Covid 19 Cases ಕೋವಿಡ್ ಪ್ರಕರಣ ಹೆಚ್ಚಳ, ಕರ್ನಾಟಕ ಸೇರಿ 5 ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ!

Published : Jun 03, 2022, 06:17 PM IST
Covid 19 Cases ಕೋವಿಡ್ ಪ್ರಕರಣ ಹೆಚ್ಚಳ, ಕರ್ನಾಟಕ ಸೇರಿ 5 ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ!

ಸಾರಾಂಶ

ಭಾರತದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಹೆಚ್ಚಳ ಕರ್ನಾಟಕ, ಮಹಾರಾಷ್ಟ್ರ ಸೇರಿ 5 ರಾಜ್ಯಗಳಿಗೆ ಕೇಂದ್ರದ ಪತ್ರ ಕೋವಿಡ್ ಪರೀಕ್ಷೆ ಹೆಚ್ಚಿಸಲು ಸೂಚನೆ

ನವದೆಹಲಿ(ಜೂ.03): ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ. ಗಣನೀಯವಾಗಿ ಕೊರೋನಾ ಏರಿಕೆ ಕಂಡ ಕರ್ನಾಟಕದ ಸೇರಿದಂತೆ 5 ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರಿ ಬರೆದಿದೆ. 

ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ ಹಾಗೂ ಕೇರಳ ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ. ಕೋವಿಡ್ ಹೆಚ್ಚಾಗುತ್ತಿರುವ ಕಾರಣ ತೀವ್ರ  ನಿಗಾವಹಿಸುವಂತೆ ಸೂಚಿಸಿದೆ. ಜಿನೋಮ್ ಸೀಕ್ವೆನ್ಸ್ ಪರೀಕ್ಷೆ. ಕೋವಿಡ್ ಪರೀಕ್ಷೆ ಹೆಚ್ಚಿಸುವಂತೆ ರಾಜ್ಯಗಳಿಗೆ ಸೂಚಿಸಿದೆ. ಇದೇ ಶೀತ, ಕೆಮ್ಮು, ಜ್ವರ ಕಾಣಿಸಿದರೂ ಸೂಕ್ತ ಚಿಕಿತ್ಸೆ ಜೊತೆಗೆ ಕೋವಿಡ್ ಪರೀಕ್ಷೆ ಮಾಡಿಸಲು ಸೂಚಿಸಿದೆ.

ಸೋನಿಯಾ ಗಾಂಧಿ ನಂತರ ಪ್ರಿಯಾಂಕ ಗಾಂಧಿಗೂ ಕೋವಿಡ್‌ ಪಾಸಿಟಿವ್‌

ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಕ್ವಾರಂಟೈನ್ ಮೂಲಕ ಪ್ರಕರಣ ಹರಡದಂತೆ ತಡೆಯಲು ಸೂಚಿಸಲಾಗಿದೆ. 

3 ತಿಂಗಳ ಬಳಿಕ ಪ್ರತಿ ದಿನ 4,000 ಕೋವಿಡ್ ಕೇಸ್
3 ತಿಂಗಳ ಬಳಿಕ ಭಾರತದಲ್ಲಿ ಪ್ರತಿ ದಿನದ ಕೋವಿಡ್ ಪ್ರಕರಣ 4,000 ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 4,041 ಕೋವಿಡ್ ಪ್ರಕರಣ ದಾಖಲಾಗಿದೆ. 10ಜನ ಕೋವಿಡ್‌ಗೆ ಬಲಿಯಾಗಿದ್ದಾರೆ. 

