ಸಹ ಶಿಕ್ಷಕನಿಗೆ 18 ಬಾರಿ ಹೊಡೆದ ಪ್ರಿನ್ಸಿಪಲ್; ವಿಡಿಯೋ ವೈರಲ್ ಬೆನ್ನಲ್ಲೇ ಶಿಕ್ಷಣ ಇಲಾಖೆಯಿಂದ ತನಿಖೆ

Published : Feb 10, 2025, 12:02 PM IST
ಸಹ ಶಿಕ್ಷಕನಿಗೆ 18  ಬಾರಿ ಹೊಡೆದ ಪ್ರಿನ್ಸಿಪಲ್; ವಿಡಿಯೋ ವೈರಲ್ ಬೆನ್ನಲ್ಲೇ ಶಿಕ್ಷಣ ಇಲಾಖೆಯಿಂದ ತನಿಖೆ

ಸಾರಾಂಶ

ಶಾಲೆಯಲ್ಲಿ ವಾರಕ್ಕೊಮ್ಮೆ ನಡೆಸುವ ಮೀಟಿಂಗ್‌ನಲ್ಲಿ ಪ್ರಾಂಶುಪಾಲರು ಸಹ ಶಿಕ್ಷಕರಿಗೆ ಒಂದು ನಿಮಿಷದಲ್ಲಿ ಬರೋಬ್ಬರಿ 18 ಬಾರಿ ಬಾರಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಶಿಕ್ಷಣ ಇಲಾಖೆಯಿಂದ ತನಿಖೆಗೆ ಆದೇಶ ನೀಡಲಾಗಿದೆ.

ಸರ್ಕಾರಿ ಶಾಲೆಯೊಂದರಲ್ಲಿ ವಾರಕ್ಕೊಮ್ಮೆ ಮೀಟಿಂಗ್ ಮಾಡುವಾಗ ಮಾತನಾಡುತ್ತಾ ಕುಳಿತಿದ್ದ ವೇಳೆ ಪ್ರಾಂಶುಪಾಲರು ಸಹ ಶಿಕ್ಷಕರ ಮೇಲೆ ಕೋಪಗೊಂಡು ಒಂದೇ ಒಂದು ನಿಮಿಷದಲ್ಲಿ ಬರೋಬ್ಬರಿ 18 ಬಾರಿ ಹೊಡೆದಿದ್ದಾರೆ. ಈ ವಿಡಿಯೋ ಇದೀಗ ಶಿಕ್ಷಣ ಇಲಾಖೆಯಲ್ಲಿ ವೈರಲ್ ಆಗಿದ್ದು, ತನಿಖೆಗೆ ಆದೇಶ ಹೊರಡಿಸಲಾಗಿದೆ.  ಆದರೆ, ಸಹ ಶಿಕ್ಷಕ ಮಾಡಿದ್ದ ಎಡವಟ್ಟಯ ಏನೆಂಬುದೇ ಕುತೂಹಲವಾಗಿದೆ.

ಈ ಘಟನೆ ಗುಜರಾತ್‌ನ ಭರೂಚ್‌ನಲ್ಲಿ ನಡೆದಿದೆ. ಶಾಲೆಯ ಪ್ರಿನ್ಸಿಪಾಲ್ ತಮ್ಮ ಶಿಕ್ಷಕರ ಮೇಲೆ ಕೋಪಗೊಂಡು ಒಂದು ನಿಮಿಷದಲ್ಲಿ 18 ಬಾರಿ ಹೊಡೆದಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಶಿಕ್ಷಕ ರಾಜೇಂದ್ರ ಪರ್ಮಾರ್ ಅವರ ಗಣಿತ ಮತ್ತು ವಿಜ್ಞಾನ ಬೋಧನಾ ಶೈಲಿಯ ಬಗ್ಗೆ ದೂರುಗಳಿದ್ದವು. ಪ್ರಿನ್ಸಿಪಾಲ್ ಹಿತೇಂದ್ರ ಸಿಂಗ್ ಠಾಕೂರ್, ಪರ್ಮಾರ್ ಅವರನ್ನು ದುರ್ವರ್ತನೆ ಮತ್ತು ತರಗತಿಯಲ್ಲಿ ಅವಾಚ್ಯ ಶಬ್ದಗಳ ಬಳಕೆ ಆರೋಪಿಸಿದ್ದಾರೆ. ಪರ್ಮಾರ್, ಪ್ರಿನ್ಸಿಪಾಲ್ ಕೋಪದಿಂದ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಈ ಘಟನೆಗೆ ಮುನ್ನ ಶಾಲೆಯಲ್ಲಿ ಸಭೆ ನಡೆದಿದ್ದು, ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಶಿಕ್ಷಕ ಪರ್ಮಾರ್ ಅವರು ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಳ್ಳುತ್ತಿದ್ದರು ಎಂದು ಆರೋಪ ಮಾಡಿದ್ದಾರೆ ಪ್ರಾಚಾರ್ಯ ಠಾಕೂರ್  ಅವರು ಪ್ರ ಶ್ನೆ ಮಾಡಿದ್ದಾರೆ. ಜೊತೆಗೆ ವಿದ್ಯಾರ್ಥಿಗಳನ್ನು ಮನೆಗೆ ಕರೆಸಿಕೊಳ್ಳುತ್ತಿದ್ದರು ಎಂದು ಆರೋಪ ಕೇಳಿಬಂದಿದೆ ಎಂದಿದ್ದಾರೆ. ಈ ಬಗ್ಗೆ ಶಿಕ್ಷಕ ಪರ್ಮಾರ್ ಮಾತ್ರ ನಾನು ಹಾಗೇ ಮಾಡುವುದು ಏನಿವಾಗ ಎಂಬಂತೆ ದುರ್ವರ್ತನೆ ತೋರಿದ್ದಾರೆ.

