ಪತ್ನಿ ಸೇಫ್, ಅಪಾಯದಲ್ಲಿ ಉದ್ಯೋಗ: ಸಂಕಷ್ಟದಲ್ಲಿ ಪಾಕ್ ಮಹಿಳೆಯನ್ನು ಮದುವೆಯಾದ CRPF ಸೈನಿಕ

Published : May 03, 2025, 12:48 PM ISTUpdated : May 03, 2025, 12:53 PM IST
ಪತ್ನಿ ಸೇಫ್, ಅಪಾಯದಲ್ಲಿ ಉದ್ಯೋಗ: ಸಂಕಷ್ಟದಲ್ಲಿ ಪಾಕ್ ಮಹಿಳೆಯನ್ನು ಮದುವೆಯಾದ CRPF ಸೈನಿಕ

ಸಾರಾಂಶ

ಸಿಆರ್‌ಪಿಎಫ್ ಯೋಧ ಮುನೀರ್ ಖಾನ್ ಅನುಮತಿ ಪಡೆಯದೆ ಪಾಕಿಸ್ತಾನಿ ಮಹಿಳೆ ಮಿನಲ್ ಖಾನ್‌ರನ್ನು ವಿವಾಹವಾಗಿ, ನಿಯಮ ಉಲ್ಲಂಘಿಸಿದ್ದಾರೆ. ಪಹಲ್ಗಾಂ ದಾಳಿಯ ಬಳಿಕ ಮಿನಲ್‌ರನ್ನು ಗಡಿಪಾರು ಮಾಡಲಾಗಿದ್ದು, ಮುನೀರ್ ಉದ್ಯೋಗ ಅಪಾಯದಲ್ಲಿದೆ. ಭದ್ರತಾ ಲೋಪ ಹಾಗೂ ನಡವಳಿಕೆಯ ಬದಲಾವಣೆಗಳಿಂದಾಗಿ ಇಲಾಖಾ ವಿಚಾರಣೆ ಎದುರಿಸುತ್ತಿದ್ದಾರೆ. ನ್ಯಾಯಾಲಯ ಮಿನಲ್‌ಗೆ ೧೦ ದಿನಗಳ ಕಾಲಾವಕಾಶ ನೀಡಿದೆ.

ನವದೆಹಲಿ: ಬಾಲಿವುಡ್ ನಟ ಶಾರೂಖ್ ಖಾನ್ ಮತ್ತು ಪ್ರೀತಿ ಜಿಂಟಾ ಅಭಿನಯದ 'ವೀರ್ ಜಾರಾ' ಸಿನಿಮಾ ನಿಮಗೆ ನೆನಪಿರಬಹುದು. ಈ ಚಿತ್ರದಲ್ಲಿ ಭಾರತೀಯ ಯುವಕನಿಗೆ ಪಾಕಿಸ್ತಾನದ ಮಹಿಳೆ ಮೇಲೆ ಪ್ರೇಮಾಂಕುರವಾಗುತ್ತದೆ. ಇದೀಗ ಇಂತಹುವುದೇ ಒಂದು ಪ್ರೇಮಕಥೆ ಬೆಳಕಿಗೆ ಬಂದಿದೆ. ಸಿಆರ್‌ಪಿಎಫ್ ಸೈನಿಕರೊಬ್ಬರಿಗೆ ಪಾಕಿಸ್ತಾನದ ಮಹಿಳೆ ಮಿನಲ್ ಖಾನ್ ಮೇಲೆ ಪ್ರೇಮವಾಗಿತ್ತು. ನಂತರ ಇಬ್ಬರು ಮದುವೆ ಸಹ ಆಗಿದ್ದರು. ಆದ್ರೀಗ ಇಬ್ಬರು ದೂರವಾಗುವಂತಾಗಿದೆ. ಪಹಲ್ಗಾಂ ದಾಳಿ ಬಳಿಕ ವೀಸಾದಡಿ ಭಾರತದಲ್ಲಿರುವ ಪಾಕಿಸ್ತಾನಿಗಳಿಗೆ ದೇಶ ತೊರೆಯಲು ಆದೇಶ ನೀಡಿತ್ತು. ಈ ಆದೇಶದನ್ವಯ ಪಾಕಿಸ್ತಾನಿಗಳು ಭಾರತ ತೊರೆದಿದ್ದಾರೆ. ಇದೀಗ ಪ್ರೀತಿಸಿ ಪಾಕ್ ಮಹಿಳೆಯನ್ನು ಮದುವೆಯಾಗಿದ್ದ ವ್ಯಕ್ತಿಯ ಉದ್ಯೋಗ ಸಂಕಷ್ಟದಲ್ಲಿದೆ. ಏಪ್ರಿಲ್ 22ರಂದು ನಡೆದ ಉಗ್ರರ ದಾಳಿಯಲ್ಲಿ 26 ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. 

