ಒಂದು ಪೀಸ್‌ ಹೆಚ್ಚಿಗೆ ಹಾಕದ ಕಾರಣಕ್ಕೆ ಮಟನ್‌ ಅಂಗಡಿ ಎದುರು ಕೊಳೆತ ಶವ ಎಸೆದ ವ್ಯಕ್ತಿ!

Published : Feb 10, 2025, 03:38 PM IST
ಒಂದು ಪೀಸ್‌ ಹೆಚ್ಚಿಗೆ ಹಾಕದ ಕಾರಣಕ್ಕೆ ಮಟನ್‌ ಅಂಗಡಿ ಎದುರು ಕೊಳೆತ ಶವ ಎಸೆದ ವ್ಯಕ್ತಿ!

ಸಾರಾಂಶ

ತಮಿಳುನಾಡಿನಲ್ಲಿ ಮಟನ್ ಅಂಗಡಿಯ ಮಾಲೀಕ ಒಂದು ಪೀಸ್ ಮಟನ್ ಹೆಚ್ಚಿಗೆ ನೀಡಲು ನಿರಾಕರಿಸಿದ್ದಕ್ಕೆ ಸ್ಮಶಾನದಲ್ಲಿ ಕೆಲಸ ಮಾಡುವ ವ್ಯಕ್ತಿ ಕೊಳೆತ ಶವವನ್ನು ಅಂಗಡಿಯ ಮುಂದೆ ಎಸೆದಿದ್ದಾನೆ. ಮದ್ಯಪಾನ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಚೆನ್ನೈ (ಫೆ.10): ಅಚ್ಚರಿಯ ಘಟನೆಯಲ್ಲಿ, ಸ್ಮಶಾನದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ತಮಿಳುನಾಡಿನ ಮಟನ್‌ ಶಾಪ್‌ನ ಎದುರು ಕೊಳೆತ ಶವ ಎಸೆದಿರುವ ಘಟನೆ ನಡೆದಿದೆ. ಒಂದು ಪೀಸ್‌ ಮಟನ್‌ಅನ್ನು ಹೆಚ್ಚು ಹಾಕಲು ಮಟನ್‌ ಅಂಗಡಿಯ ಮಾಲೀಕ ನಿರಾಕರಿಸಿದ್ದ ಕಾರಣಕ್ಕೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಸ್ಥಳೀಯ ವರದಿಗಳ ಪ್ರಕಾರ ವ್ಯಕ್ತಿಯನ್ನು ಕುಮಾರ್‌ ಎಂದು ಗುರುತಿಸಲಾಗಿದ್ದು, ಕೃತ್ಯ ನಡೆಯುವ ವೇಳೆ ಆತ ಮದ್ಯಪಾನ ಮಾಡಿದ್ದ ಎನ್ನಲಾಗಿದೆ. ಈ ಕುರಿತಾಗಿ ಏಷ್ಯಾನೆಟ್‌ ನ್ಯೂಸ್‌ ಮಲಯಾಳಂ ವರದಿ ಮಾಡಿದ್ದು, ತಮಿಳುನಾಡಿನ ಥೇನಿಯ ಸಂಗೀತಾ ಮಟನ್‌ ಸ್ಟಾಲ್‌ ಬಳಿ ಈ ಘಟನೆ ನಡೆದಿದೆ. ಈ ಮಟನ್‌ ಶಾಪ್‌ಅನ್ನು ಮಣಿಯರಸನ್ ಎನ್ನುವ ವ್ಯಕ್ತಿ ನಡೆಸುತ್ತಿದ್ದರು. ಆರೋಪಿಯಾಗಿರುವ ಕುಮಾರ್‌, ಸ್ಮಶಾನದಲ್ಲಿ ಶವ ಸುಡುವ ಕೆಲಸ ಮಾಡುತ್ತಿದ್ದಾನೆ. ನಾಲ್ಕು ವರ್ಷಗಳ ಹಿಂದಿನವರೆಗೂ ಮಣಿಯರಸನ್ ಒಡೆತನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. 

