ನೂತನ ಕೃಷಿ ಕಾಯ್ದೆ ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಕಾಯ್ದೆ ಪರ ಕೂಗು| ಕೃಷಿ ಕಾಯ್ದೆ ರದ್ದು ಮಾಡಿದರೆ ಪ್ರತಿಭಟನೆ: ಹರ್ಯಾಣ ರೈತರು!
ನವದೆಹಲಿ(ಡಿ.13): ನೂತನ ಕೃಷಿ ಕಾಯ್ದೆ ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಕಾಯ್ದೆ ಪರ ಇರುವ ಹರಾರಯಣ ರೈತರ ನಿಯೋಗವೊಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಶನಿವಾರ ಭೇಟಿ ಮಾಡಿ ಕಾಯ್ದೆಗೆ ಬೆಂಬಲ ಸೂಚಿಸಿದೆ.
ಇದೇ ವೇಳೆ ಕಾಯ್ದೆಯನ್ನು ರದ್ದು ಮಾಡಿದರೆ ತಾವೂ ಪ್ರತಿಭಟನೆ ನಡೆಸುವುದಾಗಿ ಬೆದರಿಸಿದೆ. ಹರಾರಯಣ ಭಾರತೀಯ ಕಿಸಾನ್ ಘಟಕದ ನಾಯಕ ಗುಣಿ ಪ್ರಕಾಶ್, ಕಾಯ್ದೆ ಬೆಂಬಲಿಸುವ ಪತ್ರವನ್ನು ತೋಮರ್ ಅವರಿಗೆ ನೀಡಿ ಕಾಯ್ದೆಯನ್ನು ಮುಂದುವರಿಸುವಂತೆ ಮನವಿ ಮಾಡಿದರು.
ಇತ್ತ ಸರ್ಕಾರರೊಂದಿಗೆ ಮಾತುಕತೆಗೆ ನಿರಾಕರಿಸುತ್ತಿದ್ದ ಕೃಷಿ ಕಾಯ್ದೆ ವಿರೋಧಿ ಪ್ರತಿಭಟನಾ ನಿರತ ರೈತರು ಕೊನೆಗೂ, ‘ನಾವು ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧ. ಆದರೆ 3 ನೂತನ ಕೃಷಿ ಕಾಯ್ದೆ ರದ್ಧತಿ ಕುರಿತೇ ನಮ್ಮ ಮೊದಲು ಮಾತು’ ಎಂದು ತಿಳಿಸಿದ್ದಾರೆ.
ಅಲ್ಲದೆ ಡಿ.14ರಂದು ದೇಶಾದ್ಯಂತ ರೈತ ಸಂಘಟನೆಯ ನಾಯಕರು ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಶಪಥ ಮಾಡಿದ್ದಾರೆ.