ಭಾರತ ಆಸ್ಟ್ರೇಲಿಯಾ ಪಂದ್ಯದ ವೇಳೆ ಬೆಂಗಳೂರಿನ ಇಬ್ಬರು ಕಿಡಿಗೇಡಿಗಳು ಪಾಕಿಸ್ತಾನ ಪರವಾಗಿ ಜೈಕಾರ ಘೋಷಣೆ ಕೂಗಿದ್ದಾರೆ.
ಬೆಂಗಳೂರು (ಡಿ.02): ವಿಶ್ವಕಪ್ ಕ್ರಿಕೆಟ್ 2023ರ ಬೆನ್ನಲ್ಲಿಯೇ ಭಾರತದಲ್ಲಿ ಆಯೋಜಿಸಲಾದ ಭಾರತ-ಆಸ್ಟ್ರೇಲಿಯಾ ಟಿ20 ಪಂದ್ಯದ ವೇಳೆ ಬೆಂಗಳೂರಿನಲ್ಲಿ ಇಬ್ಬರು ಕಿಡಿಗೇಡಿಗಳು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದು, ಅವರನ್ನು ಪೊಲೀಸರು ಬಂಧಿಸಿ ಜೈಲುಗಟ್ಟಿದ್ದಾರೆ.
ಭಾರತದಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ 2023ರಲ್ಲಿ ಭಾರತ ಸೋತು ಕಂಗೆಟ್ಟಿದೆ. ಇದರ ಬೆನ್ನಲ್ಲಿಯೇ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡವು ಭಾರತದಲ್ಲಿ 5 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯನ್ನು ಆಯೋಜಿಸಲಾಗಿದೆ. ಈ ಸರಣಿಯನ್ನು ಈಗಾಗಲೇ 3-1 ಅಂತರದಲ್ಲಿ ಭಾರತ ಗೆದ್ದುಕೊಂಡಿದೆ. ಆದರೆ, ನಾಲ್ಕನೇ ಟಿ20 ಪಂದ್ಯ ನಡೆಯುತ್ತಿದ್ದ ವೇಳೆ ಬೆಂಗಳೂರಿನ ಜೆ.ಪಿ. ನಗರದ ಪಬ್‌ವೊಂದರಲ್ಲಿ ದೊಡ್ಡ ಪರದೆಯಲ್ಲಿ ಕ್ರಿಕೆಟ್ ನೋಡುತ್ತಿದ್ದ ಕಿಡಿಗೇಡಿಗಳು ಮದ್ಯದ ಅಮಲಿನಲ್ಲಿ ಪಾಕಿಸ್ತಾನದ ಪರವಾಗಿ ಜೈಕಾರ ಘೋಷಣೆ ಕೂಗಿದ್ದಾರೆ.
undefined
ತಾಯಿ ಗರ್ಭದಿಂದ ಹೊರಬಂದ ಹಸುಗೂಸಿಗೆ ನರಕ ತೋರಿಸಿದ ಆಸ್ಪತ್ರೆ: ಮಗುವಿಗೆ ಮುತ್ತಿಕೊಂಡು ಕಚ್ಚಿದ ಜಿರಳೆಗಳು
ನಿನ್ನೆ ರಾತ್ರಿ ನಡೆದ ಪಂದ್ಯದ ವೇಳೆ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ ಆರೋಪಿಗಳನ್ನು ಇನಾಯತ್ ಉಲ್ಲಾ ಖಾನ್ ಹಾಗೂ ಸೈಯದ್ ಮುಬಾರಕ್ ಎಂದು ಗುರುತಿಸಲಾಗಿದೆ. ಪಬ್‌ನ ಗ್ರಾಹಕರು ಕಿಡಿಗೇಡಿಗಳ ಮೇಲೆ ವ್ಯಕ್ತಪಡಿಸಿ ಹಲ್ಲೆಗೆ ಮುಂದಾಗಿದ್ದಾರೆ. ಇದನ್ನು ತಡೆದ ಪಬ್ ಮಾಲೀಕರು ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ ಇಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ, ಸ್ಥಳಕ್ಕೆ ಆಗಮಿಸಿದ ಬೆಂಗಳೂರಿನ ಜೆಪಿ ನಗರ ಪೊಲೀಸರು ಕಿಡಿಗೇಡಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಜೊತೆಗೆ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಇನ್ನು