Breaking ಪಾಕಿಸ್ತಾನದ ಎಲ್ಲಾ ಉತ್ಪನ್ನ ಬ್ಯಾನ್, ಆಮದು ಸಂಪೂರ್ಣ ಸ್ಥಗಿತಗೊಳಿಸಿದ ಭಾರತ

Published : May 03, 2025, 12:37 PM ISTUpdated : May 03, 2025, 12:52 PM IST
Breaking ಪಾಕಿಸ್ತಾನದ ಎಲ್ಲಾ ಉತ್ಪನ್ನ ಬ್ಯಾನ್, ಆಮದು ಸಂಪೂರ್ಣ ಸ್ಥಗಿತಗೊಳಿಸಿದ ಭಾರತ

ಸಾರಾಂಶ

ಪೆಹಲ್ಗಾಂ ಉಗ್ರದಾಳಿ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನದೊಂದಿಗಿನ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಿದೆ. ಕೇಂದ್ರ ವಾಣಿಜ್ಯ ಸಚಿವಾಲಯವು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದೆ. ಪ್ರತ್ಯಕ್ಷ ಹಾಗೂ ಪರೋಕ್ಷ ಆಮದು-ರಫ್ತು ವಹಿವಾಟುಗಳನ್ನು ನಿಷೇಧಿಸಲಾಗಿದೆ. ಈ ನಿರ್ಧಾರವು ಫಾರಿನ್ ಟ್ರೇಡ್ ಪಾಲಿಸಿ ೨೦೨೩ರ ಅಡಿಯಲ್ಲಿ ಜಾರಿಗೆ ಬಂದಿದೆ.

ನವದೆಹಲಿ(ಮೇ.03)  ಪೆಹಲ್ಗಾಂ ಉಗ್ರ ದಾಳಿ ಬಳಿಕ ಭಾರತ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಮೂಲಕ ಪಾಕಿಸ್ತಾನಕ್ಕೆ ನರಕ ತೋರಿಸಲು ಮುಂದಾಗಿದೆ. ಸಿಂಧೂ ನದಿ ಒಪ್ಪಂದ, ವಾಘ ಗಡಿ ಸ್ಥಗಿತ ಸೇರಿದಂತೆ ಪ್ರಮುಖ ನಿರ್ಧಾರ ಕೈಗೊಂಡಿದ್ದ ಭಾರತ ಇದೀಗ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ನೀಡಿದೆ. ಪಾಕಿಸ್ತಾನ ಜೊತೆಗಿನ ಎಲ್ಲಾ ಅಮದು  ವಹಿವಾಟು ಬ್ಯಾನ್ ಮಾಡಿದೆ. ಇದೀಗ ಪಾಕಿಸ್ತಾನದ ಹಾಗೂ ಪಾಕಿಸ್ತಾನ ಮೂಲದ ಯಾವುದೇ ವಸ್ತುಗಳು ಅಂದರೆ ಪರೋಕ್ಷವಾಗಿಯೂ ಭಾರತ ಆಮದು ಮಾಡಿಕೊಳ್ಳುವಂತಿಲ್ಲ,  ಈ ಕುರಿತು ಕೇಂದ್ರ ವಾಣಿಜ್ಯ ಸಚಿವಾಲಯ ಆದೇಶ ಹೊರಡಿಸಿದೆ.

