Cyclone Jawad: ಆಂಧ್ರ, ಒಡಿಶಾಗೆ ಆತಂಕ, ಎಚ್ಚೆತ್ತ ಸರ್ಕಾರ: ಪ್ರಧಾನಿ ಮೋದಿಯಿಂದ ಪರಿಶೀಲನಾ ಸಭೆ

By Suvarna NewsFirst Published Dec 2, 2021, 3:25 PM IST
Highlights

* ಉತ್ತರ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ಪ್ರದೇಶಗಳಲ್ಲಿ ವಾಯುಭಾರ ಕುಸಿತ

* ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಚಂಡಮಾರುತದ ಭೀತಿ 

* ಚಂಡಮಾರುತ, ರಕ್ಷಣಾ ಕಾರ್ಯದ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ಮೋದಿ

ನವದೆಹಲಿ(ಡಿ.02): ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಚಂಡಮಾರುತದ ಭೀತಿ ಆವರಿಸಿದೆ. ಉತ್ತರ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ಪ್ರದೇಶಗಳಲ್ಲಿ ವಾಯುಭಾರ ಕುಸಿತದಿಂದ ಜೋವಾದ್ ಚಂಡಮಾರುತವು (Cyclone Jowad) ರೂಪುಗೊಳ್ಳುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಡಿಸೆಂಬರ್ 3 ರಂದು ಚಂಡಮಾರುತದ ಪರಿಣಾಮ ಗೋಚರಿಸಲಿದೆ. ಈ ನಿಟ್ಟಿನಲ್ಲಿ ಸರಕಾರಗಳು ಅಲರ್ಟ್ ಆಗಿವೆ, ಅತ್ತ ಪ್ರಧಾನಿ ಮೋದಿ ಕೂಡಾ ಇಂದು, ಗುರುವಾರ ಸಭೆ ನಡೆಸಿದ್ದಾರೆ. ಇದರಲ್ಲಿ, ಚಂಡಮಾರುತದಿಂದ ಪಾರಾಗುವ ಹಾಗೂ ರಕ್ಷಣಾ ಕಾರ್ಯದ ಬಗ್ಗೆ ವಿವರಣೆ ಪಡೆದಿದ್ದಾರೆ.

Prime Minister Narendra Modi chairs a meeting on the cyclone-related situation in the country. pic.twitter.com/eWIcoFp8rm

— ANI (@ANI)

ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಮಳೆಯ ಎಚ್ಚರಿಕೆ

ಡಿಸೆಂಬರ್ 3 ರಿಂದ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಚಂಡಮಾರುತದಿಂದಾಗಿ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. IMD ಪ್ರಕಾರ, ಉತ್ತರ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಭಾರ ಕುಸಿತದಿಂದ ಜೋವಾದ್ ಚಂಡಮಾರುತವು ರೂಪುಗೊಳ್ಳುತ್ತಿದೆ. ಇದು ಬಲಶಾಲಿಯಾಗಿ ಡಿಸೆಂಬರ್ 3 ರಂದು ವಾಯುವ್ಯಕ್ಕೆ ಚಲಿಸುತ್ತದೆ. ಇದಾದ ಬಳಿಕ ಡಿಸೆಂಬರ್ 4ರ ಬೆಳಗ್ಗೆ ಉತ್ತರ ಆಂಧ್ರಪ್ರದೇಶ-ಒಡಿಶಾದ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸಲಿದೆ ಎಂದು ತಿಳಿಸಿದೆ. ಇದರೊಂದಿಗೆ ವಾಯುವ್ಯ ಮತ್ತು ಮಧ್ಯ ಭಾರತದ ಅಕ್ಕಪಕ್ಕದ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಎರಡೂ ಕಾರಣಗಳಿಂದ ದೇಶದ ವಾತಾವರಣವೇ ಬದಲಾಗಲಿದೆ. ಚಂಡಮಾರುತದ ಪ್ರಭಾವದಿಂದಾಗಿ ಡಿಸೆಂಬರ್ 5 ರಿಂದ 6 ರವರೆಗೆ ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗುಜರಾತ್‌ನಲ್ಲೂ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.

Floods & Droughts: ದೇಶಕ್ಕೆ ಆತಂಕ: ಮುಂದುವರೆಯಲಿದೆ ಪ್ರವಾಹ, ಬರ, ಚಂಡಮಾರುತ: ತಜ್ಞರ ಎಚ್ಚರಿಕೆ!