ಮದ್ಯದ ನಶೆಯಲ್ಲಿ ಕೂಗಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಬೆಂಗಳೂರಲ್ಲಿ ನಾಳೆ ಟಿ-20 ಕೊನೇ ಪಂದ್ಯ: ಭಾರತ ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟಿ-20 ಸರಣಿಯಲ್ಲಿ ಈಗಾಗಲೇ 4 ಪಂದ್ಯಗಳು ಮುಗಿದಿದ್ದು, ಸರಣಿಯನ್ನು ಭಾರತ ವಶಕ್ಕೆ ಪಡೆದುಕೊಂಡು ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡಿದೆ. ಇನ್ನು ಬೆಂಗಳೂರಿನಲ್ಲಿ ನಾಳೆ (ಡಿ.3ರ ಭಾನುವಾರ) ಕೊನೆಯ ಟಿ-20 ಪಂದ್ಯವಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದು ವಿಶ್ವಕಪ್ ಗೆಲುವಿನ ತಂಡವೆಂಬ ಮರ್ಯಾದೆ ಉಳಿಸಿಕೊಳ್ಳಬೇಕಿದೆ. ಆದರೆ, ಈ ಪಂದ್ಯದಲ್ಲಿ ವೀಕ್ಷಣೆಗೆ ಹೋಗುವ ವೇಳೆ ಮತ್ತಷ್ಟು ಇಂತಹ ಘಟನೆಗಳು ನಡೆಬಹುದು ಎಂಬ ನಿಟ್ಟಿನಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ರೈತರಿಗೆ ಬರ ಪರಿಹಾರ ಕೊಡಲು ದುಡ್ಡಿಲ್ಲ, ಆದ್ರೆ ಶಾಸಕರ ಬರ್ತಡೇಲಿ ಹಣದ ಮಳೆಯನ್ನೇ ಸುರಿಸಲಾಗ್ತಿದೆ!
ಮೆಟ್ರೋ ರೈಲು ಸೇವೆ ವಿಸ್ತರಣೆ: ಬೆಂಗಳೂರಿನಲ್ಲಿ ನಾಳೆ ನಡೆಯುವ ಟಿ-20 ಕ್ರಿಕೆಟ್ ಪಂದ್ಯದ ಹಿನ್ನಲೆ ಮೆಟ್ರೋ ರೈಲು ಸೇವೆ ವಿಸ್ತರಣೆ ಮಾಡಲಾಗಿದೆ. ಈ ಕ್ರಿಕೆಟ್ ಪಂದ್ಯದ ಹಿನ್ನಲೆ ನೇರಳೆ ಮತ್ತು ಹಸಿರು ಮಾರ್ಗದ 4 ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ಹೊರಡುವ ರೈಲು ಸೇವೆ ವಿಸ್ತರಣೆ ಮಾಡಲಾಗಿದ್ದು, ಕೊನೆಯ ರೈಲನ್ನು 11.45ಕ್ಕೆ ಹೊರಡುವಂತೆ ಸಮಯ ನಿಗದಿ ಮಾಡಲಾಗಿದೆ. ಇನ್ನು ಪ್ರತಿನಿತ್ಯ 11 ಗಂಟೆಗೆ ಕೊನೆಗೊಳ್ಳುತ್ತಿದ್ದ ರೈಲನ್ನು ಈಗ 45 ನಿಮಿಷ ವಿಸ್ತರಣೆ ಮಾಡಲಾಗಿದೆ. ಜೊತೆಗೆ, ಮೆಟ್ರೋ ರೈಲು ರಿಟರ್ನ್ ಜರ್ನಿ ಟಿಕೆಟ್‌ಗಳನ್ನು ಮಧ್ಯಾಹ್ನ 2 ಗಂಟೆಯಿಂದಲೇ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಈ ಮೂಲಕ ಮೆಟ್ರೋದ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳನ್ನು ಮಧ್ಯಾಹ್ನವೇ ಪಡೆದುಕೊಂಡು ರಾತ್ರಿ 8 ಗಂಟೆ ನಂತೆ ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಒಂದು ಪ್ರಯಾಣಕ್ಕೆ ಮಾತ್ರ ಬಳಸಲು ಅನುಮತಿ ನೀಡಲಾಗಿದೆ.