ಜಮ್ಮ ಮತ್ತು ಕಾಶ್ಮೀರದಲ್ಲಿ ಕರ್ಫ್ಯೂ; 370 ರದ್ದಾದ ಬಳಿಕ ಇದೇ ಮೊದಲು!

Published : Aug 04, 2020, 05:25 PM ISTUpdated : Aug 04, 2020, 06:05 PM IST
ಜಮ್ಮ ಮತ್ತು ಕಾಶ್ಮೀರದಲ್ಲಿ ಕರ್ಫ್ಯೂ; 370 ರದ್ದಾದ ಬಳಿಕ ಇದೇ ಮೊದಲು!

ಸಾರಾಂಶ

ಜಮ್ಮ ಮತ್ತು ಕಾಶ್ಮೀರ ಎಂದಾಕ್ಷಣ ಭಯೋತ್ಪಾದಕರ ಆತಂಕ, ವರ್ಷದ ಬಹುತೇಕ ದಿನ ಕರ್ಫ್ಯೂ, ಗುಂಡಿನ ಮೊರೆತ ಸೇರಿದಂತೆ ಹಲವು ಭೀಕರ ದೃಶ್ಯಗಳೇ ಕಣ್ಣ ಮುಂದೆ ಬರುತ್ತಿತ್ತು. ಆದರೆ ಕಳೆದೊಂದು ವರ್ಷದಿಂದ ಕಾಶ್ಮೀರದ ಚಿತ್ರಣ ಬದಲಾಗಿದೆ. ಆರ್ಟಿಕಲ್ 370 ರದ್ದತಿ ಬಳಿಕ ಕರ್ಫ್ಯೂ ದೂರದ ಮಾತಾಗಿತ್ತು. ಇದೀಗ ಒಂದು ವರ್ಷದ ಬೆನ್ನಲ್ಲೇ ಮತ್ತೆ ಜಮ್ಮ ಮತ್ತು ಕಾಶ್ಮೀರದಲ್ಲಿ ಕರ್ಫ್ಯೂ ಹೇರಲಾಗುತ್ತಿದೆ.

ಕಾಶ್ಮೀರ(ಆ.04): ಆಗಸ್ಟ್ 5 ರಂದು ರಾಮ ಮಂದಿರ ಭೂಮಿ ಪೂಜೆ ಕಾರಣ ದೇಶದ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ. ಇತ್ತ ಆಗಸ್ಟ್ 4 ಮತ್ತು ಆಗಸ್ಟ್ 5 ರಂದು ಜಮ್ಮ ಮತ್ತು ಕಾಶ್ಮೀರದಲ್ಲಿ ಕರ್ಫ್ಯೂ ಜಾರಿಯಾಗುತ್ತಿದೆ. ಆದರೆ ಇದು ರಾಮ ಮಂದಿರದ ಭೂಮಿ ಪೂಜೆಗೆ ಹೇರಲಾಗುತ್ತಿರುವ ಕರ್ಫ್ಯೂ ಅಲ್ಲ. ಕೆಲ ಪಾಕಿಸ್ತಾನಿ ಪೋಷಿತ ಗುಂಪುಗಳು ಆರ್ಟಿಕಲ್ 370 ರದ್ದು ಮಾಡಿದ ದಿನವನ್ನು ಬ್ಲಾಕ್ ಡೇ ಎಂದು ಆಚರಿಸುತ್ತಿದೆ. ಇದಕ್ಕಾಗಿ ಆಗಸ್ಟ್ 4 ಮತ್ತು 5 ರಂದು ಕರ್ಫ್ಯೂ ಹೇರಲಾಗುತ್ತಿದೆ. 

ಹಬ್ಬ ಆಚರಣೆಗೆ ಮನೆಗೆ ಬಂದಿದ್ದ ಯೋಧ ನಾಪತ್ತೆ; ಉಗ್ರಗಾಮಿಗಳಿಂದ ಕಿಡ್ನಾಪ್?

ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು, ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿ ಇದೀಗ ಒಂದು ವರ್ಷವಾಗುತ್ತಿದೆ. 2019ರ ಆಗಸ್ಟ್ ಮೊದಲ ವಾರದಲ್ಲಿ ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿತ್ತು. ಜಮ್ಮ ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಮಾನ ಹಿಂಪಡೆಯಲಾಯಿತು. ಇಷ್ಟೇ ಅಲ್ಲ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲಾಯಿತು.  ಕಳೆದೊಂದು ವರ್ಷದಲ್ಲಿ ಜಮ್ಮ ಮತ್ತು ಕಾಶ್ಮೀರ ಶಾಂತವಾಗಿದೆ. ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಭಾರತೀಯ ಸೇನೆ ಉಗ್ರರ ಹೆಡೆಮುರಿ ಕಟ್ಟುತ್ತಿದೆ. ಕಳೆದೊಂದು ವರ್ಷದಿಂದ ಕರ್ಫ್ಯೂ ಮರೆತಿದ್ದ ಕಾಶ್ಮೀರ ನಿವಾಸಿಗಳಿಗೆ ಇದೀಗ ಮತ್ತೆ ಕಾಶ್ಮೀರದಲ್ಲಿ ಕರ್ಫ್ಯೂ ಶಬ್ದ ಕೇಳಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಭಟನೆ ಹಾಗೂ ಹಿಂಸಾಚಾರಕ್ಕೆ ಈ ಗುಂಪು ತಯಾರಿ ಮಾಡುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ. ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಆಗಸ್ಟ್ 5 ರಂದು ಬ್ಲಾಕ್ ಡೇ ಆಚರಿಸಲಾಗುತ್ತಿದೆ. ಹೀಗಾಗಿ  ಜಮ್ಮ ಮತ್ತು ಕಾಶ್ಮೀರದಲ್ಲಿ ಮತ್ತೆ ಶಾಂತಿ ಕದಡದಂತೆ ಎಚ್ಚರಿಕೆ ವಹಿಸಲು ಕರ್ಫ್ಯೂ ಜಾರಿ ಮಾಡಲಾಗುತ್ತಿದೆ.

ಕೊರೋನಾ ವೈರಸ್ ಕಾರಣ ಅಗತ್ಯ ವಸ್ತು ಖರೀದಿ, ತುರ್ತು ಸೇವೆ, ಆರೋಗ್ಯ ಸೇವೆ ಸೇರಿದಂತೆ ಕೆಲ ಸೇವೆಗಳು ಲಭ್ಯವಿರಲಿದೆ. ಇತರ ಸೇವೆಗಳು ಬಂದ್ ಆಗಲಿವೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
India Latest News Live: ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ20 - ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ!