿಸ್ತ್ರಿ (Tata Sons former chairman Cyrus Mistry) ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಕಾರಿನಲ್ಲೇ ಇದ್ದ ಅವರ ಆಪ್ತ ಡೇರಿಯಸ್‌ ಪಂಡೋಲೆ (Darius Pandole) ಅವರು ಹೇಳಿಕೆ ನೀಡಿದ್ದಾರೆ. ‘ನನ್ನ ಪತ್ನಿ ಡಾ. ಅನಿಹಿತಾ ಪಂಡೋಲೆ (Dr Anahita Pandole) ಆ ಕಾರು ಚಲಾಯಿಸುತ್ತಿದ್ದಳು. ಆದರೆ ಮೊದಲು 3 ಪಥವಿದ್ದ ರಸ್ತೆ ಏಕಾಏಕಿ 2 ಪಥಕ್ಕೆ ಸೂರ್ಯಾ ನದಿ ಸೇತುವೆ (Surya River Bridge) ಮೇಲೆ ಸಂಕುಚಿತವಾಯಿತು. ಆಗ 3ನೇ ಲೇನ್‌ನಿಂದ 2ನೇ ಲೇನ್‌ಗೆ ಕಾರಿನ ಪಥ ಬದಲಿಸಲು ಅನಿಹಿತಾ ವಿಫಲಳಾದಳು. ಇದೇ ಅಪಘಾತಕ್ಕೆ ಕಾರಣವಾಯಿತು’ ಎಂದಿದ್ದಾರೆ.

‘3ನೇ ಲೇನ್‌ನಿಂದ 2ನೇ ಲೇನ್‌ಗೆ ಮುಂದಿದ್ದ ಕಾರು ಪಥ ಬದಲಿಸಿತು. ಅದನ್ನೇ ಫಾಲೋ ಮಾಡಲು ಅನಿಹಿತಾ ಯತ್ನಿಸಿದಳು. ಆಗ 2ನೇ ಲೇನ್‌ನಲ್ಲಿ ಟ್ರಕ್‌ (Truck) ಸಂಚರಿಸುತ್ತಿದ್ದ ಕಾರಣ ಕಾರನ್ನು 2ನೇ ಲೇನ್‌ಗೆ ಬದಲಾಯಿಸಲು ಆಗದೇ ಅಪಘಾತವಾಯಿತು’ ಎಂದಿದ್ದಾರೆ.

ಇದನ್ನು ಓದಿ: Cyrus Mistry Death: ಖ್ಯಾತ ವೈದ್ಯೆ ಚಲಾಯಿಸುತ್ತಿದ್ದ ಕಾರು; ಸೀಟ್ ಬೆಲ್ಟ್ ಧರಿಸಿರಲಿಲ್ಲ ಸೈರಸ್‌ ಮಿಸ್ತ್ರಿ..!

ಸೆಪ್ಟೆಂಬರ್‌ 4ರಂದು ಅಪಘಾತ ಸಂಭವಿಸಿ ಸೈರಸ್‌ ಮಿಸ್ತ್ರಿ ಹಾಗೂ ಆಪ್ತ ಸೈರಸ್‌ ಪಂಡೋಲೆ ಮೃತಪಟ್ಟಿದ್ದರು. ಅನಿಹಿತಾ ಹಾಗೂ ಡೇರಿಯಸ್‌ ಗಾಯಗೊಂಡಿದ್ದರು. ಡೇರಿಯಸ್‌ ಗಾಯದ ಬಳಿಕ ಸರ್ಜರಿಗೆ ಒಳಗಾಗಿದ್ದು, ಈಗ ಚೇತರಿಸಿಕೊಂಡು ಹೇಳಿಕೆ ನೀಡಿದ್ದಾರೆ. ಅನಿಹಿತಾ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೀಗಾಗಿ ಪೊಲೀಸರ ಮುಂದೆ ಹೇಳಿಕೆ ಬಾಕಿ ಇದೆ.