ಮಿನಲ್ ಖಾನ್ ಮತ್ತು ಮುನೀರ್ ಕಾನ್ ವಿಡಿಯೋ ಕಾನ್ಫೆರೆನ್ಸ್ ಮೂಲಕ 2024ರಲ್ಲಿ ಮದುವೆಯಾಗಿದ್ದರು. ಪಹಲ್ಗಾಂ ದಾಳಿ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ಮಿನಲ್ ಖಾನ್ ಭಾರತ ತೊರೆಯುವಂತಾಗಿದೆ. ಆದೇಶದ ಪ್ರಕಾರ ಮಿನಲ್ ಖಾನ್ ಭಾರತ ತೊರೆದು ತವರುಮನೆ ಪಾಕಿಸ್ತಾನ ಸೇರಿದ್ದಾರೆ. ಆದರೆ ಈಗ ಮುನೀರ್ ಖಾನ್ ಸಂಕಷ್ಟದಲ್ಲಿ ಸಿಲುಕಿದ್ದು, ನೌಕರಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಪಾಕ್ ಮಹಿಳೆಯನ್ನು ಮದುವೆಯಾದ ಮುನೀರ್ ಖಾನ್ ವಿರುದ್ಧ ಆಂತರಿಕ ತನಿಖೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ. 

ನಿಯಮ ಉಲ್ಲಂಘನೆ 
ಸಿಆರ್‌ಪಿಎಫ್‌ ಕಾನ್ಸ್‌ಸ್ಟೇಬಲ್ ಆಗಿರುವ ಮುನೀರ್ ಖಾನ್, ಯಾವುದೇ ಅನುಮತಿಯನ್ನು ಪಡೆದುಕೊಳ್ಳದೇ ಕಾನೂನು ಉಲ್ಲಂಘಿಸಿ ಪಾಕಿಸ್ತಾನದ ಮಹಿಳೆಯನ್ನು ಮದುವೆಯಾಗಿದ್ದಾರೆ. ಮುನೀರ್ ಖಾನ್ ಮದುವೆ ಕಾರ್ಯವಿಧಾನದ ಉಲ್ಲಂಘನೆ ಮತ್ತು ರಾಷ್ಟ್ರೀಯ ಭದ್ರತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಈ ಹಿನ್ನೆಲೆ ಮುನೀರ್ ಖಾನ್ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ವರದಿಯಾಗಿದೆ. 

ಮುನೀರ್ ಖಾನ್ ಸದ್ಯ 41ನೇ ಬಟಾಲಿಯನ್‌ನಲ್ಲಿದ್ದು, ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಪಾಕಿಸ್ತಾನಿ ಮಹಿಳೆ ಮಿನಲ್ ಖಾನ್ ಎಂಬವರನ್ನು ಮದುವೆಯಾಗಲು ಅನುಮತಿ ಕೇಳಿ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ಅರ್ಜಿಯ ಪರಿಶೀಲನೆ ನಡೆಸಿ ಅನುಮತಿ ನೀಡುವ ಮುಂಚೆಯೇ 24ನೇ ಮೇ 2024ರಂದು ಮಿನಲ್ ಖಾನ್ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮುನೀರ್ ಖಾನ್ ಮದುವೆಯಾಗಿದ್ದಾರೆ. ಅನುಮತಿಯಿಲ್ಲದೆ ನಡೆದ ಈ ವಿವಾಹ ಇದಾಗಿದ್ದು, ಈಗ ಅವರ ವಿರುದ್ಧ ಶಿಸ್ತು ಕ್ರಮ (disciplinary process) ಕೈಗೊಳ್ಳಲಾಗಿದೆ ಎಂದು ಸಿಆರ್‌ಪಿಎಫ್ ಹೇಳಿಕೆಯನ್ನು ಬಿಡುಗಡೆಗೊಳಿಸಿದೆ. 

