*ಒಮಿಕ್ರೋನ್ ಭೀತಿ ಬೆನ್ನಲ್ಲೇ ಬೂಸ್ಟರ್ ಡೋಸ್ ಶಿಫಾರಸು
*2ನೇ ಅಲೆಯಲ್ಲಿ ಕೋವಿಶೀಲ್ಡ್ 63% ಪರಿಣಾಮಕಾರಿ
*ಆಫ್ರಿಕಾ ದೇಶಗಳಿಗೆ ಭಾರತದಿಂದ ಕೋವಿಡ್ ಲಸಿಕೆ
ನವದೆಹಲಿ (ಡಿ. 01): ಜಗತ್ತಿನಾದ್ಯಂತ ಒಮಿಕ್ರೋನ್ ಕೋವಿಡ್ ರೂಪಾಂತರಿ (Covid 19 Variant Omicron) ತಳಿ ಬಗ್ಗೆ ಆತಂಕ ಹೆಚ್ಚಾಗಿರುವ ಬೆನ್ನಲ್ಲೇ, ಭಾರತದಲ್ಲಿ 3ನೇ ಡೋಸ್ ಲಸಿಕೆ (Corona Virus 3rd Dose in India) ವಿತರಿಸುವ ಸಂಬಂಧ ಮುಂದಿನ ಎರಡರಿಂದ ಮೂರು ವಾರಗಳ ಒಳಗಾಗಿ ನೀತಿ ರೂಪಿಸುವ ಸಾಧ್ಯತೆ ಇದೆ. ತಜ್ಞರು (Experts) ಈ ಕುರಿತಂತೆ ಸತತ ಕೆಲಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಲಸಿಕೆ ಪಡೆದೂ ರೋಗ ನಿರೋಧಕ (Immunity) ಶಕ್ತಿ ವೃದ್ಧಿಸದ ಜನರಿಗೆ ಹೆಚ್ಚುವರಿ ಡೋಸ್ ಅಗತ್ಯವಿದೆಯೇ? ಅಥವಾ ಆರೋಗ್ಯವಂತರಿಗೆ ಬೂಸ್ಟರ್ ಡೋಸ್ ಬೇಕೇ, ಮೂರನೇ ಡೋಸ್ ಅನ್ನು ಯಾವಾಗ ನೀಡಬೇಕು? ಮೂರನೇ ಡೋಸ್ ನೀಡುವವರು ಯಾರು? ಎರಡು ಮತ್ತು ಮೂರನೇ ಡೋಸ್ ನಡುವಿನ ಅಂತರ ಏನು ಎಂಬ ಬಗ್ಗೆ ವಿಸ್ತೃತ ನೀತಿ ರೂಪಿಸುವ ಸಾಧ್ಯತೆ ಇದೆ.
ಎರಡೂ ಡೋಸ್ ಲಸಿಕೆ ಪಡೆದೂ ರೋಗ ನಿರೋಧಶಕ್ತಿ ಹೆಚ್ಚದವರಿಗೆ ನೀಡಲಾಗುವ ಲಸಿಕೆಯೇ ಹೆಚ್ಚುವರಿ ಡೋಸ್. ಆರೋಗ್ಯವಂತ ಜನರಿಗೆ (Healthy People) ಎರಡೂ ಡೋಸ್ ಲಸಿಕೆ ಪಡೆದ ನಂತರ ಕೆಲವು ತಿಂಗಳ ಬಳಿಕ ಮತ್ತೆ ಲಸಿಕೆ ನೀಡುವುದನ್ನು ಬೂಸ್ಟರ್ ಡೋಸ್ ಎನ್ನಲಾಗುತ್ತದೆ. ಈ ನಡುವೆ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚುವರಿ ಡೋಸ್ ನೀಡಿಕೆಗೇ ಹೆಚ್ಚು ಆದ್ಯತೆ ನೀಡಬೇಕು ಎನ್ನಲಾಗುತ್ತಿದೆ.
undefined
2ನೇ ಅಲೆಯಲ್ಲಿ ಕೋವಿಶೀಲ್ಡ್ 63% ಪರಿಣಾಮಕಾರಿ!
ಭಾರತದಲ್ಲಿ ಕೋವಿಡ್ 2ನೇ ಅಲೆಯ ವೇಳೆಯಲ್ಲಿ ಕೋವಿಶೀಲ್ಡ್‌ನ (Covishield)ಎರಡೂ ಡೋಸ್ ತೆಗೆದುಕೊಂಡವರಲ್ಲಿ ಈ ಲಸಿಕೆ ಶೇ.63ರಷ್ಟುಪರಿಣಾಮಕಾರಿಯಾಗಿತ್ತು ಎಂದು ಅಧ್ಯಯನವೊಂದು ಹೇಳಿದೆ. ‘ದಿ ಲ್ಯಾನ್ಸೆಟ್’ ಜರ್ನಲ್‌ನಲ್ಲಿ ಪ್ರಕಟವಾಗಿರುವ ವಿವಿಧ ಸಂಸ್ಥೆಗಳ ಸಂಶೋಧಕರ ತಂಡವೊಂದು ನಡೆಸಿರುವ ಅಧ್ಯಯನದಲ್ಲಿ ಲಸಿಕೆಯ ಪರಿಣಾಮಕಾರಿತ್ವದ ಕುರಿತು ಮಾಹಿತಿ ನೀಡಲಾಗಿದೆ.