ಪೊಲೀಸರು ಮಂಗಳವಾರ ದಕ್ಷಿಣ ಮುಂಬೈನಲ್ಲಿರುವ ಅವರ ಮನೆಯಲ್ಲಿ ಡೇರಿಯಸ್ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಕಳೆದ ವಾರ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಅಪಘಾತವನ್ನು ತಕ್ಷಣವೇ ನೆನಪಿಸಿಕೊಳ್ಳಲು ಸಾಧ್ಯವಾಗದ ಕಾರಣ ಡೇರಿಯಸ್ ಹೇಳಿಕೆಯನ್ನು ದಾಖಲಿಸಲು ಕೆಲವು ಗಂಟೆಗಳನ್ನು ತೆಗೆದುಕೊಂಡರು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಸೀಟ್‌ಬೆಲ್ಟ್ ಅಲಾರಂ ನಿಷ್ಕ್ರಿಯಗೊಳಿಸುವ ಸಾಧನಗಳ ಮಾರಾಟ ನಿಲ್ಲಿಸಲು Amazonಗೆ ಕೇಂದ್ರ ಸರ್ಕಾರ ಸೂಚನೆ

ಪಾಲ್ಘರ್ ಎಸ್‌ಪಿ ಬಾಳಾಸಾಹೇಬ್ ಪಾಟೀಲ್ ಅವರು, ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಸಾವುಗಳಿಗೆ ಕಾರಣವಾದ ಚಾಲಕನ ವಿರುದ್ಧ ಕೇಸ್‌ ದಾಖಲು ಮಾಡುವ ಬಗ್ಗೆ ನಿರ್ಧರಿಸಲು ಕಾರು ತಯಾರಕರ ಅಂತಿಮ ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು. ಸದ್ಯ, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ.

ಘಟನೆ ನಡೆದ ದಿನದಂದು ಅನಾಹಿತಾ, ಡೇರಿಯಸ್, ಜಹಾಂಗೀರ್ ಮತ್ತು ಸೈರಸ್‌ ಮಿಸ್ತ್ರಿ ಗುಜರಾತ್‌ನ ಉದ್ವಾಡದಿಂದ ಮುಂಬೈಗೆ ಹಿಂತಿರುಗುತ್ತಿದ್ದರು. ಡಾ. ಅನಾಹಿತಾ ವಾಹನ ಚಲಾಯಿಸುತ್ತಿದ್ದರೆ, ಜೆ.ಎಂ. ಫೈನಾನ್ಷಿಯಲ್‌ನ ಖಾಸಗಿ ಈಕ್ವಿಟಿ ವ್ಯವಹಾರದ ವ್ಯವಸ್ಥಾಪಕ ನಿರ್ದೇಶಕರಾದ ಡೇರಿಯಸ್ ಅವರು ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿದ್ದರು ಮತ್ತು ಅವರು ಸೀಟ್ ಬೆಲ್ಟ್ ಅನ್ನು ಧರಿಸಿದ್ದರು. ಇನ್ನು,. ಹಿಂದಿನ ಸೀಟಿನಲ್ಲಿ ಸೈರಸ್‌ ಮಿಸ್ತ್ರಿ ಮತ್ತು ಜಹಾಂಗೀರ್ ಇದ್ದರು. ಅವರು ಸೀಟ್‌ ಬೆಲ್ಟ್‌ ಧರಿಸಿರಲಿಲ್ಲ ಎಂದು ವರದಿಯಾಗಿತ್ತು. 

ಇದನ್ನ ಓದಿ:  Seat Belt ಹಾಕ್ಕೊಂಡು ಪ್ರಾಣ ಉಳಿಸ್ಕಳಿ..! ಬೆಲ್ಟ್‌ ಹಾಕ್ಕೊಂಡ್ರಷ್ಟೇ ಏರ್‌ಬ್ಯಾಗ್‌ ಓಪನ್‌

ಈ ಮಧ್ಯೆ, ಅಪಘಾತವಾದ ಮರ್ಸಿಡಿಸ್ ಬೆಂಜ್‌ ಕಾರಿನ ಉಳಿದ ಬಿಡಿ ಭಾಗಗಳನ್ನು ಹಾಂಕಾಂಗ್‌ನ ತಂಡವು ಪರಿಶೀಲಿಸಿದೆ.

click me!