ಪಾಕ್‌ ಆಕ್ರಮಿತ ಕಾಶ್ಮೀರವನ್ನು 'ಆಜಾದ್‌ ಕಾಶ್ಮೀರ' ಎಂದ ಕೇರಳ ಶಾಸಕ ಜಲೀಲ್

By BK Ashwin  |  First Published Aug 13, 2022, 11:42 AM IST

ಕೇರಳದ ಸಿಪಿಐ(ಎಂ) ಶಾಸಕ ಕೆ.ಟಿ. ಜಲೀಲ್‌ ಪಾಕ್ ಆಕ್ರಮಿತ ಕಾಶ್ಮೀರವನ್ನು ಆಜಾದ್‌ ಕಾಶ್ಮೀರ ಎಂದು ಕರೆದಿದ್ದಾರೆ. ಈ ಹಿನ್ನೆಲೆ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾಥೆ ಸಚಿವರು ಶಾಸಕರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. 


ದೇಶದಲ್ಲಿಂದು ಎಲ್ಲೆಲ್ಲೂ ‘ಹರ್‌ ಘರ್ ತಿರಂಗಾ’ (Har Ghar Tiranga) ಅಭಿಯಾನ ಜೋರಾಗಿ ಕೇಳಿ ಬರುತ್ತಿದೆ. ಆದರೆ, ಈ ಮಧ್ಯೆ ಕೇರಳ ಶಾಸಕ ಹಾಗೂ ಮಾಜಿ ಸಚಿವ ಕೆ.ಟಿ. ಜಲೀಲ್‌ ಹೊಸದೊಂದು ವಿವಾದ ಹುಟ್ಟುಹಾಕಿದ್ದಾರೆ. ಪಾಕ್‌ ಆಕ್ರಮಿತ ಕಾಶ್ಮೀರ (Pak Occupied Kashmir) ಹೆಸರೇ ಹೇಳುವಂತೆ ಪಾಕಿಸ್ತಾನ ಆಕ್ರಮಿತ ಪ್ರದೇಶವಾಗಿದ್ದು, ಆದರೆ ಇದನ್ನು ಆಜಾದ್‌ ಕಾಶ್ಮೀರ (Azad Kashmir) ಎಂದು ಕೇರಳದ ಶಾಸಕ ಹೇಳಿದ್ದಾರೆ. ಅವರ ಈ ಹೇಳಿಕೆಗೆ ವಿರೋಧ ವ್ಯಕ್ತವಾಗಿದ್ದು, ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವರು ಇವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಪಿಒಕೆಯನ್ನು ಆಜಾದ್‌ ಕಾಶ್ಮೀರ ಎಂದು ಸಿಪಿಐ (ಎಂ) [Communist Party of India (Marxist)] ಶಾಸಕ ಕೆ.ಟಿ. ಜಲೀಲ್‌ ಕರೆದಿದ್ದು, ಅಲ್ಲದೆ, ಜಮ್ಮು ಹಾಗೂ ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಹೆಚ್ಚು ಭದ್ರತಾ ಪಡೆಯನ್ನು ನಿಯೋಜಿಸಿರುವುದಕ್ಕೆ ಕಣಿವೆಯ ಜನರು ನಗುವುದನ್ನು ಸಹ ಮರೆತಿದ್ದಾರೆ ಎಂದೂ ಕೇರಳ ಶಾಸಕ ಹೇಳಿಕೊಂಡಿದ್ದಾರೆ. 

Tap to resize

Latest Videos

ಉರಿ ಮಾದರಿಯಲ್ಲಿ ಸೇನಾ ಶಿಬಿರದ ಮೇಲೆ ಭಯೋತ್ಪಾದಕರ ದಾಳಿ 3 ಸೈನಿಕರು ಹುತಾತ್ಮ, ಇಬ್ಬರು ಉಗ್ರರ ಹತ್ಯೆ!

