Mamata In Mumbai: ರಾಷ್ಟ್ರಗೀತೆಗೆ ಅವಮಾನ, ಕುರ್ಚಿಯಿಂದ ಏಳದ ದೀದೀ ವಿರುದ್ಧ ದೂರು ದಾಖಲು!

Published : Dec 02, 2021, 03:07 PM IST
Mamata In Mumbai: ರಾಷ್ಟ್ರಗೀತೆಗೆ ಅವಮಾನ, ಕುರ್ಚಿಯಿಂದ ಏಳದ ದೀದೀ  ವಿರುದ್ಧ ದೂರು ದಾಖಲು!

ಸಾರಾಂಶ

* ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಮುಂಬೈಗೆ ತೆರಳಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ * ಮುಂಬೈನಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ ದೀದೀ * ದೀದೀ ವಿರುದ್ಧ ಪೊಲೀಸ್ ಠಾಣೆಗೇರಿದ ಬಿಜೆಪಿ

ಮುಂಬೈ(ಡಿ.02): ಬಿಜೆಪಿ (BJP) ವಿರುದ್ಧ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಮುಂಬೈಗೆ (Mumbai) ತೆರಳಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal Cm Mamata Banerjee) ವಿರುದ್ಧ ವಿವಾದ ಭುಗಿಲೆದ್ದಿದೆ. ಮುಂಬೈನ ಬಿಜೆಪಿ ನಾಯಕರೊಬ್ಬರು ಮಮತಾ ಬ್ಯಾನರ್ಜಿ ರಾಷ್ಟ್ರಗೀತೆಗೆ (National Anthem) ಅವಮಾನ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಬ್ಯಾನರ್ಜಿ ರಾಷ್ಟ್ರಗೀತೆಯನ್ನು ಕುಳಿತುಕೊಮಡು ಹಾಡಿದ್ದಾರೆ, ಕುರ್ಚಿಯಿಂದ ಎದ್ದೇಳಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದು ರಾಷ್ಟ್ರಗೀತೆಗೆ ಮಾಡಿದ ಅವಮಾನ. ಅಲ್ಲದೇ ಸ್ವಲ್ಪ ಸಮಯ ರಾಷ್ಟ್ರಗೀತೆಯನ್ನು ಮಧ್ಯೆ ನಿಲ್ಲಿಸುತ್ತಿದ್ದರು ಎಂದೂ ಹೇಳಲಾಗಿದೆ. ಇನ್ನು ಬಿಜೆಪಿ ವಕ್ತಾರ ಶಹಜಾದ್ ಪೂನವಾಲಾ ಅವರು ಶಿವಸೇನೆ ಮತ್ತು ಎನ್‌ಸಿಪಿಯನ್ನು (Shiv Sena And NCP) ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದು, ರಾಷ್ಟ್ರೀಯವಾದಿ ಎಂದು ಕರೆದುಕೊಳ್ಳುವ ಶಿವಸೇನೆ, ಎನ್‌ಸಿಪಿ ಮಮತಾ ಬ್ಯಾನರ್ಜಿ ವಿರುದ್ಧ ಎಫ್‌ಐಆರ್ ದಾಖಲಿಸುತ್ತದೆಯೇ? ರಾಜಕೀಯ ಅನುಕೂಲಕ್ಕಾಗಿ ದೇಶದ ಅಸ್ಮಿತೆ, ಚಿಹ್ನೆಗಳಿಗೆ ಅವಮಾನ ಮಾಡುವುದು ಸರಿಯೇ? ಎಂದೂ ಪ್ರಶ್ನಿಸಿದ್ದಾರೆ.

ಎರಡು ದಿನಗಳಲ್ಲಿ ಹಲವು ನಾಯಕರ ಭೇಟಿ

ಪಶ್ಚಿಮ ಬಂಗಾಳದಲ್ಲಿ (West Bengal) ಮೂರನೇ ಬಾರಿಗೆ ಸರ್ಕಾರ ರಚಿಸಿದ ನಂತರ ಮಮತಾ ಬ್ಯಾನರ್ಜಿ ಅವರ ವರ್ತನೆ ಆಕ್ರಮಣಕಾರಿಯಾಗಿದೆ. ಅವರು ಎರಡು ದಿನಗಳ ಪ್ರವಾಸದ ಮೇರೆಗೆ ನವೆಂಬರ್ 30 ರಂದು ಮುಂಬೈ ತಲುಪಿದ್ದಾರೆ. ಡಿಸೆಂಬರ್ 1 ರಂದು ಅವರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ (NCP Leader Sharad Pawar) ಅವರನ್ನು ಭೇಟಿಯಾದರು. ಇದೇ ವೇಳೆ ಸಮಾಜದ ನಾನಾ ವರ್ಗದ ಜನತೆ ನಾಗರಿಕ ಸಭೆ ನಡೆಸುವ ಮೂಲಕ ಬಿಜೆಪಿ ವಿರುದ್ಧ ಸಜ್ಜುಗೊಳಿಸುವಂತೆ ಮನವಿ ಮಾಡಿದರು.