ಇದನ್ನೂ ಓದಿ:  ತನ್ನ ಪ್ರಜೆಗಳಿಗೆ ತವರಿಗೆ ಮರಳಲು ಅವಕಾಶ, ಕೊನೆಗೂ ವಾಘಾ ಗಡಿ ತೆರೆಯಲು ಒಪ್ಪಿದ ಪಾಕಿಸ್ತಾನ!

ಮದುವೆ ಬಳಿಕ ಮುನೀರ್ ಖಾನ್ ನಡವಳಿಕೆಯಲ್ಲಿ ಹಲವು ಬದಲಾವಣೆಗಳು ಕಂಡು ಬಂದಿವೆ ಎಂದು ವರದಿಯಾಗಿದೆ. ವೀಸಾ ಅವಧಿ ಮುಗಿದ ಬಳಿಕವೂ ಪತ್ನಿಯನ್ನು ಭಾರತದಲ್ಲಿಯೇ ಮುನೀರ್ ಖಾನ್ ಇರಿಸಿಕೊಂಡಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ. ಪತ್ನಿ ತನ್ನೊಂದಿಗಿರುವ ಮಾಹಿತಿಯನ್ನು ಮುನೀರ್ ಖಾನ್ ಮುಚ್ಚಿಟ್ಟಿದ್ದರು. ಮಿನಲ್ ಖಾನ್ ಟೂರಿಸ್ಟ್ ವೀಸಾ ಪಡೆದು ವಾಘಾ ಗಡಿ ಮೂಲಕ ಭಾರತಕ್ಕೆ ಬಂದಿದ್ದರು. ಮಿನಲ್ ಖಾನ್ ಟೂರಿಸ್ಟ್ ವೀಸಾ ಅವಧಿ 22ನೇ ಮಾರ್ಚ್ 2025ರಂದು ಕೊನೆಯಾಗಿತ್ತು. ಈ ವಿಷಯ ತಿಳಿದಿದ್ದರೂ ಈ ವಿಷಯವನ್ನು ಮುನೀರ್ ಖಾನ್ ಮುಚ್ಚಿಟ್ಟಿದ್ದರು. ಓರ್ವ ಸೈನಿಕನಾಗಿ ದೇಶದ ಭದ್ರತೆ ವಿಷಯದಲ್ಲಿ ಮುನೀರ್ ಲೋಪವೆಸಗಿರೋದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಹಿನ್ನೆಲೆ ಮುನೀರ್ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸಿಆರ್‌ಪಿಎಫ್‌ ಮುಂದಾಗಿದೆ. 

ನ್ಯಾಯಾಲಯದಿಂದ 10 ದಿನದ ಅವಕಾಶ
ಕಾನ್‌ಸ್ಟೇಬಲ್ ಮುನೀರ್ ಖಾನ್ 1964 ರ CCS (ನಡವಳಿಕೆ) ನಿಯಮಗಳ ನಿಯಮ 21(3) ರ ಅಡಿಯಲ್ಲಿ ನಡವಳಿಕೆ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಈಗ ಇಲಾಖಾ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಪರಿಗಣಿಸಲಾಗುತ್ತಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತ ಸರ್ಕಾರ ನಿರ್ದೇಶನ ಎಲ್ಲಾ ಪಾಕಿಸ್ತಾನಿಗಳನ್ನು ಗಡಿಪಾರು ಮಾಡುವಂತೆ ನಿರ್ದೇಶನ ನೀಡಿತ್ತು. ಬುಧವಾರ ಮಿನಾಲ್ ಖಾನ್ ಅವರನ್ನು ಗಡಿಪಾರು ಮಾಡಲು  ವಾಘಾ ಗಡಿಗೆ ಕರೆದೊಯ್ಯಲಾಗಿತ್ತು. ಅಂತಿಮ ಕ್ಷಣದಲ್ಲಿ ಗಡೀಪಾರು ಆಗೋದರಿಂದ ಮಿನಾಲ್ ಖಾನ್‌ ಗೆ  ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ 10 ದಿನದ ಅವಕಾಶವನ್ನು ನೀಡಿದೆ. 

ಇದನ್ನೂ ಓದಿ: 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