Third Front minus INC: ಕಾಂಗ್ರೆಸ್‌ ಕೈಬಿಟ್ಟು ತೃತೀಯ ರಂಗ ರಚಿಸುವತ್ತ ದೀದೀ: ಜೈ ಎಂದ ಠಾಕ್ರೆ, ಪವಾರ್ ಅಸಮಾಧಾನ!

By Suvarna News  |  First Published Dec 1, 2021, 10:08 AM IST

* ರಾಜಕೀಯದಲ್ಲಿ ಹೊಸ ಅಲೆ ಹುಟ್ಟಿಸಲು ದೀದೀ ಪ್ಲಾನ್

* ಕಾಂಗ್ರೆಸ್‌ ಕೈ ಬಿಟ್ಟು ತೃತೀಯ ರಂಗ ರಚಿಸ್ತಾರಾ ದೀದೀ?

* ಮಮತಾ ಎದುರು ತಲೆಬಾಗಿದ ಠಾಕ್ರೆ, ಪವಾರ್ ಇನ್ನೂ ಒಪ್ಪಿಗೆ ಇಲ್ಲ


ಮುಂಬೈ(ಡಿ.01): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal Chief Minister mamata Banerjee) ಎರಡು ದಿನಗಳ ಮುಂಬೈ ಪ್ರವಾಸಲ್ಲಿದ್ದಾರೆ. ಡಿಸೆಂಬರ್ 1 ಅವರ ಭೇಟಿಯ ಕೊನೆಯ ದಿನವಾಗಿದೆ. ಎಐಟಿಸಿ ಮಾಧ್ಯಮ ತಂಡದ ಬಿಡುಗಡೆಯ ಪ್ರಕಾರ, ಮಮತಾ ಬ್ಯಾನರ್ಜಿ ಅವರು ಇಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ (NCP Chief Sharad Pawar) ಅವರ ಮನೆಗೆ ಭೇಟಿ ನೀಡಲಿದ್ದಾರೆ ಮತ್ತು ಅವರನ್ನು ಭೇಟಿಯಾಗಲಿದ್ದಾರೆ. ಇದಕ್ಕೂ ಮುನ್ನ ಅವರು ನಾರಿಮನ್ ಪಾಯಿಂಟ್‌ನಲ್ಲಿರುವ ವೈಬಿ ಚವಾನ್ ಸೆಂಟರ್, ನಾರಿಮನ್ ಪಾಯಿಂಟ್‌ನಲ್ಲಿ ನಾಗರೀಕರು ಮತ್ತು ಸಮಾಜದ ಸದಸ್ಯರನ್ನು ಭೇಟಿಯಾಗಲಿದ್ದಾರೆ.

ಕಾಂಗ್ರೆಸ್ ಮುಕ್ತ ಅಜೆಂಡಾದಿಂದ ಶರದ್ ಪವಾರ್‌ಗಿಲ್ಲ ಸಮಾಧಾನ

Tap to resize

Latest Videos

ಮಮತಾ ಬ್ಯಾನರ್ಜಿ ಅವರ ಮುಂಬೈ ಭೇಟಿ ಬಗ್ಗೆ ಬಿಜೆಪಿಯಲ್ಲಿ (BJP) ವಿಶೇಷ ಪರಿಣಾಮ ಇಲ್ಲ, ಆದರೆ ಕಾಂಗ್ರೆಸ್‌ನಲ್ಲಿ (Congress) ಆತಂಕವಿದೆ. ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಒಂದೇ ಬ್ಯಾನರ್ ಅಡಿಯಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ, ಆದರೆ ಅವರು ಕಾಂಗ್ರೆಸ್ ಅನ್ನು ಅದರಿಂದ ದೂರವಿಡುತ್ತಿದ್ದಾರೆ. ಅಲ್ಲದೆ, ಕಾಂಗ್ರೆಸ್‌ನ ಗರಿಷ್ಠ ನಾಯಕರು ಟಿಎಂಸಿಗೆ ಬಂದಿದ್ದಾರೆ. ಮಮತಾ ಅವರ ಕಾಂಗ್ರೆಸ್-ಮುಕ್ತ ಅಜೆಂಡಾದಿಂದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ ಖುಷಿಯಾಗಿಲ್ಲ. ಹೀಗಿರುವಾಗ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ತೃತೀಯ ರಂಗ ರಚಿಸಬಹುದಾ ಎಂಬ ಆತಂಕ ಶುರುವಾಗಿದೆ. ಮಂಗಳವಾರ, ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್ ಮಲಿಕ್ (Minister Nawab malik) ಪ್ರತಿಕ್ರಿಯಿಸಿದ್ದು, ಪ್ರತಿಯೊಂದು ಪಕ್ಷಕ್ಕೂ ತನ್ನ ನೆಲೆಯನ್ನು ಹೆಚ್ಚಿಸುವ ಎಲ್ಲ ಹಕ್ಕುಗಳಿವೆ, ಆದರೆ ಕಾಂಗ್ರೆಸ್ ಅನ್ನು ಹೊರಗಿಟ್ಟು ಬಿಜೆಪಿಯ ವಿರೋಧಿಗಳನ್ನು ಒಗ್ಗೂಡಿಸುವುದು ಅಸಾಧ್ಯ ಎಂದು ಹೇಳಿದ್ದಾರೆ. ಈ ವಿಚಾರವನ್ನು ಪವಾರ್ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ ಎಂದೂ ಮಲಿಕ್ ಹೇಳಿದ್ದಾರೆ.

