ಭಾರತದ ಕಳವಳಗಳು ಯುವಾನ್ ವಾಂಗ್ ವರ್ಗದ ಹಡಗುಗಳ ನಿಯೋಜನೆಯ ಮೇಲೆ ಮಾತ್ರ ಕೇಂದ್ರೀಕೃತವಾಗಿಲ್ಲ, ಶ್ರೀಲಂಕಾ ತನ್ನ ಅಭಿವೃದ್ಧಿಗಾಗಿ ತೆಗೆದುಕೊಂಡ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ನಂತರ ಚೀನಾ ಮರ್ಚೆಂಟ್ ಪೋರ್ಟ್ ಹೋಲ್ಡಿಂಗ್ಸ್‌ಗೆ 99 ವರ್ಷಗಳ ಕಾಲ ಗುತ್ತಿಗೆ ನೀಡಲಾದ ಹಂಬಂತೋಟಾ ಬಂದರಿನ ಮೇಲೂ ಕೇಂದ್ರೀಕೃತವಾಗಿದೆ.
ನವದೆಹಲಿ: ಭಾರತ (India) ಹಿಂದೂ ಮಹಾಸಾಗರದಲ್ಲಿ (Indian Ocean) ಕ್ಷಿಪಣಿ ಪರೀಕ್ಷೆ (Missile Launch) ನಡೆಸುವುದಾಗಿ ಘೋಷಿಸಿದ ಬೆನ್ನಲ್ಲೇ ಚೀನಾ (China) ತನ್ನ ಗುಪ್ತಚರ ಹಡಗನ್ನು (Spy Ship) ಸಾಗರಕ್ಕಿಳಿಸಿದೆ. ಈ ಹಡಗು ಪ್ರಸ್ತುತ ಬಾಲಿ (Bali) ದೇಶದ ಸಮೀಪದಲ್ಲಿ ಸಾಗುತ್ತಿದ್ದು, ಹಿಂದೂ ಮಹಾಸಾಗರವನ್ನು ಪ್ರವೇಶಿಸಿದೆ ಎಂದು ಹೇಳಲಾಗಿದೆ. ಚೀನಾದ ಯುವಾನ್ ವಾಂಗ್ 6 (Yuan Wang 6) ಎಂಬ ಹಡಗು ಹಿಂದೂ ಮಹಾಸಾಗರದಲ್ಲಿ ಚಲಿಸುತ್ತಿದೆ. ಇದೇ ವೇಳೆ ಭಾರತ ಕ್ಷಿಪಣಿ ಪರೀಕ್ಷೆ ನಡೆಸಬೇಕು ಎಂದುಕೊಂಡಿರುವುದರಿಂದ ಇದರ ಮೇಲೆ ಕಣ್ಣಿಡಲು ಚೀನಾ ಈ ಹಡಗು ಕಳುಹಿಸಿದೆ ಎನ್ನಲಾಗಿದೆ. ಕ್ಷಿಪಣಿಯ ವೇಗ, ಸಾಮರ್ಥ್ಯ ಮುಂತಾದವುಗಳನ್ನು ಅಧ್ಯಯನ ಮಾಡಲು ಚೀನಾ ಈ ನಿರ್ಧಾರ ಕೈಗೊಂಡಿದೆ ಎಂದು ಭಾರತ ಆತಂಕ ವ್ಯಕ್ತಪಡಿಸಿದೆ.
ನವೆಂಬರ್ 10 ಅಥವಾ 11ರಂದು ಒಡಿಶಾದಲ್ಲಿರುವ ಅಬ್ದುಲ್ ಕಲಾಂ ದ್ವೀಪದಿಂದ ಕ್ಷಿಪಣಿ ಪರೀಕ್ಷೆ ನಡೆಸಲು ಭಾರತ ನಿರ್ಧರಿಸಿದೆ. ಈ ಕ್ಷಿಪಣಿ ಸುಮಾರು 2,200 ಕಿ.ಮೀ. ದೂರ ಚಲಿಸುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಇದರ ಬಗ್ಗೆ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಚೀನಾ ತನ್ನ ಗುಪ್ತಚರ ಹಡಗನ್ನು ರವಾನೆ ಮಾಡಿದೆ.
ಇದನ್ನು ಓದಿ: ಭಾರತದ ವಿರೋಧವಿದ್ದರೂ ಲಂಕಾಗೆ ಬರಲಿದೆ ಚೀನಿ ಗೂಢಚಾರಿಕೆ ಹಡಗು
ಇದೇ ಹಡಗನ್ನು ಕೆಲವು ತಿಂಗಳುಗಳ ಹಿಂದೆ ಶ್ರೀಲಂಕಾಗೂ ಸಹ ಚೀನಾ ಕಳುಹಿಸಿತ್ತು. ಈ ಹಡಗು ಲಂಕಾದ ಹಂಬನ್‌ತೋಟಾ ಬಂದರಿನಲ್ಲಿ ಲಂಗರು ಹಾಕಿತ್ತು.
ಭಾರತದ ಆತಂಕವೇನು..?
