ಕೇರಳದಲ್ಲಿ ಕೊರೋನಾ ಔಷಧ ಉಚಿತ: ಸಿಎಂ ಭರವಸೆ

By Suvarna NewsFirst Published Dec 13, 2020, 1:33 PM IST
Highlights

ಕೊರೋನಾ ಬಂದು 9 ತಿಂಗಳು ಕಳೆಯುತ್ತಾ ಬಂದಿದ್ದರೂ ಇನ್ನೂ ಹೆಚ್ಚಿಗೆ ರೇಷನ್ ನೀಡುತ್ತಿರುವ ನೆರೆ ರಾಜ್ಯ ಕೇರಳ ಮತ್ತೊಂದು ಮಾದರಿ ಹೆಜ್ಜೆ ಇಟ್ಟಿದೆ. ಜನರಿಗೆ ಕೊರೋನಾ ಲಸಿಕೆ ಉಚಿತವಾಗಿ ನೀಡಲು ಮುಂದಾಗಿದೆ ಪಿಣರಾಯ್ ವಿಜಯನ್ ಸರ್ಕಾರ

ಕೊರೋನಾ ವೈರಸ್‌ಗೆ ಲಸಿಕೆಗಳು ಲಭ್ಯವಾದಾಗ ಅದನ್ನು ಜನರಿಗೆ ಉಚಿತವಾಗಿ ನೀಡಲಾಗುತ್ತದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಘೋಷಿಸಿದ್ದಾರೆ. ಔಷಧ ಸಿಗಲು ಆರಂಭಿಸಿದ ಕೂಡಲೇ ಕೇರಳದ ಜನರಿಗೆ ಉಚಿತವಾಗಿ ಲಸಿಕೆ ಒದಗಿಸಲಾಗುತ್ತದೆ ಎಂದಿದ್ದಾರೆ ಪಿಣರಾಯ್ ವಿಜಯನ್.

ಕೊರೋನಾ ವೈರಸ್ ವಾಕ್ಸಿನೇಷನ್ ಒಂದು ಮುಖ್ಯ ವಿಷಯ. ಇದು ಇಂದು ಬಹುತೇಕ ಜನರು ಯೋಚಿಸುತ್ತಿರುವ ಪ್ರಧಾನ ವಿಚಾರ. ಇದರಲ್ಲಿ ಸಂದೇಹವೇ ಇಲ್ಲ. ಕೇರಳದ ಜನರಿಗೆ ಕೊರೋನಾ ಔಷಧದ ಲಭ್ಯತೆ ಆಲೊಚಿಸಬೇಕಾದ ವಿಷಯ ಎಂದಿದ್ದಾರೆ.

ಟೆಸ್ಟ್‌ಗೆ ಒಳಗಾಗಲು ನಕಾರ, ಕೊರೋನಾದಿಂದ ರೈತರ ಹೋರಾಟ ದುರ್ಬಲ ಭೀತಿ!

ನಮಗೆ ಸಿಗುವ ಕೊರೋನಾ ಔಷಧವನ್ನು ಕೇರಳದ ಜನರಿಗೆ ಉಚಿತವಾಗಿ ನೀಡಲಾಗುತ್ತದೆ. ಇದಕ್ಕೆ ಯಾವ ಹಣವನ್ನೂ ತೆಗೆದುಕೊಳ್ಳಲಾಗುವುದಿಲ್ಲ. ಉಚಿತವಾಗಿ ಔಷಧ ನೀಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಲಿದ್ದೇವೆ ಎಂದಿದ್ದಾರೆ.

ತಮಿಳುನಾಡು, ಮಧ್ಯಪ್ರದೇಶ, ಅಸ್ಸಾಂ, ಪುದುಚೇರಿಯ ನಂತರ ಉಚಿತ ಕೊರೋನಾ ಔಷಧ ಘೋಷಿಸಿದ 4ನೇ ರಾಜ್ಯವಾಗಿದೆ ಕೇರಳ. ಡಿಸೆಂಬರ್ 12ರಂದು ಕೇರಳದಲ್ಲಿ 60029 ಕೊರೋನಾ ಕೇಸ್‌ಗಳಿದ್ದು, 437 ಕೊರೋನಾ ಆಸ್ಪತ್ರೆಗಳಿವೆ.

click me!