ಗುಜರಾತ್‌ಗೆ ಅಪ್ಪಳಿಸಲಿದೆ ಅತಿ ಭೀಕರ ಚಂಡಮಾರುತ: ಡೆಡ್ಲಿ ಸೈಕ್ಲೋನಾಗಿ ಪರಿವರ್ತನೆಯಾದ ಬಿಪೊರ್‌ಜೊಯ್‌

Published : Jun 12, 2023, 07:59 AM ISTUpdated : Jun 12, 2023, 11:55 AM IST
ಗುಜರಾತ್‌ಗೆ ಅಪ್ಪಳಿಸಲಿದೆ ಅತಿ ಭೀಕರ ಚಂಡಮಾರುತ: ಡೆಡ್ಲಿ ಸೈಕ್ಲೋನಾಗಿ ಪರಿವರ್ತನೆಯಾದ ಬಿಪೊರ್‌ಜೊಯ್‌

ಸಾರಾಂಶ

ಉತ್ತರ ಭಾಗ​ದತ್ತ ಚಲಿ​ಸ​ಲಿದ್ದು, ಜೂನ್ 15ರ ವೇಳೆಗೆ ಸೌರಾಷ್ಟ್ರ ಹಾಗೂ ಕಛ್‌ ಮತ್ತು ಪಾಕಿ​ಸ್ತಾನದ ಕರಾಚಿ ಕರಾ​ವ​ಳಿ​ಗಳ ಮಧ್ಯ ಗಂಟೆಗೆ 125ರಿಂದ 150 ಕಿ.ಮೀ. ವೇಗದ ಬಿರು​ಗಾ​ಳಿ​ಯೊಂದಿ​ಗೆ ಅಪ್ಪ​ಳಿ​ಸ​ಲಿದೆ.

ನವ​ದೆ​ಹ​ಲಿ/ ಅಹ​ಮ​ದಾ​ಬಾ​ದ್‌ (ಜೂನ್ 12, 2023): ಅರಬ್ಬಿ ಸಮು​ದ್ರ​ದಲ್ಲಿ ಸೃಷ್ಟಿ​ಯಾ​ಗಿರುವ ‘ಬಿ​ಪೊ​ರ್‌ಜೊ​ಯ್‌’ ಚಂಡ​ಮಾ​ರುತ ಗುಜ​ರಾ​ತ್‌ನ ಕಛ್‌ ಹಗೂ ಪಾಕಿ​ಸ್ತಾ​ನದ ಕರಾಚಿ ನಡುವೆ ಜೂನ್ 15ರ ವೇಳೆಗೆ ಅಪ್ಪ​ಳಿ​ಸುವ ಸಾಧ್ಯತೆ ಇದೆ ಎಂದು ಭಾರ​ತೀ​ಯ ಹವಾ​ಮಾನ ಇಲಾಖೆ ಭಾನು​ವಾರ ಹೇಳಿ​ದೆ. ಇದೇ ವೇಳೆ ಬಿಪೊ​ರ್‌​ಜೊಯ್‌ ಅತಿ ತೀವ್ರ ಸ್ವರೂ​ಪದ ಚಂಡಮಾ​ರು​ತ​ವಾಗಿ ಪರಿ​ವ​ರ್ತನೆ​ಗೊಂಡಿದೆ ಎಂದಿ​ರುವ ಹವಾ​ಮಾನ ಇಲಾಖೆ ಸೌರಾ​ಷ್ಟ್ರ ಹಾಗೂ ಕಛ್‌ ಕರಾ​ವ​ಳಿ​ಯಲ್ಲಿ ಕಟ್ಟೆ​ಚ್ಚರ ಸಾರಿ​ದೆ.

