ಲಸಿಕೆ ವಿತರಣೆಗೆ ಸಿದ್ಧತೆ ಶುರು: ಕೋವಿನ್‌ ವೆಬ್‌ಸೈಟ್‌ನಲ್ಲಿ ಲಸಿಕೆ ಪಡೆವವರ ಮಾಹಿತಿ!

By Suvarna NewsFirst Published Dec 9, 2020, 7:43 AM IST
Highlights

ಲಸಿಕೆ ವಿತರಣೆಗೆ ಸಿದ್ಧತೆ ಪ್ರಕ್ರಿಯೆ ಆರಂಭ| ಕೋವಿನ್‌ ವೆಬ್‌ಸೈಟ್‌ಗೆ ಲಸಿಕೆ ಪಡೆವವರ ಮಾಹಿತಿ ಅಪ್ಲೋಡ್‌: ಆರೋಗ್ಯ ಇಲಾಖೆ

ನವದೆಹಲಿ(ಡಿ.09): ದೇಶದಲ್ಲಿ ಕೊರೋನಾ ಲಸಿಕೆ ವಿತರಣೆ ಪ್ರಕ್ರಿಯೆ ಆರಂಭವಾಗುವ ದಿನಗಳು ಸನ್ನಿಹಿತವಾಗುತ್ತಿದ್ದಂತೆ ಯಾರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಬೇಕು ಎಂಬುದರ ಪಟ್ಟಿತಯಾರಿಸುವ ಕಾರ್ಯ ಭರದಿಂದ ಆರಂಭವಾಗಿದೆ. ಲಸಿಕೆ ವಿತರಣೆಗೆಂದೇ ಸರ್ಕಾರ ರೂಪಿಸಿರುವ ಕೋ-ವಿನ್‌ ಸಾಫ್ಟ್‌ವೇರ್‌ನಲ್ಲಿ ಆರಂಭಿಕ ಹಂತದಲ್ಲಿ ಲಸಿಕೆ ಪಡೆಯುವ ಮುಂಚೂಣಿ ಆರೋಗ್ಯ ಕಾರ್ಯಕರ್ತರ ಮಾಹಿತಿ ಅಪ್‌ಲೋಡ್‌ ಮಾಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

Covid-19 ವಿರುದ್ಧ ಲಸಿಕೆ ಹೋರಾಟ ಆರಂಭ; ಫೈಝರ್ ವ್ಯಾಕ್ಸಿನ್ ಪಡೆದ 2ನೇ ವ್ಯಕ್ತಿ ವಿಲಿಯಂ ಶೇಕ್ಸ್‌ಪಿಯರ್!

ಇನ್ನು, ದೇಶದಲ್ಲಿ ಸಾರ್ವತ್ರಿಕ ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ 2.38 ಲಕ್ಷ ಎಎನ್‌ಎಂ (ಶುಶ್ರೂಷಕಿಯರು) ಕಾರ್ಯಕರ್ತರಿದ್ದು, ಕೋವಿಡ್‌ ಲಸಿಕೆ ನೀಡಲು ಅವರಲ್ಲಿ 1.54 ಲಕ್ಷ ಕಾರ್ಯಕರ್ತರನ್ನು ಮಾತ್ರ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ 3 ಕೋಟಿ ಡೋಸ್‌ ನೀಡಲು ನಿರ್ಧರಿಸಲಾಗಿರುವುದರಿಂದ ಅಷ್ಟುಲಸಿಕೆ ಶೇಖರಿಸಿಡಲು ಈಗಾಗಲೇ ಇರುವ ಶೀತಲೀಕೃತ ವ್ಯವಸ್ಥೆಯೇ ಸಾಕಾಗುತ್ತದೆ. ಸದ್ಯ 3 ಲಸಿಕೆಗಳನ್ನು ತುರ್ತು ವಿತರಣೆಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಅವೆಲ್ಲವೂ ಅಥವಾ ಅವುಗಳಲ್ಲಿ ಯಾವುದಾದರೂ ಒಂದು/ ಎರಡು ಲಸಿಕೆಗಳು ಆದಷ್ಟುಬೇಗ ವಿತರಣೆಗೆ ಲಭಿಸಬಹುದು ಎಂದು ಆರೋಗ್ಯ ಇಲಾಖೆ ಹೇಳಿದೆ.

ವಿಶ್ವದ ಮೊದಲ ಫೈಝರ್ ಕೊರೋನಾ ಲಸಿಕೆ ಪಡೆದ 90 ವರ್ಷದ ವೃದ್ಧೆ!

ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಭಾರತದಲ್ಲಿ ಸೆಪ್ಟೆಂಬರ್‌ ಮಧ್ಯದಿಂದ ಸೋಂಕು ನಿರಂತರವಾಗಿ ಇಳಿಕೆಯಾಗುತ್ತಿದೆ. ಸದ್ಯ ದೇಶದಲ್ಲಿರುವ ಸಕ್ರಿಯ ಸೋಂಕಿತರಲ್ಲಿ ಶೇ.54ರಷ್ಟುಜನರು ಮಹಾರಾಷ್ಟ್ರ, ಕೇರಳ, ಕರ್ನಾಟಕ, ಪಶ್ಚಿಮ ಬಂಗಾಳ ಹಾಗೂ ದೆಹಲಿ ಈ ಐದು ರಾಜ್ಯಗಳಲ್ಲಿದ್ದಾರೆ ಎಂದು ಇಲಾಖೆ ತಿಳಿಸಿದೆ.

click me!