'ಲಾಕ್ ಡೌನ್‌ ಇರುವ ಕಾರಣ ಅಜಾನ್ ಬ್ಯಾನ್' ವೈರಲ್ ವಿಡಿಯೋ ಅಸಲಿಯತ್ತು

By Suvarna NewsFirst Published Apr 24, 2020, 7:55 PM IST
Highlights

ಲಾಕ್ ಡೌನ್ ಇರುವ ಕಾರಣಕ್ಕೆ ಅಜಾನ್ ನಿಷೇಧ/ ನವದೆಹಲಿ ಪೊಲೀಸರಿಂದ ಇಂಥದ್ದೊಂದು ಆದೇಶ/ ಪೊಲೀಶರ ಮಾತಿಗೆ ಸ್ಥಳೀಯರ ವಿರೋಧ/ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದ ಅಸಲಿಯತ್ತು ಏನು?

ನವದೆಹಲಿ(ಏ. 24) 'ಕೊರೋನಾ ಲಾಕ್ ಡೌನ್ ಜಾರಿಯಲ್ಲಿದ್ದು ಅಜಾನ್ ಬ್ಯಾನ್ ಮಾಡಲಾಗಿದೆ'  ಇದೇ ವಿಚಾರಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪೊಲೀಸರೊಂದಿಗೆ ನಡೆದ ಮಾತುಕತೆಯ ವಿಡಿಯೋ. 

ಏಪ್ರಿಲ್ 25 ರಂದು ಪವಿತ್ರ ರಂಜಾನ್ ತಿಂಗಳು ಆರಂಭವಾಗಲಿದೆ.  ಪೇದೆಯೊಬ್ಬರು  ಅಜಾನ್ ಬ್ಯಾನ್ ಮಾಡಲಾಗಿದ  ಎಂದು ಹೇಳಿದ್ದು ದೊಡ್ಡ ಸಮಾಚಾರವಾಗಿದೆ. ಅಜಾನ್ ನಿಷೇಧ ಮಾಡಲು ಹಿರಿಯ ಪೊಲೀಸರು ತಿಳಿಸಿದ್ದಾರೆ ಎಂದಾಗ ದೆಹಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಎಲ್ಲಿದೆ ಆದೇಶದ ಕಾಪಿ ಎಂದು ಕೇಳಿದ್ದಾರೆ. ಅಜಾನ್ ಮಾಡುವುದರಿಂದ ಕೊರೋನಾ ಹರಡುತ್ತದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಡೆಲೆವರಿ ಬಾಯ್ ಮುಸ್ಲಿಂ ಎಂಬ ಕಾರಣಕ್ಕೆ ಆಹಾರ ತಿರಸ್ಕರಿಸಿದ

ಈ ಬಗ್ಗೆ ಸ್ಪಷ್ಟನೆ ನೀಡಿರುವ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ, ಜನರಿಗೆ ಲಾಕ್ ಡೌನ್ ಆದೇಶ ಪಾಲನೆ ಮಾಡಲು ತಿಳಿಸಲಾಗಿದೆ. ಯಾರು ಮನೆಯಿಂದ ಹೊರಬರಬಾರದು. ಆದರೆ ಅಜಾನ್ ಮೇಲೆ ನಿಷೇಧ ಹೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ಈ ಘಟನೆ ಬಗ್ಗೆ ತನಿಖೆ ನಡೆಸಲು ದೆಹಲಿ ಪೊಲೀಸರು ನಿರ್ಧಾರ ಮಾಡಿದ್ದಾರೆ. 

 

Some constables from Delhi Prem Nagar police station came to the area. Do not give Azan to the Imam of the mosque. People said, "Let me see the order," said the constable. This is the ruling of LG Sahab. Now there was no hope from the government. pic.twitter.com/0GU1TYpP6W

— Abdul Mujeeb (@abdulmujeebmse1)

Important Information. pic.twitter.com/wCXgaWIqoX

— #DilKiPolice Delhi Police (@DelhiPolice)

अजान के लिए कोई पाबंदी नहीं है. लॉकडाउन में मस्जिदों में नमाज़ के लिए इकट्ठा होने या किसी अन्य धार्मिक स्थल पर पूजा आदि के लिए लोगों के इकट्ठा होने पर पूरी तरह पाबंदी है. https://t.co/OxYGiqaIrR

— Manish Sisodia (@msisodia)
click me!