5 ದಿನದ ಬಳಿಕ ಮತ್ತೆ 200+ ಸೋಂಕು ಪತ್ತೆ

ಬೆಂಗಳೂರಿನಲ್ಲಿ ಕೇವಲ ಐದು ದಿನದ ಅಂತರದಲ್ಲಿ ಮತ್ತೆ ನಗರದಲ್ಲಿ 200ಕ್ಕೂ ಅಧಿಕ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿರುವುದು ಬೆಂಗಳೂರಿಗರಲ್ಲಿ ಆತಂಕ ಹೆಚ್ಚಿಸಿದೆ.ಗುರುವಾರ 276 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಪಾಸಿಟಿವಿಟಿ ದರ ಶೇ.1.54ಕ್ಕೆ ಹೆಚ್ಚಾಗಿದೆ. 173 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್‌ ಸಾವು ದಾಖಲಾಗಿಲ್ಲ. ಕಳೆದ ಮಾ.3ರಂದು ಬೆಂಗಳೂರಿನಲ್ಲಿ 239 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದವು. ಆದಾದ ಬಳಿಕ ಕಳೆದ ಮೇ 29ರಂದು 232 ಪ್ರಕರಣ ಪತ್ತೆಯಾಗಿದ್ದವು. ಕೇವಲ ಐದು ದಿನ ಅಂತರದಲ್ಲಿ 250ಕ್ಕೂ ಅಧಿಕ ಪ್ರಕರಣ ಪತ್ತೆಯಾಗಿದೆ.

ಆರೋಗ್ಯ ಸಚಿವ ಸುಧಾಕರ್ ಗೆ ಕೊರೋನಾ ಪಾಸಿಟಿವ್

ಸದ್ಯ ನಗರದಲ್ಲಿ ಒಟ್ಟು 2091 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ಇಬ್ಬರು ತೀವ್ರ ನಿಗಾ ಘಟಕ ಹಾಗೂ ಮೂವರು ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆ ಆರೈಕೆಯಲ್ಲಿದ್ದಾರೆ. ಮಹದೇವಪುರ ವಲಯದಲ್ಲಿ ಹೊಸದಾಗಿ ಒಂದು ಕಂಟೈನ್ಮೆಂಟ್‌ ವಲಯ ಸೃಷ್ಟಿಯಾಗಿದೆ. ಒಟ್ಟು ಕಂಟೈನ್ಮೆಂಟ್‌ ವಲಯಗಳ 4ಕ್ಕೆ ಏರಿಕೆಯಾಗಿದೆ.

37,782 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 12,578 ಮಂದಿ ಮೊದಲ ಡೋಸ್‌, 20,475 ಮಂದಿ ಎರಡನೇ ಡೋಸ್‌ ಮತ್ತು 4,729 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ.​​​ ಒಟ್ಟು 13,283 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ.

ಮಹಾರಾಷ್ಟ್ರ, ಕೇರಳದಲ್ಲಿ ಕೋವಿಡ್ ಹೆಚ್ಚಳ
ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, ಜೂನ್ 2 ರಂದುಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 3712 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿತ್ತು. ಇಂದು 4,000 ಗಡಿ ದಾಟಿದೆ. 

ನಿನ್ನೆ ಐವರು ಸಾವನ್ನಪ್ಪಿದ್ದರೆ, ಇಂದು 10 ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ ದಾಖಲಾದ 5 ಸಾವುಗಳು ಕೇರಳದಲ್ಲೇ ವರದಿಯಾಗಿವೆ. ಸಕ್ರಿಯ ಸೋಂಕಿತರ ಸಂಖ್ಯೆಯು 19,509ಕ್ಕೆ ಏರಿಕೆಯಾಗಿದೆ. ಮಂಗಳವಾರ ಶೇ.0.6 ಇದ್ದ ದೈನಂದಿನ ಪಾಸಿಟಿವಿಟಿ ದರವು 0.84 ಕ್ಕೆ ಏರಿಕೆಯಾಗಿದ್ದು, ವಾರದ ಪಾಸಿಟಿವಿಟಿ ದರವು ಶೇ. 0.67 ರಷ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು
India Latest News Live: ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿಗೆ ಶಂಕು ಸ್ಥಾಪನೆ