ಇತ್ತೀಚೆಗೆ ಕಾಶ್ಮೀರಕ್ಕೆ ಭೇಟಿ ನೀಡಿದ ಜಲೀಲ್,  ಪಾಕಿಸ್ತಾನವು 'ಆಜಾದ್ ಕಾಶ್ಮೀರ' ಎಂದು ಉಲ್ಲೇಖಿಸುವ ಕಾಶ್ಮೀರದ (ಪಿಒಕೆ) ಆಕ್ರಮಿತ ಭಾಗದ ಮೇಲೆ ಪ್ರಮುಖ ಆಡಳಿತಾತ್ಮಕ ನಿಯಂತ್ರಣವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. "ಪಾಕಿಸ್ತಾನದ ಜೊತೆ ಇರುವ ಕಾಶ್ಮೀರದ ಭಾಗವನ್ನು 'ಆಜಾದ್ ಕಾಶ್ಮೀರ' ಎಂದು ಕರೆಯಲಾಗುತ್ತಿತ್ತು. ಈ ಪ್ರದೇಶದಲ್ಲಿ ಪಾಕಿಸ್ತಾನದ ಸರ್ಕಾರವು ನೇರ ಪ್ರಭಾವವನ್ನು ಹೊಂದಿರಲಿಲ್ಲ. ಕರೆನ್ಸಿ ಮತ್ತು ಮಿಲಿಟರಿ ಸಹಾಯ ಮಾತ್ರ ಪಾಕಿಸ್ತಾನದ ನಿಯಂತ್ರಣದಲ್ಲಿದೆ,” ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅಲ್ಲದೆ,  “ಆಜಾದ್ ಕಾಶ್ಮೀರಕ್ಕೆ ಅವರದೇ ಆದ ಮಿಲಿಟರಿ ಇತ್ತು. ಪಾಕಿಸ್ತಾನದ ಅಧ್ಯಕ್ಷ ಜಿಯಾ-ಉಲ್-ಹಕ್ ಕಾಲದಲ್ಲಿ, ಮಿಲಿಟರಿ ಸಾಮಾನ್ಯವಾಯಿತು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸರ್ಕಾರಕ್ಕೆ ಯಾವುದೇ ಪ್ರಮುಖ ಆಡಳಿತಾತ್ಮಕ ಅಧಿಕಾರವಿಲ್ಲ. ಇನ್ನೊಂದೆಡೆ, ಭದ್ರತಾ ಪಡೆಗಳ ಭಾರಿ ನಿಯೋಜನೆಯು ಕಾಶ್ಮೀರದ ಸಾರವನ್ನು ಬದಲಿಸಿದ್ದು, ಕಣಿವೆಯಲ್ಲಿ ಜನರು ಸಹಜ ಸ್ಥಿತಿಗಾಗಿ ಹಾತೊರೆಯುತ್ತಿದ್ದಾರೆ ಎಂದು ಕೇರಳದ ಶಾಸಕರು ಹೇಳಿದ್ದಾರೆ. 

