ಕೊರೋನಾ ಗಣನೀಯವಾಗಿ ಏರಿಕೆಯಾಗುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಇದೀಗ ಲಾಕ್‌ಡೌನ್ ಆತಂಕ ಹೆಚ್ಚಾಗುತ್ತಿದೆ. ಇತ್ತ ದೆಹಲಿ ಸಿಎಂ ಕೇಜ್ರಿವಾಲ್‌ಗೆ 2ನೇ ಬಾರಿ ಕೊರೋನಾ ದೃಢಪಟ್ಟಿದೆ. ಮತ್ತಷ್ಟು ಏರಿಕೆಯಾದರೆ ಶಾಲೆ ಬಂದ್ ಅನ್ನೋ ಭೀತಿ ಶುರುವಾಗಿದೆ. ಕರ್ನಾಟಕ ಕ್ಯಾಬಿನೆಟ್‌ನಲ್ಲಿ ಬದಲಾವಣೆ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಟ್ರೋಲ್‌ಗೆ ತಿರುಗೇಟು ನೀಡಿದ ನಟ ಅರ್ಜುನ್ ಕಪೂರ್, ಹಿಂದೂ ದೇಗುಲ ಹಿಂದೂಗಳಿಗೆ ನೀಡಿದರೆ ಉರಿ ಯಾಕೆ ಎಂದ ಶ್ರೀನಿವಾಸ ಪೂಜಾರಿ ಸೇರಿದಂತೆ ಜನವರಿ 4ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
Karnataka Cabinet: ಸಚಿವ ಸ್ಥಾನ ನನಗೆ ಖಚಿತ ಎಂದ ಮುಖಂಡ : ಬಿಜೆಪಿ ಪಾಳೆಯದಲ್ಲಿ ಸಂಚಲನ
undefined
ದಾವಣಗೆರೆ (Davanagere) ಜಿಲ್ಲಾ ಮಂತ್ರಿ ಸ್ಥಾನ ನನ್ನನ್ನು ಬಿಟ್ಟು, ಇನ್ಯಾರಿಗೆ ಕೊಡುತ್ತಾರೆ ಹೇಳಿ ಎನ್ನುವ ಮೂಲಕ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ (SA Ravindranath) ಸಂಚಲನ ಮೂಡಿಸಿದ್ದಾರೆ.
Covid Crisis: ದೆಹಲಿ ಸಿಎಂಗೆ ಕೊರೋನಾ, ಡೆಹ್ರಾಡೂನ್ ಸಮಾವೇಶದಲ್ಲಿ ಭಾಗಿಯಾಗಿದ್ದ ಕೇಜ್ರಿವಾಲ್!
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಕೊರೋನಾ ಸೋಂಕು ತಗುಲಿದೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಸಿಎಂ ಕೇಜ್ರಿವಾಲ್ ಮನೆಯಲ್ಲಿ ಐಸೋಲೇಟ್ ಆಗಿದ್ದಾರೆ.
Covid 19 Threat: ಕೊರೋನಾ ಕೇಸ್ ಏರಿಕೆಯಾದರೆ 1-2 ವಾರದಲ್ಲಿ ಶಾಲೆ ಬಂದ್?
ರಾಜ್ಯದಲ್ಲಿ ಕೆಲ ವಾರಗಳಿಂದ ಕೋವಿಡ್ 19 ಮತ್ತು ಒಮಿಕ್ರೋನ್ (Omicron) ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು ಇದೇ ವೇಗದಲ್ಲಿ ಮುಂದುವರೆದರೆ ಒಂದೆರಡು ವಾರದಲ್ಲಿ ಶಾಲೆಗಳ (School) ಬಂದ್ ಮಾಡುವ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
Arjun Kapoor About Trolls: ಟ್ರೋಲ್ ಮಾಡಿದವ್ರೇ ನನ್ ಜೊತೆ ಸೆಲ್ಫಿಗೆ ಸಾಯ್ತಾರೆ ಎಂದ ನಟ
ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಮಧ್ಯೆ ಇರುವ ವಯಸ್ಸಿನ ಅಂತರ ಎಲ್ಲರಿಗೂ ಗೊತ್ತು. ಆದರೆ ಪ್ರತಿಬಾರಿ ಈ ಜೋಡಿ ವಯಸ್ಸಿನ ಅಂತರಕ್ಕಾಗಿಯೇ ಟ್ರೋಲ್ ಆಗಿದ್ದಾರೆ. ಇಂತಹ ಟ್ರೋಲ್ ಬಗ್ಗೆ ಅರ್ಜುನ್ ಹೇಳೋದಿಷ್ಟು..!
