
Tahawwur Rana Extradition live updates: ಮುಂಬೈ 26/11 ದಾಳಿಯ ಪ್ರಮುಖ ಆರೋಪಿ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಿ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕಸ್ಟಡಿಗೆ ಕಳುಹಿಸಲಾಗಿದೆ. ಆದರೆ, ಈ ಯಶಸ್ಸಿನ ಕೀರ್ತಿಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಕ್ರೆಡಿಟ್ ವಾರ್ ಆರಂಭವಾಗಿದೆ.
ಯುಪಿಎ ರಾಜತಾಂತ್ರಿಕತೆಯ ಫಲ
ಯುಪಿಎ ಸರ್ಕಾರದ ಗೃಹ ಸಚಿವರಾಗಿದ್ದ ಪಿ ಚಿದಂಬರಂ, ತಹವ್ವೂರ್ ರಾಣಾನನ್ನು ಭಾರತಕ್ಕೆ ಕರೆತರುವುದು ಯುಪಿಎ ಸರ್ಕಾರದ ರಾಜತಾಂತ್ರಿಕ ಪ್ರಯತ್ನಗಳ ಫಲವೆಂದು ಹೇಳಿದ್ದಾರೆ. ಯುಪಿಎ ಅವಧಿಯಲ್ಲಿ ರಚನೆಯಾದ NIA, ಡೇವಿಡ್ ಹೆಡ್ಲಿ ಮತ್ತು ರಾಣಾ ವಿರುದ್ಧ ಪ್ರಕರಣ ದಾಖಲಿಸಿತು. ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ಹೇಳುವಂತೆ, '2009ರಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಯಿತು. NIA ತಂಡವು ಅಮೆರಿಕದಲ್ಲಿ ಹೆಡ್ಲಿಯನ್ನು ವಿಚಾರಣೆಗೊಳಪಡಿಸಿತು. ರಾಣಾ ಭಾರತದಲ್ಲಿ ವಲಸೆ ಕೇಂದ್ರ ತೆರೆದಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿತು. ಇದೊಂದು ದೊಡ್ಡ ಪಿತೂರಿಯಾಗಿತ್ತು' ಎಂದು ವಿವರಿಸಿದ್ದಾರೆ. ಯುಪಿಎ ಸರ್ಕಾರವು ಅಮೆರಿಕದ ಮೇಲೆ ಒತ್ತಡ ಹೇರಿ, ರಾಣಾನನ್ನು ವಶಕ್ಕೆ ಪಡೆಯಲು ನಿರಂತರ ಪ್ರಯತ್ನಿಸಿತು. ಇಂದಿನ ಯಶಸ್ಸು ಯುಪಿಎ ಪ್ರಯತ್ನಗಳ ಫಲಿತಾಂಶವಾಗಿದೆ. ಇದರಲ್ಲಿ ರಾಜಕೀಯ ಮಾಡಬಾರದು ಎಂದಿದ್ದಾರೆ.
ಇದನ್ನೂ ಓದಿ: ರಾಣಾ ಹಸ್ತಾಂತರ: ಮೋದಿ ಸರ್ಕಾರ ಶ್ಲಾಘಿಸಿದ ಹಿರಿಯ ಕಾಂಗ್ರೆಸ್ ನಾಯಕ!
ಕಾಂಗ್ರೆಸ್ ಏನೂ ಮಾಡಿಲ್ಲ: ಬಿಜೆಪಿ
ಬಿಜೆಪಿಯು ಕಾಂಗ್ರೆಸ್‌ನ ಆರೋಪವನ್ನು ತಿರಸ್ಕರಿಸಿದ್ದು, ಭಯೋತ್ಪಾದಕರ ವಿರುದ್ಧ ಕಾಂಗ್ರೆಸ್ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದೆ. ರಾಣಾನನ್ನು ಭಾರತಕ್ಕೆ ಕರೆತರುವಲ್ಲಿ ಮೋದಿ ಸರ್ಕಾರದ ಕೊಡುಗೆಯೇ ಪ್ರಮುಖವಾಗಿದೆ ಎಂದು ಬಿಜೆಪಿ ವಾದಿಸಿದೆ.
ಕಾಂಗ್ರೆಸ್‌ನ ಟೀಕೆ: ಬಿಜೆಪಿಯ ನಾಟಕ
ಕಾಂಗ್ರೆಸ್ ನಾಯಕ ಉದಿತ್ ರಾಜ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ರಾಣಾನನ್ನು ಕರೆತರಲು 11 ವರ್ಷ ಬೇಕಾಯಿತು. 2011ರಲ್ಲಿ ಯುಪಿಎ ಸರ್ಕಾರವೇ ದಾಖಲೆಗಳನ್ನು ಸಿದ್ಧಪಡಿಸಿತು. ಬಿಜೆಪಿ ಒಂದು ಶೇಕಡಾ ಕೊಡುಗೆಯನ್ನೂ ನೀಡಿಲ್ಲ. ಇವರೆಲ್ಲ ನಾಟಕ ಮಾಡುತ್ತಿದ್ದಾರೆ ಎಂದು ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಇದನ್ನೂ ಓದಿ: ತಹವ್ವುರ್ ರಾಣಾ ವಿಚಾರಣೆಯಿಂದ ಪಾಕ್‌ಗೆ ಏಕೆ ಈ ಪರಿ ಭಯ?
ತ್ವರಿತ ವಿಚಾರಣೆಗೆ ಕರೆ
ರಾಣಾನ ವಿಚಾರಣೆಯಿಂದ ಪಾಕಿಸ್ತಾನದ ಬಣ್ಣ ಬಯಲಾಗಬಹುದು. ಸರ್ಕಾರವು ತ್ವರಿತ ವಿಚಾರಣೆಗೆ ವ್ಯವಸ್ಥೆ ಮಾಡಬೇಕು ಎಂದು ಕಪಿಲ್ ಸಿಬಲ್ ಒತ್ತಾಯಿಸಿದ್ದಾರೆ. ಭಯೋತ್ಪಾದನೆ ವಿರುದ್ಧ ಎಲ್ಲ ಸರ್ಕಾರಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: No Chicken, No Mutton! 26/11 ದಾಳಿಯ ಮಾಸ್ಟರ್ ಮೈಂಡ್ ತಹಾವೂರ್ ರಾಣಾಗೆ ಭಾರತದ ಜೈಲಲ್ಲಿ ಈ ಊಟವೇ ಗತಿ!
ಒಟ್ಟಿನಲ್ಲಿ ಈ ಪ್ರಕರಣದಲ್ಲಿ ರಾಜಕೀಯ ಕೀರ್ತಿಗಾಗಿ ಚರ್ಚೆಗಳು ತೀವ್ರಗೊಂಡರೂ, ತಹವ್ವೂರ್ ರಾಣಾನನ್ನು ಭಾರತಕ್ಕೆ ಕರೆತಂದಿರುವುದು 26/11 ದಾಳಿಯ ತನಿಖೆಗೆ ಮಹತ್ವದ ಹೆಜ್ಜೆಯಾಗಿದೆ. NIA ಈಗ ರಾಣಾನ ವಿಚಾರಣೆಯನ್ನು ಮುಂದುವರಿಸಲಿದ್ದು, ಮುಂದಿನ ಕಾನೂನು ಕ್ರಮಗಳ ಬಗ್ಗೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