ಪೆಹಲ್ಗಾಂನಲ್ಲಿ ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿದ ದಾಳಿಯಲ್ಲಿ 26 ಭಾರತೀಯರು ಮೃತಪಟ್ಟಿದ್ದಾರೆ. ಈ ದಾಳಿಯ ತನಿಖೆಯನ್ನು ಎನ್ಐಎ ನಡೆಸುತ್ತಿದೆ. ಇತ್ತ ಭಾರತೀಯ ಸೇನೆ ಉಗ್ರರ ಸದೆಬಡಿಯಲು ಕಾರ್ಯಾಚರಣೆ ನಡೆಸುತ್ತಿದೆ.  ಪೆಹಲ್ಗಾಂ ದಾಳಿ ಹಿಂದೆ ಪಾಕಿಸ್ತಾನ ಉಗ್ರರು, ಕಾಶ್ಮೀರಯ ಸ್ಥಳೀಯ ಉಗ್ರರು, ಪಾಕಿಸ್ತಾನ ಸೇನೆ, ಐಎಸ್ಐ ಕೈವಾಡಗಳ ಸುಳಿವು ಸಿಕ್ಕಿದೆ. ಇದರ ಬೆನ್ನಲ್ಲೇ ಕೇಂದ್ರ ವಾಣಿಜ್ಯ ಸಚಿವಾಲಯ, ಮಹತ್ವದ ಆದೇಶ ಹೊರಡಿಸಿದೆ. ಪಾಕಿಸ್ತಾನ ಜೊತೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷಾಗಿ ಯಾವುದೇ ಆಮದು ವ್ಯವಹಾರವಿಲ್ಲ ಎಂದು ಘೋಷಿಸಿದೆ. 

ಯುಪಿ ಹೆದ್ದಾರಿಯಲ್ಲಿ IAF ಯುದ್ಧ ವಿಮಾನ ಲ್ಯಾಂಡಿಂಗ್, ಟೇಕ್ಆಫ್ ನಡೆಸಿದ್ದೇಕೆ?

ಫಾರಿನ್ ಟ್ರೇಡ್ ಪಾಲಿಸಿ 2023((FTP) ಅಡಿಯಲ್ಲಿ ಭಾರತ ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಕುರಿತು ಡೈರೆಕ್ಟೋರೇಟ್ ಜನರಲ್ ಆಫರ್ ಫಾರಿನ್ ಟ್ರೇಡ್ (DGFT) ಈ ಕುರಿತು ಆದೇಶ ಹೊರಡಿಸಿದ್ದಾರೆ. ಈ ಆದೇಶದಲ್ಲಿ ಭಾರತದ ರಾಷ್ಟ್ರೀ ಭದ್ರತೆ ಹಾಗೂ ಸಾರ್ವಜನಿಕ ಪಾಲಿಸಿ ಗಮನದಲ್ಲಿಟ್ಟುಕೊಂಡು ಪಾಕಿಸ್ತಾನದ ಜೊತೆಗಿನ ಎಲ್ಲಾ ಆಮದು  ವಹಿವಾಟನ್ನು ಬ್ಯಾನ್ ಮಾಡಲಾಗಿದೆ ಎಂದು ಉಲ್ಲೇಖಿಸಿದೆ. ಪಾಕಿಸ್ತಾನ ಜೊತೆಗಿನ ವ್ಯಾಪಾರ ವಹಿವಾಟು ಭಾರತದ ರಾಷ್ಟ್ರೀಯ ಭದ್ರತೆಗೆ ಸವಾಲೊಡ್ಡುತ್ತಿರುವ ಕಾರಣ ಈ ತಕ್ಷಣದಿಂದಲೇ ಎಲ್ಲಾ ವಹಿವಾಟನ್ನು ಬ್ಯಾನ್ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಮಾಡಬೇಕಿದ್ದರೂ, ಭಾರತ ಸರ್ಕಾರದ ಅನುಮೋದನೆ ಪಡೆಯತಕ್ಕದ್ದು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಎಲ್ಲಾ ವಹಿವಾಟು ಬಂದ್
ಪೆಹಲ್ಗಾಂ ದಾಳಿ ಬೆನ್ನಲ್ಲೇ ಭಾರತ ಅಟ್ಟಾರಿ ವಾಘಾ ಗಡಿಯನ್ನು ಮುಚ್ಚಿತ್ತು. ಇದರಿಂದ ಭಾರತ ಹಾಗೂ ಪಾಕಿಸ್ತಾನ ನಡುವಿನ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಇದೀಗ ಇತರ ಯಾವುದೇ ಮಾರ್ಗವಾಗಿ ಅಥವಾ ಮೂಲವಾಗಿಯೂ ಪಾಕಿಸ್ತಾನದ ಜೊತೆ ವಹಿವಾಟು ನಡೆಸುವುದನ್ನು ಭಾರತ ಬ್ಯಾನ್ ಮಾಡಿದೆ.