Karnataka Temples : ಪ್ರತಿಪಕ್ಷಗಳಿಗೆ ಏಕೆ ಗಾಬರಿ : ಕೋಟಾ ಪೂಜಾರಿ
ದೇವಾಲಯ (Temple) ನಿರ್ವಹಣೆಯನ್ನು ಧರ್ಮದವರಿಗೆ ನೀಡುವ ವಿಚಾರದಲ್ಲಿ ಪ್ರತಿಪಕ್ಷಗಳು ಗಾಬರಿ ಯಾಕೆ ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ (Shrinivasa Poojary) ಹೇಳಿದ್ದಾರೆ. ಬೇರೆ ಧರ್ಮಗಳ ದೇವಾಲಯವನ್ನು ಅವರೇ ನಿರ್ವಹಣೆ ಮಾಡುವಾಗ ಹಿಂದೂ (Hindu) ಧರ್ಮದ ದೇವಾಲಯವನ್ನು ನೀಡುವುದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
RBI Guidelines: ಇಂಟರ್ನೆಟ್ ಇಲ್ಲದ ಮೊಬೈಲ್ ಬಳಸಿ ದಿನಕ್ಕೆ 2000 ರು. ಕಳಿಸಿ!
ಅಂತರ್ಜಾಲ ಸಂಪರ್ಕ ಇಲ್ಲದೆಡೆ ಫೀಚರ್ ಫೋನ್‌ಗಳ ಮೂಲಕವೇ ಆನ್‌ಲೈನ್ ಹಣ ವರ್ಗಾವಣೆಗೆ ಅವಕಾಶ ಕಲ್ಪಿಸುವ ಆಫ್‌ಲೈನ್ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೆ ಭಾರತೀಯ ರಿಸವ್‌ರ್ ಬ್ಯಾಂಕ್ (ಆರ್‌ಬಿಐ) ಸೋಮವಾರ ಅನುಮೋದನೆ ನೀಡಿದೆ. ಯೋಜನೆ ಜಾರಿ ಸಂಬಂಧ ಅದು ಹಲವು ಅಂಶಗಳನ್ನು ಒಳಗೊಂಡ ಮಾರ್ಗಸೂಚಿ ಬಿಡುಗಡೆ ಮಾಡಿದೆ.
Sri Lanka on the verge of Bankrupt : ತರಕಾರಿ ಮಾರ್ಕೆಟ್ ಅಲ್ಲಿ ಗ್ರಾಮ್ ಲೆಕ್ಕದಲ್ಲಿ ಮಾರಾಟ!
ಕೋವಿಡ್-19 ಸಾಂಕ್ರಾಮಿಕ ವೈರಸ್ (Covid-19 Pandemic) ವಿರುದ್ಧದ ಹೋರಾಟ, ಪ್ರವಾಸೋದ್ಯಮದ ಕುಸಿತ, ಸರ್ಕಾರಿ ವೆಚ್ಚಗಳಲ್ಲಿನ ಏರಿಕೆ, ತೆರಿಗೆಯಲ್ಲಿ ಕಡಿತ ಮತ್ತು ವಿದೇಶಗಳಿಂದ ಪಡೆದುಕೊಂಡಿರುವ ಅತಿಯಾದ ಸಾಲ (Foreign Debt ) ಈ ಎಲ್ಲವುಗಳಿಂದ ಸಂಕಷ್ಟಕ್ಕೆ ಸಿಲುಕಿರುವ ದ್ವೀಪರಾಷ್ಟ್ರ ಶ್ರೀಲಂಕಾ (Sri Lanka) ಈ ವರ್ಷ ದಿವಾಳಿಯಾಗೋದು ಖಚಿತ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ
ದೇಶದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಮೋಟಾರು ವಾಹನ ನಿಯಮದಲ್ಲಿ ಹಲವು ತಿದ್ದುಪಡಿ ಮಾಡಲಾಗಿದೆ. ಇದೀಗ ಭಾರತದಲ್ಲಿ ಕಾರಿನ ಸುರಕ್ಷತೆಗೆ(Car Seafety) ಮೊದಲ ಆದ್ಯತೆ ನೀಡಲಾಗುತ್ತಿದೆ. ಕಾರಿನ ಕ್ರಾಶ್ ಟೆಸ್ಟ್(Crash test) ರೇಟಿಂಗ್ ಪ್ರಕಟಿಸುವುದು ಕಡ್ಡಾಯವಾಗಿದೆ.
Ind vs SA, 2nd Test: ಶಾರ್ದೂಲ್ ಠಾಕೂರ್ ಬಿರುಗಾಳಿ, ಹರಿಣಗಳ 4 ವಿಕೆಟ್ ಪತನ..!
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ವೇಗಿ ಶಾರ್ದೂಲ್ ಠಾಕೂರ್ ಮಾರಕ ದಾಳಿಗೆ ಆತಿಥೇಯ ಹರಿಣಗಳ ಪಡೆ ತತ್ತರಿಸಿ ಹೋಗಿದೆ. ಎರಡನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ ದಕ್ಷಿಣ ಆಫ್ರಿಕಾ ತಂಡವು 4 ವಿಕೆಟ್ ಕಳೆದುಕೊಂಡು 102 ರನ್ ಬಾರಿಸಿದ್ದು, ಇನ್ನೂ 100 ರನ್‌ಗಳ ಹಿನ್ನೆಡೆಯಲ್ಲಿದೆ. ಎರಡನೇ ದಿನದಾಟದಲ್ಲಿ ಶಾರ್ದೂಲ್ ಠಾಕೂರ್ 3 ವಿಕೆಟ್ ಕಬಳಿಸಿ ಮಿಂಚಿದ್ದಾರೆ.