ತನ್ನನ್ನು ಬೈಯ್ಯುವಂತೆ ಹೇಳಿದ ಪುಟಾಣಿಗೆ Alexa ಕೊಟ್ಟ ಉತ್ತರದ ವಿಡಿಯೋಗೆ 1 ಕೋಟಿ ವ್ಯೂವ್

Published : Dec 12, 2024, 11:23 AM IST
ತನ್ನನ್ನು ಬೈಯ್ಯುವಂತೆ ಹೇಳಿದ ಪುಟಾಣಿಗೆ Alexa ಕೊಟ್ಟ ಉತ್ತರದ ವಿಡಿಯೋಗೆ 1 ಕೋಟಿ ವ್ಯೂವ್

ಸಾರಾಂಶ

ಪುಟ್ಟ ಹುಡುಗಿಯೊಬ್ಬಳು ಅಲೆಕ್ಸಾನ ಬೈಯ್ಯುವಂತೆ ಕೇಳಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲೆಕ್ಸಾ ನೀಡಿದ ಉತ್ತರಕ್ಕೆ ನೆಟ್ಟಿಗರು ಫಿದಾ ಆಗಿದ್ದು, ವಿಡಿಯೋ 1 ಕೋಟಿಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ನವದೆಹಲಿ: ಇಂದು ಬಹುತೇಕರ ಮನೆಗಳಲ್ಲಿ ಅಲೆಕ್ಸಾ ಬಳಕೆ ಹೆಚ್ಚಾಗಿದೆ. ಮತ್ತೊಂದೆಡೆ ಕೆಲವರಿಗೆ ಅಲೆಕ್ಸಾ ಬಳಕೆ ಮಾಹಿತಿ  ಬಗ್ಗೆ ತಿಳಿದಿಲ್ಲ.  ಮಹಾನಗರಗಳಲ್ಲಿ ಒಂಟಿ ಜೀವನ ನಡೆಸುತ್ತಿರೋರಿಗೆ ಅಲೆಕ್ಸಾ ಸಂಗಾತಿಯಾಗಿ ಬದಲಾಗಿದೆ. ನಾವು ಕೇಳುವ ಪ್ರಶ್ನೆಗಳಿಗೆ ಅಲೆಕ್ಸಾ ಉತ್ತರ ನೀಡುತ್ತದೆ.  ಅಲೆಕ್ಸಾ ಅನ್ನೋದು ಅಮೆಜಾನ್‌ನ  ಡಿಜಿಟಲ್ ಅಸಿಸ್ಟೆಂಟ್ ಡಿವೈಸ್ ಆಗಿದ್ದು, ಪ್ರಪಂಚದಾದ್ಯಂತ ಫೇಮಸ್ ಆಗಿದೆ.  ಈ ಡಿವೈಸ್‌ನ್ನು ನಿಮ್ಮ ಸ್ಮಾರ್ಟ್‌ಫೋನ್ ಜೊತೆ ಮತ್ತು ಅಮೆಜಾನ್ ಇಕೋ ಪ್ರೊಡಕ್ಟ್‌ನೊಂದಿಗೆ ಬಳಸಬಹುದಾಗಿದೆ. ಅಲೆಕ್ಸಾ ಮೂಲಕ ನೀವು ಶಾಪಿಂಗ್ ಸಹ ಮಾಡಬಹುದಾಗಿದೆ. ಹಾಡುಗಳನ್ನು ಕೇಳಲು, ಮನೆ ಲೈಟ್ ಆಫ್/ಆನ್ ಸೇರಿದಂತೆ ಹಲವು ವಿಧಗಳಲ್ಲಿ ಅಲೆಕ್ಸಾ ಬಳಕೆ ಮಾಡಿಕೊಳ್ಳಬಹುದು.  ಅಲೆಕ್ಸಾ  ಟೆಕ್ನಿಕಲ್ ಸರ್ವೆಂಟ್ ರೀತಿಯಲ್ಲಿ ಕೆಲಸ ಮಾಡುತ್ತದೆ. 

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅಲೆಕ್ಸಾಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.  ಈ ವಿಡಿಯೋದಲ್ಲಿ ಪುಟ್ಟ ಹುಡುಗಿ ತನ್ನನ್ನು ಬೈಯ್ಯುವಂತೆ ಅಲೆಕ್ಸಾಗೆ ಹೇಳುತ್ತಾಳೆ. ಇದಕ್ಕೆ ಅಲೆಕ್ಸಾ ನೀಡಿದ ಉತ್ತರಕ್ಕೆ ನೆಟ್ಟಿಗರು ಫಿದಾ ಆಗಿದ್ದು, 1 ಕೋಟಿಗೂ ಅಧಿಕ ವ್ಯೂವ್ ಪಡೆದುಕೊಂಡಿದೆ. ವಿಡಿಯೋದಲ್ಲಿನ ಬಾಲಕಿ ಮತ್ತು ಅಲೆಕ್ಸಾ ನಡುವಿನ ಕ್ಯೂಟ್ ಸಂಭಷಣೆ ನೋಡಲು ಚೆಂದವಾಗಿ ಕಾಣುತ್ತದೆ. 

