ನವದೆಹಲಿ(ಜೂ.03): ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ಸಂಕಷ್ಟ ಹೆಚ್ಚಾಗಿದೆ. ಐಟಿ ದಾಳಿ, ಸಿಬಿಐ ವಿಚಾರಣೆ, ಇಡಿ ಕೇಸ್ ಸೇರಿದಂತೆ ಸತತ ಹಿನ್ನಡೆ ಅನುಭವಿಸಿರುವ ಕಾರ್ತಿ ಚಿದಂಬರಂಗೆ ಇದೀಗ ಕೋರ್ಟ್ ಶಾಕ್ ನೀಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿಗೆ ಕಾರ್ತಿ ಚಿದಂಬರಂ ಸಲ್ಲಿಸಿದ ಅರ್ಜಿ ವಜಾಗೊಂಡಿದೆ.
ಸಿಬಿಐ ವಿಸೇಷ ನ್ಯಾಯಾಲಯ ಕಾರ್ತಿ ಚಿದಂಬರಂ ನಿರೀಕ್ಷಣಾ ಜಾಮೀನು ಅರ್ಜಿ ವಚಾಗೊಳಿಸಿದೆ.ಕಾರ್ತಿ ಜೊತೆಗೆ ಎಸ್ ಭಾಸ್ಕರ್ ರಾಮನ್, ಹಾಗೂ ವಿಕಾಸ್ ಮಖಾರಿಯಾ ಅರ್ಜಿಯೂ ವಜಾಗೊಂಡಿದೆ. ಇದರಿಂದ ಕಾರ್ತಿ ಚಿದಂಬರಂ ಬಂಧನ ಭೀತಿಯಲ್ಲಿದ್ದಾರೆ.
ನನ್ನ ಗೌಪ್ಯ ದಾಖಲೆಗಳನ್ನು ಸಿಬಿಐ ವಶಪಡಿಸಿಕೊಂಡಿದೆ ಎಂದು ಆರೋಪಿಸಿದ ಕಾರ್ತಿ ಚಿದಂಬರಂ!
ಕಾರ್ತಿ ಉರುಳಾಗುತ್ತಾ ವೀಸಾ ವಂಚನೆ ಪ್ರಕರಣ?
263 ಚೀನೀ ನಾಗರಿಕರಿಗೆ ವೀಸಾ ನೀಡಿದ್ದ ಪ್ರಕರಣದಲ್ಲಿ ಆರೋಪಿಯಾಗಿರುವ ಸಂಸದ ಕಾರ್ತಿ ಚಿದಂಬರಂ ಮೇಲಿನ ಕುಣಿಕೆ ಬಿಗಿಯಾಗುತ್ತಿದೆ. 2011ರಲ್ಲಿ ಕೇಂದ್ರದಲ್ಲಿ ಪಿ.ಚಿದಂಬರಂ ಅವರು ಗೃಹ ಸಚಿವರಾಗಿದ್ದ ಸಮಯದಲ್ಲಿ ಅಕ್ರಮವಾಗಿ ಚೀನಿ ಪ್ರಜೆಗಳಿಗೆ ವೀಸಾ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು.
ಈ ಕುರಿತು ಈಗಾಗಲೇ ಸಿಬಿಐ ಸತತ 9 ಗಂಟೆಗೂ ಹೆಚ್ಚು ಕಾಲ ಕಾರ್ತಿ ಚಿದಂಬರಂ ವಿಚಾರಣೆ ನಡೆಸಿದೆ. ಸಿಬಿಐ ಸೂಚನೆ ಮೇರೆಗೆ ಸಿಬಿಐ ಕಚೇರಿಗೆ ತೆರಳಿ ಪ್ರಕರಣ ಕುರಿತು ಸಿಬಿಐ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಆದರೆ ಈ ಪ್ರಕರಣ ನಕಲಿಯಾಗಿದ್ದು, ರಾಜಕೀಯ ಪ್ರೇರತವಾಗಿದೆ. ಯಾವುದೇ ಚೀನಿಯರಿಗೆ ವೀಸಾ ದೊರಕಲು ಅನುಕೂಲ ಮಾಡಿಕೊಟ್ಟಿಲ್ಲ’ ಎಂದು ಕಾರ್ತಿ ಚಿದಂಬರಂ ಹೇಳಿದ್ದಾರೆ.
