ಹೆಚ್ಚಿದ ಕೊರೋನಾ ಆತಂಕ; ಏ.26 ರಿಂದ 5 ನಗರ ಸಂಪೂರ್ಣ ಲಾಕ್‌ಡೌನ್!

Suvarna News   | Asianet News
Published : Apr 24, 2020, 06:24 PM ISTUpdated : Apr 24, 2020, 06:46 PM IST
ಹೆಚ್ಚಿದ ಕೊರೋನಾ ಆತಂಕ; ಏ.26 ರಿಂದ 5 ನಗರ ಸಂಪೂರ್ಣ ಲಾಕ್‌ಡೌನ್!

ಸಾರಾಂಶ

ನಗರಗಳಿಂದಲೇ ಕೊರೋನಾ ವೈರಸ್ ಹೆಚ್ಚಾಗಿ ಜಿಲ್ಲೆ ಜಿಲ್ಲೆಗೆ ಹರಡುತ್ತಿದೆ. ಇದೀಗ ಸೋಂಕು ಹರಡುವಿಕೆ ತಡೆಯಲು ಏಪ್ರಿಲ್ 26ರ ಮುಂಜಾನೆ 6 ಗಂಟೆಯಿಂದ 5 ಪ್ರಮುಖ ನಗರಗಳನ್ನು ಸಂಪೂರ್ಣ ಲಾಕ್‌ಡೌನ್ ಮಾಡಲು ಮುಖ್ಯಮಂತ್ರಿ ಆದೇಶ ನೀಡಿದ್ದಾರೆ. 4 ದಿನ 5 ನಗರಗಳಲ್ಲಿ ತುರ್ತು ಸೇವೆ ಹೊರತು ಪಡಿಸಿ ಇನ್ಯಾವ ಸೇವೆಯೂ ಇರುವುದಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ. 

ಚೆನ್ನೈ(ಏ.24): ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನಲೆಯಲ್ಲಿ ಆಯಾ ರಾಜ್ಯಗಳು ಕಟ್ಟು ನಿಟ್ಟಿನ ಆದೇಶ ಜಾರಿ ಮಾಡುತ್ತಿದೆ. ಇದೀಗ ತಮಿಳುನಾಡಿನಲ್ಲಿ ಕೊರೋನಾ ಹರಡುವಿಕೆ ತಡೆಯಲು ಪ್ರಮುಖ 5 ನಗರಗಳನ್ನು 4 ದಿನ ಸಂಪೂರ್ಣ ಲಾಕ್‌ಡೌನ್ ಮಾಡಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಕುರಿತು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅಧೀಕೃತ ಪ್ರಕಟಣೆ ಹೊರಡಿಸಿದ್ದಾರೆ.

ಕೊರೋನಾ ‌ಎಫೆಕ್ಟ್: ಬೀದಿ‌ನಾಯಿಗೆ ಪಟ್ಟೆ ಹುಲಿ ಗೆಟಪ್..! ಇಲ್ನೋಡಿ ಫೋಟೋಸ್

ತಮಿಳುನಾಡಿನಲ್ಲಿ ಕೊರೋನಾ ಹಾಟ್‌ಸ್ಫಾಟ್‌ಗಳಾಗಿ ಗುರುತಿಸಿಕೊಂಡಿರುವ ಚೆನ್ನೈ, ಮಧುರೈ, ಕೊಯಂಬತ್ತೂರು, ಸೇಲಂ ಹಾಗೂ ತಿರುಪ್ಪುರ್ ನಗರಗಳನ್ನು 5 ದಿನ ಸಂಪೂರ್ಣ ಲಾಕ್‌ಡೌನ್ ಮಾಡಲುು ಆದೇಶ ನೀಡಿದ್ದಾರೆ. ಏಪ್ರಿಲ್ 26ರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯ ವರಗೆ ಈ 5 ನಗರಗಳು ಸಂಪೂರ್ಣ ಲಾಕ್‌ಡೌನ್ ಆಗಲಿದೆ. 9 ಗಂಟೆ ಬಳಿಕ  ಮನೆಯಿಂದ ಹೊರಬಂದರೆ ಜೋಕೆ ಕಾರಣ, ಮೇ.3ರ ವರೆಗೆ ಕೇಂದ್ರ ಸರ್ಕಾರದ ಲಾಕ್‌ಡೌನ್ ಮುಂದುವರಿಯಲಿದೆ.

ಸಂಪೂರ್ಣ‌ ಲಾಕ್‌ಡೌನ್ ವೇಳೆ ಯಾವ ಸೇವೆ ಲಭ್ಯವಿದೆ?
ಆಸ್ಪತ್ರೆ, ಮೆಡಿಕಲ್, ಸರ್ಕಾರದ ಅಧೀನದಲ್ಲಿರುವ ದಿನಸಿ ಹಾಗೂ ಅಗತ್ಯ ವಸ್ತುಗಳ ಅಂಗಡಿ, ಸರ್ಕಾರದ ಅಮ್ಮಾ ಕ್ಯಾಂಟೀನ್, ಎಟಿಂ, ಮೊಬೈಲ್ ವೆಜಿಟೇಬಲ್ ಹಾಗೂ ಹಣ್ಣುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ನಿರ್ಗತಿಕರಿಗೆ ಆಹಾರ, ವಿಶೇಷ ಚೇತನರಿಗೆ ಆಹಾರ ಒದಗಿಸುವ ಸಂಘ ಸಂಸ್ಥೆಗಳ ಕಾರ್ಯಕ್ಕೆ ಅಡ್ಡಿಯಾಗಲ್ಲ.

ತಮಿಳುನಾಡಿನಲ್ಲಿ ಏಪ್ರಿಲ್ 24ರ ಬೆಳಗ್ಗೆ 8 ಗಂಟೆ ಹೊತ್ತಿಗೆ 54 ಹೊಸ ಕೊರೋನ ವೈರಸ್ ಪ್ರಕರಣಗಳು ದಾಖಲಾಗಿದೆ. ಹೀಗಾಗಿ ತಮಿಳುನಾಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,683ಕ್ಕೇರಿಕೆಯಾಗಿದೆ. ಇದರಲ್ಲಿ 752 ಮಂದಿ ಗುಣಮುಖರಾಗಿದ್ದರೆ 20 ಮಂದಿ ಸಾವನ್ನಪ್ಪಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