ಇದನ್ನೂ ಓದಿ: ಜನ ಏನ್ ಅಂತಾರೆ ಅಂತ ಚಿಂತೆನಾ? ಹಾಗಾದ್ರೆ ಕತ್ತೆಯ ಈ ಕಥೆಯನ್ನೊಮ್ಮೆ ಓದಿ

ಎಲ್ಲ ಶಿಕ್ಷಕರೂ ಹೇಳಿದರೂ ಈ ಬಗ್ಗೆ ಕ್ಯಾರೇ ಎನ್ನದ ಸಹ ಶಿಕ್ಷಕನ ನಡೆಯ ಬಗ್ಗೆ ಪ್ರಾಚಾರ್ಯರಿಗೆ ತೀವ್ರ ಕೋಪ ಬಂದಿದೆ. ಆಗಲೂ ಸುಮ್ಮನಿರದ ಸಹ ಶಿಕ್ಷಕ ಪ್ರಾಚಾರ್ಯುರಿಗೆ ಎದುರು ಮಾತನಾಡಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಪ್ರಾಚಾರ್ಯರು ತಮ್ಮ ಸೀಟಿನಿಂದ ಎದ್ದುಬಂದು ಕುರ್ಚಿಯ ಮೇಲೆ ಕುಳಿತಿದ್ದ ಸಹ ಶಿಕ್ಷಕರಿಗೆ ಒಂದು ನಿಮಿಷದಲ್ಲಿ ಕೆನ್ನೆಗೆ, ಬೆನ್ನಿಗೆ ಸೇರಿದಂತೆ ಬರೋಬ್ಬರಿ 18 ಬಾರಿ ಹೊಡೆದಿದ್ದಾರೆ. ಈ ವೇಳೆ ಸಹ ಶಿಕ್ಷಕರು ಪ್ರಾಚಾರ್ಯರಿಗೆ ಒಮ್ಮೆ ಕಾಲಿನಿಂದ ಒದ್ದಿದ್ದಾರೆ. ಈ ಘಟನೆಯ ನಂತರ ಸಹ ಶಿಕ್ಷಕರು ಮೇಲಿನ ಅಧಿಕಾರಿಗಳಿಗೆ ಪ್ರಾಚಾರ್ಯರು ಹಲ್ಲೆ ಮಾಡಿದ್ದಾರೆಂದು ದೂರು ಕೊಟ್ಟಿದ್ದಾರೆ. ಜೊತೆಗೆ, ಪೊಲೀಸ್ ಠಾಣೆ ಮೆಟ್ಟಿಲೇರಲೂ ಮುಂದಾಗಿದ್ದಾರೆ.

ಸರ್ಕಾರಿ ಶಾಲೆ ಶಿಕ್ಷಕ ಪರ್ಮಾರ್ ಅವರ ದೂರಿನ ಮೇಲೆ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಬಂದು ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ. ಜೊತೆಗೆ, ಈ ವಿಡಿಯೋವನ್ನು ಶಾಲೆಯ ಸಹ ಸಿಬ್ಬಂದಿ ಮೊಬೈಲ್‌ಗಳಿಗೆ ಹಂಚಿಕೊಂಡಿದ್ದಾರೆ. ಇದೀಗ ಶಿಕ್ಷಕರ ಹೊಡೆದಾಟದ ವಿಡಿಯೋ ವೈರಲ್ ಆಗಿದೆ. ನಂತರ, ಜಿಲ್ಲಾ ಶಿಕ್ಷಣಾಧಿಕಾರಿ ಸ್ವಾತಿಬಾ ರೌಲ್ ಅವರು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಶಿಕ್ಷಣ ನಿರೀಕ್ಷಕರು ತನಿಖೆ ನಡೆಸಿ ವರದಿ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ತಿರುಪತಿ ಪ್ರಸಾದ ಕಲಬೆರಕೆ ಪ್ರಕರಣ: ನಾಲ್ವರ ಬಂಧನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ
ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!