ಎಫ್ಐಆರ್ ದಾಖಲಿಸಿದ ಜಾರಿ ನಿರ್ದೇಶನಾಲಯ
2011ರಲ್ಲಿ ಕೇಂದ್ರದಲ್ಲಿ ಪಿ.ಚಿದಂರಂ ಅವರು ಗೃಹ ಸಚಿವರಾಗಿದ್ದ ವೇಳೆ 263 ಚೀನಿ ಪ್ರಜೆಗಳಿಗೆ ಅಕ್ರಮ ವೀಸಾ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಎಫ್‌ಐಆರ್ ದಾಖಲಿಸಿದೆ. ಇದು ಅವರ ಮೇಲೆ ಹಾಕಲಾಗುತ್ತಿರುವ 3ನೇ ಎಫ್‌ಐಆರ್ ಆಗಿದೆ.
ದಾಳಿಯ ಬೆನ್ನಲ್ಲೇ ಕಾರ್ತಿ ಚಿದಂಬರಂ ಆಪ್ತ ಸ್ನೇಹಿತನನ್ನು ಬಂಧಿಸಿದ ಸಿಬಿಐ!
ಚೀನೀ ಪ್ರಜೆಗಳನ್ನು ವೇದಾಂತ ಗ್ರೂಪ್‌ನ ವಿದ್ಯುತ್ ಕಂಪನಿಯೊಂದು ಕೆಲಸಕ್ಕೆಂದು ನೇಮಿಸಿಕೊಳ್ಳಲು ಉದ್ದೇಶಿಸಿತ್ತು. ಆಗ ಅವರಿಗೆ ಅಕ್ರಮವಾಗಿ ವೀಸಾ ಕೊಡಿಸಲು ತಮ್ಮ ಆಪ್ತ ಎಸ್. ಭಾಸ್ಕರನ್ ಮೂಲಕ ಕಾರ್ತಿ ಚಿದಂಬರಂ ಅವರು 50 ಲಕ್ಷ ರು. ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಆಸ್ತಿಪಾಸ್ತಿ ಮೇಲೆ ಇ.ಡಿ. ದಾಳಿ ನಡೆಸಿತ್ತು.
ಕಾರ್ತಿ ಬಂಧಿಸುವುದಿದ್ದರೆ 3 ದಿನ ಮೊದ್ಲು ನೋಟಿಸ್ ಕೊಡಿ
ವೀಸಾ ಹಗರಣದ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರನ್ನು ಬಂಧಿಸಬೇಕಾದರೆ ಅದಕ್ಕೂ 3 ದಿನಗಳ ಮೊದಲು ನೋಟಿಸ್ ನೀಡಬೇಕು ಎಂದು ದೆಹಲಿ ನ್ಯಾಯಾಲಯ ಶುಕ್ರವಾರ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಸೂಚನೆ ನೀಡಿದೆ. ಕಾರ್ತಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸುವ ಸಂದರ್ಭದಲ್ಲಿ ಕೋರ್ಚ್ ಈ ನಿರ್ದೇಶನ ನೀಡಿದೆ. ಸಿಬಿಐ ಪ್ರಸ್ತುತ ಸ್ಥಿತಿಯನ್ನು ಗಮನಿಸಿ ಕಾರ್ತಿ ಅವರನ್ನು ಬಂಧಿಸಬೇಕಾದರೆ 48 ಗಂಟೆಯ ನೋಟಿಸ್ ನೀಡುವುದಾಗಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಕೋರ್ಚ್, ಪ್ರಸ್ತುತ ಆರೋಪಿಯು ವಿದೇಶದಲ್ಲಿದ್ದು ಭಾರತಕ್ಕೆ ಕಾಲಿಟ್ಟ16 ಗಂಟೆಗಳಲ್ಲಿ ತನಿಖೆಯಲ್ಲಿ ಭಾಗವಹಿಸಬೇಕಾಗಿದೆ. ಹೀಗಾಗಿ 3 ದಿನ ಮುನ್ನ ನೋಟಿಸ್ ನೀಡುವುದು ಅನಿವಾರ್ಯ ಎಂದು ಆದೇಶಿಸಿದೆ.