ಬುಧವಾರ ನಾರಿಮನ್‌ ಪಾಯಿಂಟ್‌ನ ವೈ.ಬಿ.ಚವಾಣ್‌ ಸೆಂಟರ್‌ನಲ್ಲಿ ಮಮತಾ ಅವರು ಸಮಾಜದ ವಿವಿಧ ವರ್ಗದವರೊಂದಿಗೆ ಸಭೆ ನಡೆಸಿದರು. ಇದರಲ್ಲಿ ಚಿತ್ರರಂಗದ ಗಣ್ಯರು, ಸಮಾಜಸೇವಕರು ಮತ್ತಿತರರು ಪಾಲ್ಗೊಂಡಿದ್ದರು. ಜನರಿಂದ ತುಂಬಿದ್ದ ಸಭಾಂಗಣದಲ್ಲಿ ಮಮತಾ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಎಲ್ಲ ವಿಷಯಗಳನ್ನು ಪ್ರಸ್ತಾಪಿಸಿದರು. ಮೋದಿ ಸರ್ಕಾರ ತನ್ನನ್ನು ಹೇಗೆ ಕಳಂಕಗೊಳಿಸಲು ಮತ್ತು ಸಿಲುಕಿಸಲು ಪ್ರಯತ್ನಿಸಿದೆ ಎಂದು ಅವರು ಹೇಳಿದರು. ಅವರು ಪಿಎಂ ಕೇರ್ಸ್ ಅನ್ನು ಹಗರಣ ಎಂದು ಕರೆದಿದ್ದಾರೆ. ಎಲ್ಲಾ ಪ್ರಾದೇಶಿಕ ಪಕ್ಷಗಳು ಒಗ್ಗೂಡಿದರೆ ಬಿಜೆಪಿಯನ್ನು ಸೋಲಿಸುವುದು ತುಂಬಾ ಸುಲಭ ಎಂದು ಮಮತಾ ಹೇಳಿದ್ದಾರೆ.

ಮುಂಬೈನಲ್ಲಿ ಕಾಂಗ್ರೆಸ್ ವಿರೋಧಿ ಹೇಳಿಕೆ

ಕಾಂಗ್ರೆಸ್ (Congress) ನೇತೃತ್ವದ ಯುಪಿಎ ಇನ್ನು ಮುಂದೆ ಮೈತ್ರಿಯಾಗಿಲ್ಲ ಎಂದು ಮಮತಾ ಬ್ಯಾನರ್ಜಿ ಇಲ್ಲಿ ಹೇಳಿಕೆ ನೀಡಿದ್ದಾರೆ. ಅದಕ್ಕೆ ಅಸ್ತಿತ್ವವಿಲ್ಲ ಎಂದು ಟೀಕಿಸಿದ್ದಾರೆ. ಹೀಗಿರುವಾಗ ಮಮತಾ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕಾಂಗ್ರೆಸ್ ಇಲ್ಲದೆ ಬಿಜೆಪಿಯನ್ನು ಸೋಲಿಸಬಹುದು ಎಂಬ ಯಾವುದೇ ಪಕ್ಷದ ಚಿಂತನೆ ಕೇವಲ ಕನಸು, ಭಾರತೀಯ ರಾಜಕಾರಣದ ಸತ್ಯ ಎಲ್ಲರಿಗೂ ಗೊತ್ತು ಎಂದಿದ್ದಾರೆ. 

ಇನ್ನು ಅತ್ತ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಮಮತಾ ಬ್ಯಾನರ್ಜಿಯನ್ನು ಹುಚ್ಚಿ ಎಂದು ಕೂಡ ಹೇಳಿದ್ದಾರೆ. ಮಮತಾಗೆ ಈಗ ಹುಚ್ಚು ಹೆಚ್ಚಿದೆ. ಇಡೀ ಭಾರತವು ಮಮತಾ-ಮಮತಾ ಮಾಡುತ್ತಿದೆ ಎಂದು ಅವರು ಭಾವಿಸುತ್ತಾರೆ, ಆದರೆ ಬಂಗಾಳವು ಮಮತಾ ಅಲ್ಲ ಮತ್ತು ಮಮತಾ ಬಂಗಾಳವಲ್ಲ. ಬಿಜೆಪಿ ಮತ್ತು ಮಮತಾ ಇಬ್ಬರೂ ಬೆರೆತಿದ್ದಾರೆ ಎಂದು ಕಿಡಿ ಕಾರಿದ್ದಾರೆ. 

ಪವಾರ್ ಅಸಮಾಧಾನ:

ಮಮತಾ ಅವರ ಕಾಂಗ್ರೆಸ್-ಮುಕ್ತ ಅಜೆಂಡಾದಿಂದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸಂತೋಷವಾಗಿಲ್ಲ. ಹೀಗಿರುವಾಗ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ತೃತೀಯ ರಂಗ ರಚಿಸಬಹುದಾ ಎಂಬ ಆತಂಕ ಶುರುವಾಗಿದೆ. ಮಂಗಳವಾರ, ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್ ಮಲಿಕ್ ಪ್ರತಿಕ್ರಿಯಿಸಿದ್ದು, ಪ್ರತಿಯೊಂದು ಪಕ್ಷಕ್ಕೂ ತನ್ನ ನೆಲೆಯನ್ನು ಹೆಚ್ಚಿಸಲು ಎಲ್ಲ ಹಕ್ಕುಗಳಿವೆ, ಆದರೆ ಕಾಂಗ್ರೆಸ್ ಅನ್ನು ಹೊರಗಿಟ್ಟು ಬಿಜೆಪಿಯ ವಿರೋಧಿಗಳನ್ನು ಒಗ್ಗೂಡಿಸುವುದು ಅಸಾಧ್ಯ ಎಂದು ಹೇಳಿದ್ದಾರೆ. ಈ ವಿಚಾರವನ್ನು ಪವಾರ್ ಸಾಹಿಬ್ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ ಎಂದೂ ಮಲಿಕ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ಸಿಇಒ ವಜಾಕ್ಕೆ ಕೇಂದ್ರ ಸೂಚನೆ ಸಾಧ್ಯತೆ
ಗುಲಾಮಿ ಮನಃಸ್ಥಿತಿ ಬಿಡಲು 2035ರ ಗಡುವು : ಮೋದಿ