Covaxinನಲ್ಲಿ ಕರುವಿನ ಸೀರಂ? ಲಸಿಕೆ ತಯಾರಿಯಲ್ಲಿ ಇದರ ಬಳಕೆಯ ಸತ್ಯ ಹೀಗಿದೆ!

By Suvarna NewsFirst Published Jun 16, 2021, 3:30 PM IST
Highlights

* ಅನೇಕರಲ್ಲಿ ಆತಂಕ ಸೃಷ್ಟಿಸಿದೆ ಲಸಿಕೆ ಸಂಬಂಧಿತ ಸುದ್ದಿ

* ಲಸಿಕೆ ತಯಾರಿಯಲ್ಲಿ ಕರುವಿನ ಸೀರಂ ಬಳಸುತ್ತಾರಾ?

* ಸರ್ಕಾರ ಹೇಳಿದ್ದೇನು? ಹೇಗಾಗುತ್ತೆ ಪ್ರಯೋಗ?

ನವದೆಹಲಿ(ಜೂ.16): ಕೋವ್ಯಾಕ್ಸಿನ್ ಲಸಿಕೆಯಲ್ಲಿ ಕರುವಿನ ಸೀರಂ ಬಳಕೆ ಪ್ರಯೋಗದ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಆದರೆ ಇದು ಶುದ್ಧಸುಳ್ಳು. ಅಂತಿಮವಾಗಿ ತಯಾರಾಗುವ ಲಸಿಕೆಯಲ್ಲಿ ಕರುವಿನ ಸೀರಂ ಬಳಕೆ ಮಾಡುವುದಿಲ್ಲ ಎನ್ನಲಾಗಿದೆ. ಅಲ್ಲದೇ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯವೂ ಲಸಿಕೆಯಲ್ಲಿ ಕರುವಿನ ಸೀರಂ ಬಳಸಲಾಗುತ್ತದೆ ಎಂಬ ವಿಚಾರವನ್ನು ತಳ್ಳಿ ಹಾಕಿದೆ. 

ಕೋವ್ಯಾಕ್ಸಿನ್‌ ತುರ್ತು ಬಳಕೆಗೆ ಅಮೆರಿಕದಿಂದ ಅನುಮತಿ ನಕಾರ!

ಸತ್ಯವನ್ನು ತಿರುಚಲಾಗಿದೆ

ವಾಸ್ತವವಾಗಿ ಕರುವಿನ ಸೀರಂ ಕೇವಲ Vero Cells ತಯಾರಿಸಲು ಅಥವಾ ಅಭಿವೃದ್ಧಿಪಡಿಸಲು ಬಳಸಲಾಗುತ್ತದೆ. ವೆರೋ ಕೋಶಗಳ ಅಭಿವೃದ್ಧಿಗೆ ಜಾಗತಿಕವಾಗಿ ವಿವಿಧ ರೀತಿಯ ಹಸುವಿನ ತಳಿ ಅಥವಾ ಇತರ ಪ್ರಾಣಿಗಳ ಸೀರಂ ಬಳಸಲಾಗುತ್ತದೆ. ಎಲ್ಲಾ ರೀತಿಯ ಲಸಿಕೆಗಳಿಗೂ ಈ Vero Cells ಅಗತ್ಯವಾಗಿದೆ.

Vero Cellsgಗಳನ್ನು ವೈರಸ್‌ನಿಂದ ಇನ್ಫೆಕ್ಟ್ ಮಾಡಲಾಗುತ್ತದೆ

ವೆರೋ ಕೋಶಗಳ ಬೆಳೆದ ಬಳಿಕ ಅವುಗಳನ್ನು ನೀರು ಮತ್ತು ರಾಸಾಯನಿಕಗಳಿಂದ ತೊಳೆಯಲಾಗುತ್ತದೆ. ಇದನ್ನು ಬಫರ್ ಎನ್ನಲಾಗುತ್ತದೆ. ಇದಾದ ಬಳಿಕ ಇವುಗಳನ್ನು ಕೊರೋನಾ ವೈರಸ್‌ನಿಂದ ಇನ್ಫೆಕ್ಟ್ ಮಾಡಲಾಗುತ್ತದೆ. ವೈರಲ್ ಬೆಳವಣಿಗೆ ನಂತರ ವೆರೋ ಕೋಶಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಅತ್ತ ವೆರೋ ಕೋಶಗಳು ನಾಶವಾದ ಬೆನ್ನಲ್ಲೇ ವೈರಸ್ ಕೂಡಾ ನಾಶವಾಗುತ್ತದೆ ಹಾಗೂ ಶುದ್ಧಗೊಳ್ಳುತ್ತದೆ. ಈ ನಿಷ್ಕ್ರಿಯ ಅಥವಾ ಸತ್ತ ವೈರಸ್‌ನ್ನು ಲಸಿಕೆಯಲ್ಲಿ ಬಳಸಲಾಗುತ್ತದೆ. ಹೀಗಾಗಿ ಅಂತಿಮವಾಗಿ ತಯಾರಿಸಲಾಗುವ ಲಸಿಕೆಯಲ್ಲಿ ಕರುವಿನ ಸೀರಂ ಬಳಸಲಾಗುವುದಿಲ್ಲ. 

ಕೋವ್ಯಾ​ಕ್ಸಿನ್‌, ಕೋವಿ​ಶೀ​ಲ್ಡ್‌ ಪಡೆ​ದಿದ್ದ​ರೂ ​‘ಡೆಲ್ಟಾ’ ದಾಳಿ: ಏಮ್ಸ್‌ ವರ​ದಿ!

ಪೋಲಿಯೊ, ರೇಬೀಸ್ ಅಥವಾ ಇನ್ಫ್ಲುಯೆಂಜಾ ಲಸಿಕೆಗಳೂ ಹೀಗೇ ತಯಾರಾಗುವುದು

ಲಸಿಕೆಗಳ ಉತ್ಪಾದನೆಯಲ್ಲಿ ವೆರೋ ಕೋಶಗಳನ್ನು ಬಳಸಲಾಗುತ್ತದೆ. ಪೋಲಿಯೊ, ರೇಬೀಸ್ ಮತ್ತು ಇನ್ಫ್ಲುಯೆಂಜಾ ಲಸಿಕೆಗಳಲ್ಲಿ  ದಶಕಗಳಿಂದ ಇದೇ ತಂತ್ರಜ್ಞಾನ ಬಳಸಲಾಗುತ್ತದೆ.

click me!