ಕೊರೋನಾ ವಾರಿಯರ್ಸ್ ಸಾಹಸ, ಕೊರೋನಾ ಶಂಕಿತ ವ್ಯಕ್ತಿಗೆ ಮಿಡ್ ನೈಟ್ ಆಪರೇಶನ್

By Suvarna News  |  First Published Apr 24, 2020, 8:42 PM IST

ಕೊರೋನಾ ವಿರುದ್ಧದ ಹೋರಾಟ/ ಕೊರೊನಾ ವಾರಿಯರ್ಸ್ ನಿಂದ ಮತ್ತೊಂದು ಜನಮೆಚ್ಚುವ ಕೆಲಸ/ ಕೊರೋನಾ ಸೋಕು ಶಂಕಿತ ವ್ಯಕ್ತಿಗೆ ಆಪರೇಶನ್


ನವದೆಹಲಿ(ಏ. 24)  ಗುರುವಾರ ರಾತ್ರಿ ನವದೆಹಲಿಯ ಏಮ್ಸ್ ವೈದ್ಯರು ಕೊರೋನಾಕ್ಕೂ ಮೀರಿ ಒಂದು ಸಾಹಸ ಮಾಡಿದ್ದಾರೆ. ವೈದ್ಯರ ಕಾರ್ಯಕ್ಕೆ ಪ್ರಶಂಸೆಗಳು ಹರಿದು ಬಂದಿವೆ.

ಬಿಹಾರದ ರೈತರೊಬ್ಬರಿಗೆ ಕೊರೋನಾ ಸೋಂಕು ಶಂಕೆ ಇತ್ತು. ಆದರೆ ಅವರಿಗೆ ತುರ್ತಾಗಿ ಒಂದು ಸರ್ಜರಿಯನ್ನು ಮಾಡಬೇಕಾಗಿತ್ತು. ವೈದ್ಯರು ಸರ್ಜರಿ ಮಾಡಿ ಮುಗಿಸಿದ್ದಾರೆ.

Tap to resize

Latest Videos

 ತೀವ್ರ ನೋವಿನಿಂದ ಬಳಲುತ್ತಿದ್ದ ಬಿಹಾರದ ರೈತರೊಬ್ಬರನ್ನು ಅವರ ಸಹೋದರ ರಾತ್ರಿ 10.30ರ ಸುಮಾರಿಗೆ ಆಸ್ಪತ್ರೆಗೆ ಕರೆದುಕೊಂಡು ಬರುತ್ತಾರೆ. ವ್ಯಕ್ತಿಯನ್ನು ಪರೀಕ್ಷಿಸುವ ವೈದ್ಯರಿಗೆ ಸರ್ಜರಿಯ ಅಗತ್ಯ ಕಂಡುಬರುತ್ತದೆ. ಶುಕ್ರವಾರ ಬೆಳಗಿನ ಜಾವ 6 ಗಂಟೆಗೆ ಆಪರೇಶನ್ ಮಾಡಿಸಲಾಗುತ್ತದೆ.

ಕೊರೋನಾ ವಾರಿಯರ್ಸ್ ಮೇಲೆ ದಾಳಿ ಮಾಡಿದರೆ ಏಳೂ ವರ್ಷ ಶಿಕ್ಷೆ

ಅಪೆಂಡಿಕ್ಸ್ ತೆರನಾದ ಸಮಸ್ಯೆಯಿಂದ  ಈತ ಬಳಲುತ್ತಿದ್ದ. ಈತನ ಕೊರೋನಾ ವೈರಸ್ ಸೋಂಕಿನ ಪರೀಕ್ಷೆಯ ಫಲಿತಾಂಶ ಬರುವುದು ಬಾಕಿ ಇತ್ತು. ಈ ಎಲ್ಲ ಸವಾಲುಗಳ ಮಧ್ಯೆ ಆಪರೇಶನ್ ಮಾಡಿ ಮುಗಿಸಲಾಗಿದೆ. 

ರೋಗಿಯನ್ನು  ರಕ್ಷಣೆ ಮಾಡಿಕೊಳ್ಳಬೇಕು ಎಂದರೆ ಆಪರೇಶನ್ ಮಾಡಿಸಲೇಬೇಕಾಗಿತ್ತು. ಎನ್ 95 ಮಾಸ್ಕ್ ಧರಿಸಿಕೊಂಡಾಗ ಉಸಿರಾಟ ಸಹ ಕಷ್ಟವಾಗುತ್ತದೆ. ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತ ವೈದ್ಯರಿಗೊಂದು ಧನ್ಯವಾದ ಎಂದು ಏಮ್ಸ್ ನನ ಹಿರಿಯ ಡಾಕ್ಟರ್ ಹೇಳಿದ್ದಾರೆ. 

 

click me!