ಪೆಹಲ್ಗಾಂ ದಾಳಿ ಬಳಿಕ ಭಾರತ ಪ್ರತೀಕಾರಕ್ಕೆ ಸಜ್ಜಾಗುತ್ತಿದೆ. ಭಾರತ ತಯಾರಿ ನೋಡಿ ಬೆಚ್ಚಿ ಬಿದ್ದಿರುವ ಪಾಕಿಸ್ತಾನ, ತಮ್ಮಲ್ಲಿ ನ್ಯೂಕ್ಲಿಯರ್ ಅಸ್ತ್ರವಿದೆ ಎಂದು ಬೆದರಿಕೆ ಹಾಕುತ್ತಿದೆ. ಜೊತೆಗೆ ಅಮೆರಿಕ ಸೇರಿದಂತೆ ಇತರ ರಾಷ್ಟ್ರಗಳ ಮುಂದೆ ನ್ಯೂಕ್ಲಿಯರ್ ಅಸ್ತ್ರ ಮಾತುಗಳನ್ನಾಡಿ ಭಾರತವನ್ನು ಒತ್ತಡಕ್ಕೆ ಸಿಲುಕಿಸುವ ಪ್ರಯತ್ನವನ್ನು ಪಾಕಿಸ್ತಾನ ಮಾಡುತ್ತಿದೆ. ಆದರೆ ಭಾರತ ಇದ್ಯಾವುದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈಗಾಗಲೇ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ಮುಂದಾಗಿದೆ.

ಪಾಕಿಸ್ತಾನಕ್ಕೆ ಆರ್ಥಿಕ ಹೊಡೆತ
ಪಾಕಿಸ್ತಾನವನ್ನು ಗ್ರೇ ಪಟ್ಟಿಗೆ ಸೇರಿಸಲು ಭಾರತ ವಿಶ್ವಸಂಸ್ಥೆಯಲ್ಲಿ ಮನವಿ ಮಾಡಿದೆ. ಈ ಮೂಲಕ ಪಾಕಿಸ್ತಾನಕ್ಕೆ ಹರಿದು ಬರುತ್ತಿರುವ ಆರ್ಥಿಕ ಸಹಾಯ ನಿಲ್ಲಿಸಲು ಭರಾತ ಪ್ಲಾನ್ ಮಾಡಿದೆ. ಇದರ ಜೊತೆಗೆ ಭಾರತ ಕೂಡ ಟ್ರೇಡ್ ನಿಲ್ಲಿಸಿದ್ದು, ಪಾಕಿಸ್ತಾನಕ್ಕೆ ಮತ್ತಷ್ಟು ಆರ್ಥಿಕ ಹೊರೆ ನೀಡಲು ಮುಂದಾಗಿದೆ. ಪಾಕಿಸ್ತಾನದಲ್ಲಿ ಈಗಾಗಲೇ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇದೀಗ ತೆಗೆದುಕೊಂಡ ಕೆಲ ಕ್ರಮಗಳಿಂದ ಪಾಕಿಸ್ತಾನ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ. ಹೀಗಾಗಿ ಪಾಕಿಸ್ತಾನ ಮಿಲಿಟರಿ ಪ್ರಯೋಗ ಅಸಾಧ್ಯವಾಗಲಿದೆ.

ಪೆಹಲ್ಗಾಂ ದಾಳಿ, ಸುಹಾಶ್ ಶೆಟ್ಟಿ ಹ*ತ್ಯೆ ಖಂಡಿಸಿ ಚಿಕ್ಕಮಗಳೂರು ಸಂಪೂರ್ಣ ಬಂದ್
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..