ಬಂಗಾಳಿ ಭಾಷೆ​ಯಲ್ಲಿ ಚಂಡ​ಮಾ​ರು​ತ​ಕ್ಕೆ ‘ಬಿ​ಪೊ​ರ್‌​ಜೊ​ಯ್‌’ (ವಿ​ಪ​ತ್ತು) ಎಂದು ಹೆಸ​ರಿ​ಡ​ಲಾ​ಗಿದೆ. ಭಾನು​ವಾರ ಅದು ಗುಜ​ರಾ​ತ್‌ನ ಪೋರ​ಬಂದ​ರ್‌​ನಿಂದ 480 ಕಿ.ಮೀ. ದೂರದ ನೈಋತ್ಯ ಭಾಗ​ದಲ್ಲಿ ಕೇಂದ್ರೀ​ಕೃ​ತ​ವಾ​ಗಿ​ತ್ತು. ಇನ್ನು ಅದು ಉತ್ತರ ಭಾಗ​ದತ್ತ ಚಲಿ​ಸ​ಲಿದ್ದು, ಜೂನ್ 15ರ ವೇಳೆಗೆ ಸೌರಾಷ್ಟ್ರ ಹಾಗೂ ಕಛ್‌ ಮತ್ತು ಪಾಕಿ​ಸ್ತಾನದ ಕರಾಚಿ ಕರಾ​ವ​ಳಿ​ಗಳ ಮಧ್ಯ ಗಂಟೆಗೆ 125ರಿಂದ 150 ಕಿ.ಮೀ. ವೇಗದ ಬಿರು​ಗಾ​ಳಿ​ಯೊಂದಿ​ಗೆ ಅಪ್ಪ​ಳಿ​ಸ​ಲಿದೆ. ನಿರ್ದಿಷ್ಟ ಸ್ಥಳವು ಅದು ಸಮೀ​ಪಕ್ಕೆ ಬಂದಾಗ ಗೊತ್ತಾ​ಗು​ತ್ತದೆ ಎಂದು ಹವಾ​ಮಾನ ಇಲಾ​ಖೆಯ ಹಿರಿಯ ವಿಜ್ಞಾನಿ ಡಿ.ಎ​ಸ್‌.ಪೈ ಹೇಳಿ​ದ್ದಾ​ರೆ.

ಇದನ್ನು ಓದಿ: ಮೋಖಾ ಚಂಡಮಾರುತಕ್ಕೆ ಮ್ಯಾನ್ಮಾರ್‌ ತತ್ತರ: 80 ಕ್ಕೂ ಹೆಚ್ಚು ಸಾವು, ನೂರಾರು ಮಂದಿ ನಾಪತ್ತೆ

ಭಾನು​ವಾ​ರ​ದಿಂದ 3 ದಿನ ಅದು ಗಂಟೆ​ಗೆ 40 ರಿಂದ 70 ಕಿ.ಮೀ. ವೇಗ​ದ ಬಿರು​ಗಾಳಿ ಎಬ್ಬಿ​ಸ​ಲಿ​ದ್ದು, ಗುಜ​ರಾತ್‌ ಕರಾ​ವಳಿ ಪ್ರಕ್ಷು​ಬ್ಧ​ಗೊಂಡಿದೆ. ಮೀನು​ಗಾ​ರ​ರಿಗೆ ಸಮು​ದ್ರ​ಕ್ಕೆ ಇಳಿ​ಯ​ದಂತೆ ಎಚ್ಚ​ರಿ​ಸ​ಲಾ​ಗಿ​ದೆ. ಜೂನ್‌ 6 ರಂದೇ ಚಂಡ​ಮಾ​ರುತ ಸೃಷ್ಟಿ​ಯಾ​ಗಿದ್ದು, ನಿಖ​ರ​ವಾಗಿ ಒಂದೇ ದಿಕ್ಕಿ​ನತ್ತ ಸಾಗದೆ ಈ ಚಂಡ​ಮಾ​ರುತ ಸಾಕಷ್ಟು ಗೊಂದ​ಲ ಮೂಡಿ​ಸಿ​ದೆ.

ಇದನ್ನೂ ಓದಿ: ಬೆಂಗಳೂರು ಜನತೆಯನ್ನು ನಡುಗಿಸುತ್ತಿರುವ Cyclone Mandous ಹೆಸರು ಬಂದಿದ್ದೇಗೆ..? ಅರ್ಥ ಏನು ನೋಡಿ..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Holi Horror: ಬಣ್ಣ ಹಾಕಿದ್ದಕ್ಕೆ 4 ವರ್ಷದ ಮಗು ಮೇಲೆ ಕೊತ ಕೊತ ಕುದಿಯುವ ಬಿಸಿನೀರು ಎರಚಿದ ಅಜ್ಜಿ
India Latest News Live: Holi Horror - ಬಣ್ಣ ಹಾಕಿದ್ದಕ್ಕೆ 4 ವರ್ಷದ ಮಗು ಮೇಲೆ ಕೊತ ಕೊತ ಕುದಿಯುವ ಬಿಸಿನೀರು ಎರಚಿದ ಅಜ್ಜಿ