ಡಿಸೆಂಬರ್ 4 ರಂದು ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ

IMD ಪ್ರಕಾರ, ಡಿಸೆಂಬರ್ 3 ರಂದು, ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸುವಾಗ, ಚಂಡಮಾರುತವು ಹತ್ತಿರದ ಬಂಗಾಳ ಕೊಲ್ಲಿಯ ಆಗ್ನೇಯ ಮತ್ತು ಮಧ್ಯ ಭಾಗವನ್ನು ತಲುಪಬಹುದು. ಡಿಸೆಂಬರ್ 4 ರ ಬೆಳಗ್ಗೆ ಉತ್ತರ ಆಂಧ್ರಪ್ರದೇಶ-ಒಡಿಶಾ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆಯಿದೆ. ಕಡಿಮೆ ಒತ್ತಡದಿಂದಾಗಿ ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಹಲವು ರೈಲುಗಳನ್ನು ರದ್ದು

ಜೋವಾದ್ ಚಂಡಮಾರುತದಿಂದಾಗಿ ರೈಲ್ವೆ ಹಲವು ರೈಲುಗಳನ್ನು ರದ್ದುಗೊಳಿಸಿದೆ. ಅವುಗಳ ವಿವರ ಈ ಕೆಳಗಿನಂತಿದೆ

* ರೈಲು ಸಂಖ್ಯೆ. 13351 ಧನ್‌ಬಾದ್ - ಅಲೆಪ್ಪಿ ಎಕ್ಸ್‌ಪ್ರೆಸ್ ಅನ್ನು ಡಿಸೆಂಬರ್ 3 ರಂದು ಧನ್‌ಬಾದ್‌ನಿಂದ ರದ್ದು. 
* ರೈಲು ಸಂಖ್ಯೆ 12876 ಆನಂದ್ ವಿಹಾರ್ ಟರ್ಮಿನಲ್ - ಪುರಿ ಎಕ್ಸ್‌ಪ್ರೆಸ್ ಅನ್ನು ಆನಂದ್ ವಿಹಾರ್ ಟರ್ಮಿನಲ್‌ನಿಂದ ಡಿಸೆಂಬರ್ 3 ರಿಂದ ರದ್ದು.
* ರೈಲು ಸಂಖ್ಯೆ 18451 ಹಟಿಯಾ - ಪುರಿ ಎಕ್ಸ್‌ಪ್ರೆಸ್ ಹಟಿಯಾದಿಂದ ಡಿಸೆಂಬರ್ 3 ರಂದು ರದ್ದಾಗಲಿದೆ. 
* ರೈಲು ಸಂಖ್ಯೆ 18452 ಪುರಿ - ಹಟಿಯಾ ಎಕ್ಸ್‌ಪ್ರೆಸ್ ಅನ್ನು ಡಿಸೆಂಬರ್ 3 ರಂದು ಪುರಿಯಿಂದ ರದ್ದು. 
* ರೈಲು ಸಂಖ್ಯೆ 18637 ಹಟಿಯಾ - ಬೆಂಗಳೂರು ಕ್ಯಾಂಟ್ ಎಕ್ಸ್‌ಪ್ರೆಸ್ ಹಟಿಯಾದಿಂದ ಡಿಸೆಂಬರ್ 4 ರಂದು ರದ್ದಾಗಲಿದೆ. 

.
As per forecast of Met Dept., Cyclone 'Jawad' may hit Odisha on 3rd - 4th Dec. For the safety of passengers 95 Trains originating from different destination and passing over ECoR and originating from ECoR have been cancelled as below:
JCO: JOURNEY COMMENCING ON pic.twitter.com/eJDakxI9wK

— East Coast Railway (@EastCoastRail)

ಡಿಸೆಂಬರ್ 3 ರಂದು ಜಾರ್ಖಂಡ್‌ನಲ್ಲಿ ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎಂಬುವುದು ಉಲ್ಲೇಖನೀಯ. ಡಿಸೆಂಬರ್ 6 ರಂದು ಪೂರ್ವ ಭಾಗಗಳಲ್ಲಿ ಲಘು ಮಳೆಯಾಗಲಿದೆ. 

click me!