ತಮಿಳುನಾಡಿನಲ್ಲಿ ಚಂಡಮಾರುತ ಹೈಅಲರ್ಟ್, ಬೆಂಗಳೂರಿನಲ್ಲಿ ಮಳೆ ಸಾಧ್ಯತೆ, 118 ರೈಲು ರದ್ದು!

By Suvarna NewsFirst Published Dec 2, 2023, 9:53 PM IST
Highlights

ತಮಿಳುನಾಡಿಗೆ ಭೀಕರ ಚಂಡಮಾರುತ ಅಪ್ಪಳಿಸವು ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ಇದರ ಬೆನ್ನಲ್ಲೇ ಹೈ ಅಲರ್ಟ್ ಘೋಷಣೆ ಮಾಡಿದೆ. ಇಷ್ಟೇ ಅಲ್ಲ 118 ರೈಲು ರದ್ದಾಗಿದೆ.

ಚೆನ್ನೈ(ಡಿ.02) ತಮಿಳುನಾಡು, ಆಂಧ್ರಪ್ರದೇಶ ಕರಾವಳಿ ತೀರಕ್ಕೆ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮನ್ಸೂಚನೆ ಪ್ರಕಾರ, ಒಡಿಶಾ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಕರಾವಳಿಗೆ ಮೈಚುಂಗ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದಿದೆ. ಈಗಾಗಲೇ ತಮಿಳುನಾಡು, ಆಂಧ್ರಪ್ರದೇಶದ ಹಲವು ಭಾಗದಲ್ಲಿ ತೀವ್ರ ಮಳೆಯಾಗುತ್ತಿದೆ. ತೀವ್ರ ಸ್ವರೂಪದ ಚಂಡ ಮಾರುತದ ಕಾರಣ ತಮಿಳುನಾಡಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇತ್ತ ಮುನ್ನಚ್ಚರಿಕೆಯಾಗಿ 118 ರೈಲುಗಳನ್ನು ರದ್ದು ಮಾಡಲಾಗಿದೆ. ಚಂಡಮಾರುತದಿಂದ ಬೆಂಗಳೂರು ಸೇರಿದಂತೆ ಹಲವು ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಚಂಡಮಾರುತ ರೂಪ ಪಡೆದಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಸೋಮವಾರ ಹಾಗೂ ಮಂಗಳವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳ ಕೊಲ್ಲಿಯಲ್ಲಿ ಗಂಟೆಗೆ 18 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತ ವಾಯುಭಾರ ಕುಸಿತ ಸೃಷ್ಟಿಯಾಗಿದೆ. ಅದು ವಾಯವ್ಯ ಭಾಗದತ್ತ ಸಾಗುತ್ತಿದ್ದು, ಡಿ.4ರಂದು ಆಂಧ್ರ ಕರಾವಳಿಯ ಮಚಲಿಪಟ್ಟಣ ಹಾಘೂ ನೆಲ್ಲೂರು ಕರಾವಳಿ ನಡುವೆ ಗಂಟೆಗೆ 100 ಕಿ.ಮೀ. ವೇಗದಲ್ಲಿ ಅಪ್ಪಳಿಸುವ ಸಂಭವವಿದೆ ಎಂದು ಇಲಾಖೆ ಹೇಳಿದೆ.

ಅರಬ್ಬಿ ಸಮುದ್ರದಲ್ಲಿ ಚಂಡಮಾರುತ : ಗುಜರಾತ್‌ನಲ್ಲಿ ಸಿಡಿಲಿಗೆ ಒಂದೇ ದಿನ 20 ಮಂದಿ ಬಲಿ

ಭಾರೀ ಮಳೆ ಹಾಾಗೂ ಚಂಡ ಮಾರುತ ಕಾರಣ 118 ರೈಲು ಸೇವೆ ರದ್ದಾಗಿದೆ. ತಮಿಳುನಾಡಿನ ಹಲವು ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಒಡಿಶಾದ 7 ಜಿಲ್ಲೆಗಳಲ್ಲಿ ಹಾಗೂ ಆಂಧ್ರಪ್ರದೇ ಕರಾವಳಿಯಲ್ಲಿ ಕಟ್ಟೆಚ್ಚರ ಸಾರಲಾಗಿದೆ.ಡಿಸೆಂಬರ್ 5 ರವರೆಗೆ ಭಾರಿ ಮಳೆಯಾಗಲಿದೆ. ಬಳಿಕ ಮಳೆ ಪ್ರಮಾಣ ಕಡಿಮೆಯಾಗಲಿದೆ. 

ನವೆಂಬರ್ ತಿಂಗಳಲ್ಲಿ ಹಲವು ಬಾರಿ ವಾಯುಭಾರ ಕುಸಿತ ಸಂಭವಿಸಿದೆ. ಈ ಪೈಕಿ ನವೆಂಬರ್ 18 ರಂದು ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ವಾಯುಭಾರ ಕುಸಿತದಿಂದ ಬಾಂಗ್ಲಾದೇಶ ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿತ್ತು. ಇದರಿಂದ ಬಾಂಗ್ಲಾದೇಶ ತೀರ ಪ್ರದೇಶಧಲ್ಲೂ ಭಾರಿ ಮಳೆಯಾಗಿತ್ತು.

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ: ಹಲವು ರಾಜ್ಯಗಳಲ್ಲಿ ಮಳೆ

click me!