Covid 19 Variant: ಭಾರತೀಯರ ಮೇಲೆ ಒಮಿಕ್ರೋನ್ ಅಪಾಯ ಕಡಿಮೆ : ವೈರಾಣು ತಜ್ಞ ಶಾಹಿದ್ ಜಮೀಲ್
2021ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಭಾರತದಲ್ಲಿ ಕೊರೋನಾದ ತೀವ್ರತೆ ಉತ್ತುಂಗದಲ್ಲಿದ್ದಾಗ ಎರಡೂ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದಿದ್ದವರಲ್ಲಿ ಸೋಂಕು ಉಲ್ಬಣಗೊಳ್ಳದಿರುವಂತೆ ಲಸಿಕೆಯು ಶೇ.63ರಷ್ಟುಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಸೋಂಕು ಮಧ್ಯಮ ತೀವ್ರತೆಯಿಂದ ಗರಿಷ್ಠ ತೀವ್ರತೆಗೆ ಹೋಗದಂತೆ ಲಸಿಕೆಯು ಶೇ.81ರಷ್ಟುತಡೆಯುವಲ್ಲಿ ಯಶಸ್ವಿಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 2379 ಸೋಂಕಿತರು ಹಾಗೂ 1981 ಆರೋಗ್ಯವಂತ ವ್ಯಕ್ತಿಗಳನ್ನು ಅಧ್ಯಯನಕ್ಕೊಳಪಡಿಸಿ ಲಸಿಕೆಯ ಪರಿಣಾಮಕಾರಿತನವನ್ನು ಅಳೆಯಲಾಗಿದೆ.
ಆಫ್ರಿಕಾ ದೇಶಗಳಿಗೆ ಭಾರತದಿಂದ ಕೋವಿಡ್ ಲಸಿಕೆ!
ಕೋವಿಡ್‌ನ ಹೊಸ ರೂಪಾಂತರಿ ಒಮಿಕ್ರೋನ್‌ನಿಂದ ಬಾಧಿತವಾಗಿರುವ ಆಫ್ರಿಕಾದ ದೇಶಗಳಿಗೆ (Africa) ಕೋವಿಡ್-19 ಲಸಿಕೆ ಮತ್ತು ಮತ್ತು ವೈದ್ಯಕೀಯ ಸಲಕರಣೆ (Medicle Equipment) ಪೂರೈಕೆ ಮಾಡುವುದಾಗಿ ಭಾರತ (India) ಮಂಗಳವಾರ ಹೇಳಿದೆ. ‘ಒಮಿಕ್ರೋನ್‌ನಿಂದ ತೊಂದರೆಗೆ ಒಳಗಾಗಿರುವ ಆಫ್ರಿಕಾದ ದೇಶಗಳಿಗೆ ದೇಶೀ ಉತ್ಪಾದಿತ ಕೋವಿಡ್ ಲಸಿಕೆಗಳನ್ನು (Covid Vaccine) ಪೂರೈಸಲು ಭಾರತ ಸಿದ್ಧವಿದೆ. ಜೊತೆಗೆ ಅಗತ್ಯವಿರುವ ಜೀವ ರಕ್ಷಕ ಔಷಧಗಳು, ಪರೀಕ್ಷಾ ಕಿಟ್‌ಗಳು, ಗ್ಲೋವ್ಸ್, ಪಿಪಿಇ ಕಿಟ್ ಹಾಗೂ ಅಗತ್ಯವಾದ ಇತರ ವೈದ್ಯಕೀಯ ಉಪಕರಣಗಳನ್ನು ಸಹ ಒದಗಿಸಲು ಭಾರತ ಸಿದ್ಧವಾಗಿದೆ.
Omicron Variant: ಕೊರೋನಾ ಹೊಸ ತಳಿ ತಡೆಗಟ್ಟಲು ತಜ್ಞರ ಸಮಿತಿ ಶಿಫಾರಸು: ಇಲ್ಲಿದೆ ಡಿಟೇಲ್ಸ್!
ಕೋವಿಡ್ ರೂಪಾಂತರಿಗೆ (Covid Variant) ಸಂಬಂಧಿಸಿದಂತೆ ಹೆಚ್ಚಿನ ಅಧ್ಯಯನ ನಡೆಸಲು ಭಾರತ ಸಹಕಾರ ನೀಡಲಿದೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಕೋವ್ಯಾಕ್ಸ್ ನೀತಿಯಡಿ 16 ದೇಶಗಳಿಗೆ ತಲಾ 10 ಲಕ್ಷ ಲಸಿಕೆ ಸೇರಿದಂತೆ ಭಾರತ ಈವರೆಗೆ 2.5 ಕೋಟಿ ಡೋಸ್ ಲಸಿಕೆಯನ್ನು ಆಫ್ರಿಕಾದ 41 ದೇಶಗಳಿಗೆ ಪೂರೈಕೆ ಮಾಡಿದೆ.