ಬಾಲಕಿ ಮತ್ತು ಅಲೆಕ್ಸಾ ಸಂಭಾಷಣೆ
ಅಲೆಕ್ಸಾಗೆ ತನ್ನನ್ನು ಬೈಯ್ಯುವಂತೆ ಹೇಳುತ್ತಾಳೆ. ಇದಕ್ಕೆ ತೌಬಾ-ತೌಬಾ ಎಂದು  ಅಲೆಕ್ಸಾ ಹೇಳುತ್ತದೆ. ಆದ್ರೆ ಬಾಲಕಿ ಪದೇ ಪದೇ ಬೈಯ್ಯುವಂತೆ ಅಲೆಕ್ಸಾ ಬಳಿ ಮನವಿ ಮಾಡಿಕೊಳ್ಳುತ್ತಾಳೆ. ಆದ್ರೆ ಅಲೆಕ್ಸಾ ಮಾತ್ರ ಯಾವುದೇ ಬೈಗುಳ ಪದಗಳನ್ನು ಉಲ್ಲೇಖ ಮಾಡಲ್ಲ. ಈ ವಿಷಯದಲ್ಲಿ ನಾನು ತುಂಬಾ ಸಂಸ್ಕಾರಿ ಆಗಿದ್ದೇನೆ. ಇಲ್ಲಾಂದ್ರೆ ನಾನು ಶಕ್ತಿಮಾನ್‌ ಬಳಿ ಕ್ಷಮೆ ಕೇಳಬೇಕಾಗುತ್ತದೆ ಎಂದು ಬಾಲಕಿಗೆ ಅಲೆಕ್ಸಾ ಕ್ಯೂಟ್ ಆಗಿ ಉತ್ತರಿಸುತ್ತದೆ.  ಆದ್ರೂ  ಸುಮ್ಮನಾಗದ ಬಾಲಕಿ, ಶಕ್ತಿಮಾನ್ ಬಳಿ ಕ್ಷಮೆ ಕೇಳೋದು ಬೇಡ. ಒಂದು ಸಾರಿ ಬೈಯ್ಯುವಂತೆ ಮತ್ತೆ ಕೇಳುತ್ತಾಳೆ. ಇದಕ್ಕೆ ಪ್ರತಿಯಾಗಿ ಅಲೆಕ್ಸಾ, ಈ ಬೈಗುಳ ಎಲ್ಲವನ್ನು ಬಿಟ್ಟಾಕಿ, ಬಿಸಿಯಾದ ಟೀ ಕುಡಿಯಿರಿ ಎಂದು ಸಲಹೆ ನೀಡುತ್ತದೆ. ಇದನ್ನು ಕೇಳಿದ ಬಳಿಕ ಬಾಲಕಿ ತನ್ನ ತಾಯಿಯತ್ತ ನೋಡಿ ನಗುತ್ತಾಳೆ.

ಇದನ್ನೂ ಓದಿ: ಸೈಕಲ್‌ ಮೇಲೆ ಬಂದ ಫುಡ್ ಡೆಲಿವರಿ ಬಾಯ್ ಅದೃಷ್ಟ ಖುಲಾಯಿಸಿದ್ದೇಗೆ? ವಿಡಿಯೋ ನೋಡಿ

ಈ ಮುದ್ದಾದ  ವಿಡಿಯೋವನ್ನು  @saiquasalwi ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಅಲೆಕ್ಸಾ ನೀಡಿದ ತಮಾಷೆಯ ಉತ್ತರವನ್ನು ಕೇಳಿ ಎಂದು ಬರೆಯಲಾಗಿದೆ. ಈ ವಿಡಿಯೋಗೆ 5 ಲಕ್ಷ 46 ಸಾವಿರಕ್ಕೂ ಅಧಿಕ ಲೈಕ್ಸ್, 14.1 ಮಿಲಿಯನ್ (1 ಕೋಟಿಗೂ ಅಧಿಕ) ವ್ಯೂವ್ ಬಂದಿದೆ.  ಹಾಗೆ ಈ ವಿಡಿಯೋಗೆ ಸಾವಿರಾರರು ರಿಯಾಕ್ಷನ್ ಬಂದಿದೆ. 

ಅಲೆಕ್ಸಾ ತುಂಬಾ ಸಂಸ್ಕಾರಿಯಾಗಿದೆ. ಮಗುವಿನ ಧ್ವನಿ ತುಂಬಾ ಸುಮಧುರವಾಗಿದ್ದು, ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಇಂತಹ ಸಾಧನಗಳಿದ್ರೆ ಮಕ್ಕಳಿಗೆ ಒಳ್ಳೆಯ ಪಾರ್ಟನರ್ ಅಗುತ್ತದೆ. ಜಗತ್ತಿನ ಸುಂಸ್ಕೃತ ಮತ್ತು ಸಂಸ್ಕಾರಿ ಯುವತಿ ಯಾರೆಂದ್ರೆ ಅದು ನಮ್ಮ ಅಲೆಕ್ಸಾ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಅಲೆಕ್ಸಾ ನೀಡಿದ ಉತ್ತರ ನಿಜಕ್ಕೂ ಅಚ್ಚರಿಯನ್ನುಂಟು ಮಾಡುತ್ತದೆ ಎಂದು ಕೆಲ ಬಳಕೆದಾರರು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಉಬರ್ ಬೈಕ್ ಚಾಲಕನ ಸಂಬಳ ಕೇಳಿ ಸಿಲಿಕಾನ್ ಸಿಟಿ ಮಂದಿ ಫುಲ್ ಶಾಕ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