ಆದಿತ್ಯ ಠಾಕ್ರೆ ಭೇಟಿಯಾದ ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ ಅವರು ತಮ್ಮ ಮುಂಬೈ ಪ್ರವಾಸದ ಮೊದಲ ದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಬೇಕಿತ್ತು, ಆದರೆ ಠಾಕ್ರೆ ಅವರ ಅನಾರೋಗ್ಯದ ಕಾರಣ ಈ ಸಭೆ ನಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಮಮತಾ ಬ್ಯಾನರ್ಜಿ ಉದ್ಧವ್ ಠಾಕ್ರೆ ಅವರ ಮಕ್ಕಳಾದ ಆದಿತ್ಯ ಠಾಕ್ರೆ ಮತ್ತು ಸಂಜಯ್ ರಾವತ್ ಅವರನ್ನು ಭೇಟಿ ಮಾಡಿದ್ದಾರೆ. ಈ ಬ್ಬೆ ಮಾತನಾಡಿರುವ ಆದಿತ್ಯ ಠಾಕ್ರೆ 2-3 ವರ್ಷಗಳ ಹಿಂದೆಯೂ ಅವರು ಮುಂಬೈಗೆ ಬಂದಾಗ ಭೇಟಿಯಾಗಿದ್ದಾಗಿ ಹೇಳಿದ್ದರು. ಮಮತಾ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ.

ಬಿಜೆಪಿ ಸಂಸದ ಸುಬ್ರಮಣ್ಯಂ ಅವರನ್ನು ತಮ್ಮ ಪಕ್ಷದತ್ತ ಸೆಳೆದ ದೀದಿ

ಕೆಲವು ದಿನಗಳ ಹಿಂದೆ ಮಮತಾ ಬ್ಯಾನರ್ಜಿ ದೆಹಲಿಯಲ್ಲಿದ್ದರು. ಈ ವೇಳೆ ಅವರು ಬಿಜೆಪಿಯ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಅವರೊಂದಿಗೆ ಸಭೆ ನಡೆಸಿದ್ದಾರೆ. ಇದಾದ ನಂತರ ಸ್ವಾಮಿ ಹಲವು ವಿಷಯಗಳಲ್ಲಿ ಮೋದಿ ಸರ್ಕಾರವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದರು. ಸ್ವಾಮಿ ಅವರು ಮಮತಾ ಅವರನ್ನು ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ಚಂದ್ರಶೇಖರ್ ಮತ್ತು ರಾಜೀವ್ ಗಾಂಧಿಯಂತಹ ನಾಯಕರಿಗೆ ಹೋಲಿಸಿದ್ದಾರೆ.

ತಮ್ಮ ಸರ್ಕಾರದ ಲೋಪ ದೋಷ ಎತ್ತಿ ಹಿಡಿಯುವ ಸ್ವಾಮಿ

ಸುಬ್ರಮಣಿಯನ್ ಸ್ವಾಮಿ ವಿವಿಧ ವಿಷಯಗಳಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಕಿಡಿ ಕಾರುತ್ತಾರೆ. ದೇಶದ ಆರ್ಥಿಕ ಸ್ಥಿತಿಗೆ (Economic Condition) ಸಂಬಂಧಿಸಿದಂತೆ ಅವರು ಮೋದಿ ಸರ್ಕಾರದ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ. ಇದೇ ವೇಳೆ ದಿನವೂ ಅವರ ಹೇಳಿಕೆಗಳಿಂದ ಪಕ್ಷಕ್ಕೆ ಭಾರೀ ಮುಜುಗರ ಹಾಗೂ ಸಂಕಷ್ಟ ಎದುರಾಗಿದೆ.

click me!