ಅಲ್ಲದೆ,  ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಭಜಿಸುವ ಕೇಂದ್ರ ಸರ್ಕಾರದ ವಿರುದ್ಧ ಕಾಶ್ಮೀರಿಗಳಲ್ಲಿ ತಾನು ಕೋಪವನ್ನು ಕಂಡುಕೊಂಡಿರುವುದಾಗಿಯೂ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಜಲೀಲ್ ಅವರು ಹೇಳಿದ್ದಾರೆ. ‘’ನೀವು ಎಲ್ಲಿ ನೋಡಿದರೂ ರೈಫಲ್‌ಗಳೊಂದಿಗೆ ಸೈನ್ಯವನ್ನು ಮಾತ್ರ ನೋಡುತ್ತೀರಿ. ಕಾಶ್ಮೀರಿಗಳು ನಗುವುದನ್ನು ಮರೆತಂತೆ ತೋರುತ್ತಿದೆ. ದಶಕಗಳಿಂದ ಕಾಶ್ಮೀರದ ಬಣ್ಣ ಸೇನೆಯ ಹಸಿರು. ಎಲ್ಲ ರಾಜಕಾರಣಿಗಳೂ ಗೃಹಬಂಧನದಲ್ಲಿದ್ದಾರೆ. ತಿಂಗಳುಗಟ್ಟಲೆಯಿಂದ ರಾಜಕೀಯ ಚಟುವಟಿಕೆಯೇ ಇಲ್ಲ. ಮೋದಿ ಸರ್ಕಾರವು ಕಾಶ್ಮೀರವನ್ನು ಮೂರು ಭಾಗಗಳಾಗಿ ವಿಂಗಡಿಸಿದೆ ಮತ್ತು ಈ ಹಿನ್ನೆಲೆ ಜನರ ಮುಖದಲ್ಲಿ ಕೋಪವನ್ನು ನೋಡಬಹುದು. 370ನೇ ವಿಧಿಯ ರದ್ದತಿಯು ಅದರ ಉದ್ದೇಶಗಳನ್ನು ಪೂರೈಸಲು ಸಾಧ್ಯವೇ..? ಕಾಶ್ಮೀರದ ಜನರು ಸಹಜ ಸ್ಥಿತಿಗೆ ಮರಳುವ ಭರವಸೆಯಲ್ಲಿದ್ದಾರೆ’’ ಎಂದು ಸಿಪಿಐ (ಎಂ) ಶಾಸಕ ಕೆ.ಟಿ. ಜಲೀಲ್‌ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ.

ಕಾಶ್ಮೀರಿ ಪಂಡಿತ್‌ ರಾಹುಲ್‌ ಭಟ್‌ ಹತ್ಯೆ ಮಾಡಿದ್ದ ಲಷ್ಕರ್‌ ಭಯೋತ್ಪಾದಕನ ಕೊಂದು ಹಾಕಿದ ಸೇನೆ!

ಕೇಂದ್ರ ಸಚಿವ ವಿ. ಮುರಳೀಧರನ್‌ರಿಂದ ಜಲೀಲ್‌ ರಾಜೀನಾಮೆಗೆ ಆಗ್ರಹ
ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) "ಆಜಾದ್ ಕಾಶ್ಮೀರ" ಎಂದು ಉಲ್ಲೇಖಿಸಿದ ಶಾಸಕ ಕೆ.ಟಿ ಜಲೀಲ್ ರಾಜೀನಾಮೆ ನೀಡಬೇಕೆಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಒತ್ತಾಯಿಸಿದ್ದಾರೆ. ಅಲ್ಲದೆ, ಅವರ ಹೇಳಿಕೆಗಳು  "ದೇಶದ್ರೋಹಕ್ಕಿಂತ ಕಡಿಮೆಯಿಲ್ಲ" ಎಂದು ಹೇಳಿದ್ದಾರೆ. 

“ಚುನಾಯಿತ ಶಾಸಕರು ಕಾಶ್ಮೀರದ ಭಾರತದ ಭಾಗವನ್ನು ‘’ಭಾರತ ಆಕ್ರಮಿತ ಕಾಶ್ಮೀರ’’ ಎಂದು ಕರೆಯುತ್ತಾರೆ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ‘’ಆಜಾದ್ ಕಾಶ್ಮೀರ’’ ಎಂದು ಕರೆಯುವುದು ದೇಶದ್ರೋಹಕ್ಕಿಂತ ಕಡಿಮೆಯಿಲ್ಲ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ರಾಜೀನಾಮೆ ನೀಡಬೇಕು ಎಂದು ಮುರಳೀಧರನ್ ಸುದ್ದಿಗಾರರಿಗೆ ತಿಳಿಸಿದರು.

click me!