ಘಟನೆ ನಡೆಯುವ ದಿನ ಬೆಳಗ್ಗೆ ಕುಮಾರ್‌ ಅತಿಯಾಗಿ ಕುಡಿದಿದ್ದ ಎನ್ನಲಾಗಿದೆ. ಮಣಿಯರಸನ್‌ ಅವರ ಮಟನ್‌ ಶಾಪ್‌ಗೆ ಬಂದಿದ್ದ ಆತ ಮಟನ್‌ ಖರೀದಿ ಮಾಡಿದ್ದಾನೆ. ಈ ವೇಳೆ ಒಂದು ಪೀಸ್ ಮಟನ್‌ ಅನ್ನು ಹೆಚ್ಚಿಗೆ ಹಾಕುವಂತೆ ಮನವಿ ಮಾಡಿದ್ದಾನೆ. ಇದಕ್ಕೆ ಮಣಿಯರಸನ್‌ ವಿರೋಧ ವ್ಯಕ್ತಪಡಿಸಿದ್ದ. ಮಟನ್‌ ಬೆಲೆ ಹೆಚ್ಚಾಗಿದ್ದು, ಪೀಸ್‌ ನೀಡೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಇದರಿಂದ ಸಿಟ್ಟಾಗಿದ್ದ ಕುಮಾರ್‌, ಸೀದಾ ಸ್ಮಶಾನಕ್ಕೆ ಹೋಗಿದ್ದಾನೆ. ಈ ವೇಳೆ ಕೊಳೆತ ಶವವನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಬಂದು ಮಣಿಯರಸನ್‌ನ ಅಂಗಡಿಯ ಎದುರುಗಡೆ ಎಸೆದಿದ್ದಾನೆ. ಈ ಫೋಟೋ ಕೂಡ ವೈರಲ್‌ ಆಗಿದೆ.

ಬೆಂಗಳೂರಿನ ಶ್ರೀಮಂತರಿಗೆ ಮಾತ್ರವೇ ಇನ್ನು ಮೆಟ್ರೋ, ಬಡವ, ಮಧ್ಯಮವರ್ಗಕ್ಕೆ ಸರ್ಕಾರಗಳೇ ಶತ್ರು!

ತಕ್ಷಣವೇ ಅಂಗಡಿಯ ಮಾಲೀಕ ಪೊಲೀಸರಿಗೆ ಈ ಮಾಹಿತಿ ನೀಡಿದ್ದು, ತಕ್ಷಣವೇ ಪೊಲೀಸರು ಆಗಮಿಸಿದ್ದಾರೆ. ಪೊಲೀಸರು ಮೊದಲಿಗೆ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಮೃತದೇಹವನ್ನು ಅಲ್ಲಿಂದ ತೆಗೆಯಲು ಪೊಲೀಸರು ಕೂಡ ನಿರಾಕರಿಸಿದ್ದರು ಎನ್ನಲಾಗಿದೆ. ಆ ಬಳಿಕ ಪೊಲೀಸರೆ ಒಂದು ಆಂಬ್ಯುಲೆನ್ಸ್‌ಅನ್ನು ಕರೆದು, ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಬಳಿಕ ಕುಮಾರ್‌ನನ್ನು ಬಂಧಿಸಿ ಕೋರ್ಟ್‌ ಮುಂದೆ ಹಾಜರುಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

Haveri: 'ಡಾಬಾ ಬಂತು ಊಟ ಮಾಡ್ತೀಯಾ' ಅಂತಾ ಪತ್ನಿ ಕಣ್ಣೀರಿಟ್ಟಾಗ ಎದ್ದುಕೂತ ಮೃತವ್ಯಕ್ತಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಕೆಎಸ್‌ಸಿಎ ಚುನಾವಣೆ - ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