
ಪಾಣಿಪತ್ (ಅ.16): ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಒಂದೂವರೆ ವರ್ಷದಿಂದ ಶೌಚಾಲಯದಲ್ಲೇ ಕೂಡಿಟ್ಟಅಮಾನವೀಯ ಘಟನೆಯೊಂದು ಹರ್ಯಾಣದ ರಿಶಿಪುರ್‌ನಲ್ಲಿ ನಡೆದಿದೆ.
ಈ ಶೌಚಬಂಧನ ಕುರಿತು ಮಾಹಿತಿ ಪಡೆದ ಮಹಿಳಾ ರಕ್ಷಣಾ ಇಲಾಖೆಯ ಅಧಿಕಾರಿಗಳು ಮನೆ ಮೇಲೆ ದಾಳಿ ನಡೆಸಿದ ವಿಷಯ ಬೆಳಕಿಗೆ ಬಂದಿದೆ. 3 ಮಕ್ಕಳ ತಾಯಿಯಾಗಿರುವ ಪತ್ನಿ ಮಾನಸಿಕ ಅಸ್ವಸ್ಥೆಯಾದ ಕಾರಣ ಆಕೆಗೆ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಅದರಿಂದ ಏನೂ ಪ್ರಯೋಜವಾಗಲಿಲ್ಲ.
ಪಬ್‌ಜಿ ಫ್ರೆಂಡ್ಸ್ ಮಾಡಿದ ಪುಂಡಾಟ; ಗ್ಯಾಂಗ್‌ರೇಪ್‌ನಿಂದ ಅಪ್ರಾಪ್ತೆ ಗರ್ಭಿಣಿ ..
ಹೀಗಾಗಿ ಮನೆಯಲ್ಲಿ ಅಥವಾ ಮನೆ ಮುಂದೆ ಸುಮ್ಮನೇ ಕೂರದ ಹುಚ್ಚುಚ್ಚಾಗಿ ಆಡುತ್ತಿದ್ದ ಕಾರಣಕ್ಕೆ ಆಕೆಯನ್ನು ಬಾತ್‌ರೂಮ್‌ಗೆ ಸೀಮಿತಗೊಳಿಸಲಾಗಿತ್ತು ಎಂದು ಪತಿ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದಾನೆ. ಆದರೆ, ಮಹಿಳೆ ಮಾನಸಿಕ ಅಸ್ವಸ್ಥೆ ರೀತಿ ಕಂಡುಬರುತ್ತಿಲ್ಲ. ಆಕೆಗೆ ಸರಿಯಾದ ಊಟ ಮತ್ತು ನೀರನ್ನೂ ನೀಡದೇ ತುಂಬಾ ತುಚ್ಛವಾಗಿ ನಡೆಸಿಕೊಂಡಿರುವುದು ಕಂಡುಬಂದಿದೆ.
ಶೌಚ ಬಂಧನದಿಂದ ರಕ್ಷಿಸಿ ಸ್ನಾನ ಮಾಡಿಸಿದ ಬಳಿಕ ಸಂತ್ರಸ್ತೆ 8 ಚಪಾತಿ ಸೇವಿಸಿದರು. ಸದ್ಯಕ್ಕೆ ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಇದೀಗ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ರಜನಿ ಗುಪ್ತಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