ಚೀನಾ ಈಗ ತಾನು ಪರೀಕ್ಷಿಸುವ ಕ್ಷಿಪಣಿಯನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿರಬಹುದು ಎಂಬುದು ಭಾರತದ ಆತಂಕವಾಗಿದೆ. ಈ ಪ್ರಕ್ರಿಯೆಯಲ್ಲಿ ಅದರ ಪಥ, ವೇಗ, ವ್ಯಾಪ್ತಿ ಮತ್ತು ನಿಖರತೆಯಂತಹ ಸಾಮರ್ಥ್ಯಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಪಡೆಯುತ್ತಿದೆ. ಗೊತ್ತುಪಡಿಸಿದ ಕ್ಷಿಪಣಿ ಪರೀಕ್ಷಾ ಶ್ರೇಣಿಯಾದ ವೀಲರ್ ದ್ವೀಪದಿಂದ ಭಾರತವು ಆಗಾಗ್ಗೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪರೀಕ್ಷಿಸುತ್ತದೆ.
ಈ ವರ್ಷದ ಆಗಸ್ಟ್‌ನಲ್ಲಿ, ಯುವಾನ್ ವಾಂಗ್ V ಎಂಬ ಇದೇ ರೀತಿಯ ಮತ್ತೊಂದು ಹಡಗು ದಕ್ಷಿಣ ಚೀನಾ ಸಮುದ್ರಕ್ಕೆ ಹಿಂದಿರುಗುವ ಮೊದಲು ಶ್ರೀಲಂಕಾದ ಹಂಬಂತೋಟಾ ಬಂದರಿನಲ್ಲಿ ಲಂಗರು ಹಾಕಿತ್ತು.
ಇದನ್ನೂ ಓದಿ: ಶ್ರೀಲಂಕಾಗೆ ಡಾರ್ನಿಯರ್ ಯುದ್ಧ ವಿಮಾನ ಉಡುಗೊರೆ ನೀಡಿದ ಭಾರತ
ಭಾರತದ ಕಳವಳಗಳು ಯುವಾನ್ ವಾಂಗ್ ವರ್ಗದ ಹಡಗುಗಳ ನಿಯೋಜನೆಯ ಮೇಲೆ ಮಾತ್ರ ಕೇಂದ್ರೀಕೃತವಾಗಿಲ್ಲ, ಶ್ರೀಲಂಕಾ ತನ್ನ ಅಭಿವೃದ್ಧಿಗಾಗಿ ತೆಗೆದುಕೊಂಡ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ನಂತರ ಚೀನಾ ಮರ್ಚೆಂಟ್ ಪೋರ್ಟ್ ಹೋಲ್ಡಿಂಗ್ಸ್‌ಗೆ 99 ವರ್ಷಗಳ ಕಾಲ ಗುತ್ತಿಗೆ ನೀಡಲಾದ ಹಂಬಂತೋಟಾ ಬಂದರಿನ ಮೇಲೂ ಕೇಂದ್ರೀಕೃತವಾಗಿದೆ. ಇದು ಮಿಲಿಟರಿ ಉದ್ದೇಶಗಳಿಗಾಗಿ ಅದರ ಬಳಕೆಯ ನಿರಂತರ ಭಯಕ್ಕೆ ಕಾರಣವಾಗಿದೆ.
ಭಾರತದೊಂದಿಗೆ ದೀರ್ಘಾವಧಿಯ ಗಡಿ ಬಿಕ್ಕಟ್ಟಿನಲ್ಲಿ ತೊಡಗಿರುವ ಚೀನಾ, ಮೂಲಸೌಕರ್ಯದಲ್ಲಿ ಹೂಡಿಕೆಯೊಂದಿಗೆ ತನ್ನ ಪ್ರಮುಖ ಸಾಲದಾತನಾಗಿರುವ ಮೂಲಕ ಶ್ರೀಲಂಕಾದ ಮೇಲೆ ಗಮನಾರ್ಹ ಹಿಡಿತವನ್ನು ಹೊಂದಿದೆ. ಆದರೂ, ಶ್ರೀಲಂಕಾದ ಉಲ್ಬಣಗೊಳ್ಳುತ್ತಿರುವ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಭಾರತ ಅದರ ಅಗತ್ಯ ಪೂರೈಕೆಯ ಜೀವನಾಡಿಯಾಗಿದೆ.
ಇದನ್ನು ಓದಿ: ಹಿಂದೂ ಮಹಾಸಾಗರದಲ್ಲೂ ಚೀನಾತಂಕ: ಜಿಬೂಟಿಯಲ್ಲಿ ಚೀನಾದ ಮೊದಲ ವಿದೇಶಿ ನೌಕಾ ನೆಲೆ ಆರಂಭ
ಹಂಬನ್‌ತೋಟ ಬಂದರನ್ನು ಚೀನಾ ಅಭಿವೃದ್ಧಿಪಡಿಸಿದೆ. ಆದರೆ ಶ್ರೀಲಂಕಾ ಹಣ ಪಾವತಿ ಮಾಡದ ಕಾರಣ, ಬಂದರನ್ನು ಅಭಿವೃದ್ಧಿಪಡಿಸಿದ್ದಕ್ಕೆ 99 ವರ್ಷ ಕಾಲ ಚೀನಾ ಮೂಲದ ಕಂಪನಿಗೆ ಲೀಸ್ ನೀಡಿದೆ. ಈ ಬಂದರನ್ನು ಚೀನಾ ತಮ್ಮ ಮಿಲಿಟರಿ ನೆಲೆಯನ್ನಾಗಿ ಬಳಸಬಹುದು ಎಂಬುದು ಭಾರತದ ಆತಂಕಕ್ಕೆ ಕಾರಣ.