ಭಾರತದ ಖ್ಯಾತ ವಸ್ತ್ರ ವಿನ್ಯಾಸಕಿ - ಆಸ್ಕರ್ ಪುರಸ್ಕೃತೆ ನಿಧನ

By Kannadaprabha NewsFirst Published Oct 16, 2020, 11:34 AM IST
Highlights

ಭಾರತದ ಖ್ಯಾತ ವಸ್ತ್ರ ವಿನ್ಯಾಸಕಿ ಹಾಗೂ ಮೊದಲ ಭಾರತೀಯ ಆಸ್ಕರ್ ಪುರಸ್ಕೃತೆ ನಿಧನರಾಗಿದ್ದಾರೆ

ಮುಂಬೈ (ಅ.16): ಖ್ಯಾತ ವಸ್ತ್ರ ವಿನ್ಯಾಸಕಿ ಹಾಗೂ ಭಾರತದ ಮೊದಲ ಆಸ್ಕರ್ ಪುರಸ್ಕೃತೆ ಭಾನು ಅಥೈಯಾ (91) ಗುರುವಾರ ನಿಧನರಾದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ನಿಧನದ ಸುದ್ದಿಯನ್ನು ಪುತ್ರಿ ರಾಧಿಕ ಗುಪ್ತಾ ಹಂಚಿಕೊಂಡಿದ್ದಾರೆ.

ದಕ್ಷಿಣ ಮುಂಬೈನಲ್ಲಿರುವ ಚಂದನವಾಡಿ ಚಿತಾಗಾರದಲ್ಲಿ ಅವರ ಅಂತಿಮ ವಿಧಿ ವಿಧಾನಗಳು ಮುಗಿದಿವೆ. 8 ವರ್ಷದ ಹಿಂದೆ ಬ್ರೇನ್ ಟ್ಯೂಮರ್‌ಗೆ ತುತ್ತಾಗಿದ್ದ ಅವರು, ಪಾರ್ಶ್ವವಾಯು  ಪೀಡಿತರಾಗಿ ಕಳೆದ ಮೂರು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು.

ಮುರಿದ ಕೈ, ದೊಡ್ಡ ಸನ್‌ಗ್ಲಾಸ್‌ ಧರಿಸಿ ಫಂಕ್ಷನ್‌ಗೆ ಬಂದ ಐಶ್ವರ್ಯಾ! ಕಾರಣ ಸಲ್ಮಾ‌ನಾ? ..

ಕೊಲ್ಹಾಪುರದಲ್ಲಿ ಜನಿಸಿದ್ದ ಅವರು, 1956ರಲ್ಲಿ ಗುರುದತ್ ಅವರ ಹಿಂದಿ ಸಿನಿಮಾ ಒಂದಕ್ಕೆ ವಸ್ತ್ರ ವಿನ್ಯಾಸ ಮಾಡುವ ಮೂಲಕ ತಮ್ಮ ವೃತ್ತಿ ಆರಂಭಿಸಿದ್ದರು. 1983ರಲ್ಲಿ ರಿಚರ್ಡ್ ಅಟೆನ್‌ಬರೋ ನಿರ್ದೇಶನದ ಗಾಂಧಿ ಸಿನಿಮಾದಲ್ಲಿನ ವಸ್ತ್ರವಿನ್ಯಾಸಕ್ಕಾಗಿ ಅವರಿಗೆ ಆಸ್ಕರ್ ಪುರಸ್ಕಾರ ಒಲಿದು ಬಂದಿತ್ತು. ನೂರಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿರುವ ಅವರಿಗೆ ಎರಡು ರಾಷ್ಟ್ರೀಯ ಪುರಸ್ಕಾರ ಕೂಡ ಲಭಿಸಿತ್ತು.

click me!