ಕೊರೋನಾತಂಕ ಏ.  30ರವರೆಗೆ ನೈಟ್  ಕರ್ಫ್ಯೂ; ಸಂಪುಟ ತೀರ್ಮಾನ

Published : Apr 07, 2021, 09:27 PM IST
ಕೊರೋನಾತಂಕ ಏ.  30ರವರೆಗೆ ನೈಟ್  ಕರ್ಫ್ಯೂ; ಸಂಪುಟ ತೀರ್ಮಾನ

ಸಾರಾಂಶ

ಕೊರೊನಾ ಸೋಂಕು  ಏರಿಕೆ/ ನೈಟ್ ಕಫ್ರ್ಯೂ ಘೋಷಿಸಿದ ಪಂಜಾಬ್ ಸರ್ಕಾರ/  ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯ ತನಕ ನೈಟ್ ಕಫ್ರ್ಯೂ ಜಾರಿ/  ರಾಜಕೀಯ ಸಭೆ , ಸಮಾರಂಭಗಳು ನಿಷೇಧ/

ಚಂಡೀಘಡ(ಏ.  07)  ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ ಕೆಲ ರಾಜ್ಯ ಸರ್ಕಾರಗಳು ಕೊರೋನಾ ವಾಕ್ಸಿನೇಷನ್ ಪ್ರಕ್ರಿಯೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ನಡುವೆ ಕೊರೋನಾ ನಿಯಂತ್ರಣಕ್ಕಾಗಿ ಪಂಜಾಬ್ ಸರ್ಕಾರ ನೈಟ್ ಕರ್ಫ್ಯೂ ವಿಧಿಸಿದೆ. ಏಪ್ರಿಲ್  30 ರ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. 

ಮುಂದಿನ ಆದೇಶ ನೀಡುವವರೆಗೂ ರಾಜ್ಯದಲ್ಲಿ ಯಾವುದೇ ರಾಜಕೀಯ ಸಮಾವೇಶ ನಡೆಸುವಂತೆ ಇಲ್ಲ ಎಂದು ಸಿಎಂ ಅಮರೀಂದರ್ ಸಿಂಗ್ ನೇತೃತ್ವದ ಸಂಪುಟ ತೀರ್ಮಾನ ತೆಗೆದುಕೊಂಡಿದೆ. ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ ಕಠಿಣ ಕ್ರಮ ಅನಿವಾರ್ಯ ಎಂದು ಈ ಹಿಂದೆ ಎಚ್ಚರಿಕೆ ನೀಡಿದ್ದರು. 

ಕೊರೋನಾ ಆರ್ಭಟ; ಅಸಲಿ ಕಾರಣ ಹೇಳಿದ ಹರ್ಷವರ್ಧನ್! 

ರಾಜ್ಯಗಳು ಕೊರೋನಾ ವಾಕ್ಸೀನ್ ಸರಿಯಾಗಿ ನೀಡದೆ  ಲೋಪ ಮುಚ್ಚಿಹಾಕುವ ಯತ್ನ ಮಾಡುತ್ತಿವೆ.  ಆರೋಪಗಳಿಂದ ಯಾವುದು ಸಾಧ್ಯವಾಗುವುದಿಲ್ಲ. ಛತ್ತೀಸ್‌ ಘಡದಲ್ಲಿಯೂ ಸಾವಿನ ಸಂಖ್ಯೆ ಏರಿಕೆಯಲ್ಲಿ ಸಾಗಿದೆ ಎಂದು ಇಡೀ ದೇಶದ ವಿವರ ನೀಡಿದರು. ಎಲ್ಲ ರಾಜ್ಯಗಳು ನೀಡುರುವ  ಜವಾಬ್ದಾರಿ  ಮೊದಲು ಸರಿಯಾಗಿ ಪಾಲಿಸಿದರೆ ಮುಂದಿನ ಹಂತಗಳ ಬಗ್ಗೆ ಚರ್ಚೆ ಮಾಡಬಹುದು ಎಂದು  ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್  ಹೇಳಿದ್ದರು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಜಪಾನ್‌ ಹಿಂದಿಕ್ಕಿದ ಭಾರತ ಈಗ 4ನೇ ದೊಡ್ಡ ಆರ್ಥಿಕತೆ ಹಿರಿಮೆ
ಜಿ-ರಾಮ್‌ಜಿಯಿಂದ ದುರ್ಬಲರ ಹಕ್ಕಿಗೆ ಕುತ್ತು: ಪ್ರಧಾನಿಗೆ ಸಿದ್ದರಾಮಯ್ಯ ಪತ್ರ